ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು: ಭಾಗ– 58 786. 49 ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ ಶಿವಾನಂದ ಆರಂಭದಿಂದ 18ನೇ ಸ್ಥಾನದಲ್ಲಿದ್ದಾನೆ ಹಾಗಾದರೆ, ಇನ್ನೊಂದು ಬದಿಯಿಂದ ಶಿವಾನಂದ ಎಷ್ಟನೇ ಸ್ಥಾನದಲ್ಲಿದ್ದಾನೆ? ಎ) 18→ಬಿ) 19 ಸಿ) 31→ಡಿ) 32 787. 4, 16, 36, 64, 100___ ಸರಣಿ ಪೂರ್ಣಗೊಳಿಸಿರಿ. ಎ) 122→ಬಿ) 144 ಸಿ) 166→ಡಿ) 188 788. :::: ...... ...... ಎ) →ಬಿ) ಸಿ) →ಡಿ) 789. ಒಂದು ತಿಂಗಳಿನ 3ನೇ ಸೋಮವಾರದ ನಂತರದ ದಿನ 16ನೇ ತಾರೀಖು ಆದರೆ, ಆ ತಿಂಗಳಿನ 5ನೇ ಸೋಮವಾರ ಎಷ್ಟನೇ ತಾರೀಖು ಆಗುತ್ತದೆ? ಎ) 29→ಬಿ) 28 ಸಿ) 27→ಡಿ) 30 790. ಸೂರ್ಯನ ಹೊರ ಪದರ ಯಾವುದು? ಎ) ಲಿಥೋಸ್ಪಿಯರ್→ಬಿ) ಕೊರೊನಾ ಸಿ) ದ್ಯುತಿಗೋಳ→ಡಿ) ವರ್ಣತಂತು 791. ಸಾಮಾನ್ಯವಾಗಿ ಆಮ್ಲಗಳು ಈ ಗುಣ ಹೊಂದಿವೆ ಎ) ಕಹಿ ರುಚಿಯನ್ನು ಹೊಂದಿವೆ ಬಿ) ಹುಳಿ ರುಚಿಯನ್ನು ಹೊಂದಿವೆ ಸಿ) ಸಿಹಿ ರುಚಿಯನ್ನು ಹೊಂದಿವೆ ಡಿ) ಯಾವ ರುಚಿಯನ್ನು ಹೊಂದಿರುವುದಿಲ್ಲ 792. ಸೋಡಿಯಂ ಕಾರ್ಬೊನೇಟ್‌ನ ಸಾಮಾನ್ಯ ಹೆಸರು? ಎ) ವಾಷಿಂಗ್ ಸೋಡಾ→ಬಿ) ಅಡುಗೆ ಸೋಡಾ ಸಿ) ಅಡುಗೆ ಉಪ್ಪು→ಡಿ) ಸುಣ್ಣದ ಕಲ್ಲು 793. ಒಂದೇ ಸಂಖ್ಯೆಯ ಪ್ರೋಟಾನು, ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳಿಗೆ ಏನೆನ್ನುತ್ತಾರೆ? ಎ) ಸಮಸ್ಥಾನಿಗಳು→ಬಿ) ಸಮಭಾರಿ ರೇಖೆಗಳು ಸಿ) ಸಮಸತ್ವಗಳು→ಡಿ) ಸಮಾಂಗಿಗಳು 794. ಈ ಕೆಳಗಿನ ಯಾವ ಮಾಧ್ಯಮದಲ್ಲಿ ಶಬ್ದದ ವೇಗ ಅಧಿಕವಾಗಿರುತ್ತದೆ? ಎ) ಗಾಜು→ಬಿ) ಕಬ್ಬಿಣ ಸಿ) ಗಾಳಿ→ಡಿ) ನೀರು 795. ಭಾರತ ಸಂವಿಧಾನದಲ್ಲಿ ಚುನಾವಣಾ ಆಯೋಗಗಳ ಕುರಿತು ಈ ಕೆಳಗಿನ ಯಾವ ಭಾಗದಲ್ಲಿ ವಿವರಿಸಲಾಗಿದೆ? ಎ) 10ನೇ ಭಾಗ→ಬಿ) 15ನೇ ಭಾಗ ಸಿ) 18ನೇ ಭಾಗ→ಡಿ) 20ನೇ ಭಾಗ 796. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಾಗ ಭಾರತದ ಪ್ರಧಾನಿ ಆಗಿದ್ದವರು ಯಾರು? ಎ) ಇಂದಿರಾ ಗಾಂಧಿ→ಬಿ) ರಾಜೀವ್ ಗಾಂಧಿ ಸಿ) ವಿ.ಪಿ.ಸಿಂಗ್‌→ಡಿ) ಮೊರಾರ್ಜಿ ದೇಸಾಯಿ 797. ಕೇಂದ್ರ- ರಾಜ್ಯಗಳ ನಡುವೆ ಶಾಸನೀಯ ಅಧಿಕಾರವನ್ನು ಈ ಕೆಳಗಿನ ಯಾವ ಕಾಯ್ದೆ ವಿಭಜಿಸಿದೆ? ಎ) ಭಾರತ ಸರ್ಕಾರ ಕಾಯ್ದೆ, 1935 ಬಿ) ಭಾರತ ಸರ್ಕಾರ ಕಾಯ್ದೆ, 1919 ಸಿ) ಭಾರತ ಸರ್ಕಾರ ಕಾಯ್ದೆ, 1892 ಡಿ) ಭಾರತ ಸರ್ಕಾರ ಕಾಯ್ದೆ, 1861 798. ಈ ಕೆಳಗಿನ ಯಾವುದು ದೇಶೀಯ ಸಾಹಿತ್ಯ ಕೃತಿ? ಎ) ಗಾಥಾಸಪ್ತಶತಿ→ಬಿ) ರಾಜತರಂಗಿಣಿ ಸಿ) ಪೃಥ್ವಿರಾಜ ರಾಸೋ→ಡಿ) ಇಂಡಿಕಾ 799. ವೇದಗಳು ಪ್ರಮುಖವಾಗಿ ಇವುಗಳ ಸಂಗ್ರಹವಾಗಿವೆ ಎ) ಪ್ರಕೃತಿ ಆರಾಧನೆ ಬಿ) ಯಾಗ-ಯಜ್ಞಾದಿಗಳು ಸಿ) ಮಾಟವಿದ್ಯೆ ಸಂಕೇತಗಳು: ಎ) ಎ ಮಾತ್ರ ಸರಿ→ಬಿ) ಎ ಮತ್ತು ಸಿ ಸರಿ ಸಿ) ಬಿ ಮಾತ್ರ ಸರಿ→ಡಿ) ಮೇಲಿನ ಎಲ್ಲವೂ ಸರಿ 800. ಬ್ಯಾಬಿಲೋನಿಯಾದ ತೂಗು ಉದ್ಯಾನವನ್ನು ಯಾವ ನದಿ ದಡದ ಮೇಲೆ ನಿರ್ಮಿಸಲಾಗಿತ್ತು? ಎ) ಯುಫ್ರೆಟಿಸ್→ಬಿ) ಮೆಕಾಂಗ್ ಸಿ) ವೋಲ್ಗಾ→ಡಿ) ಡ್ಯಾನ್ಯೂಬ್ ***** ಭಾಗ 57ರ ಉತ್ತರಗಳು: 771. ಡಿ, 772. ಸಿ, 773. ಎ, 774. ಬಿ, 775. ಡಿ, 776. ಎ, 777. ಡಿ, 778. ಎ, 779. ಸಿ, 780. ಸಿ, 781. ಎ, 782. ಎ, 783. ಸಿ, 784. ಎ, 785. ಎ (ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.