ಕರ್ನಾಟಕ ಪೊಲೀಸ್‌ | ಮೂಲ ವೇತನ ₹ 18,600: ಅನುಯಾಯಿ ಹುದ್ದೆಗಳಿಗೆ ಅರ್ಜಿ ಕರ್ನಾಟಕ ಸರ್ಕಾರದ ಪೊಲೀಸ್‌ ಇಲಾಖೆಯ ರಾಜ್ಯ ಮೀಸಲು ಪೊಲೀಸ್‌ ಪಡೆಗಳಲ್ಲಿ ಖಾಲಿ ಇರುವ ಅನುಯಾಯಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಭರ್ತಿ ಮಾಡಬೇಕು. ಹುದ್ದೆಗಳ ಸಂಖ್ಯೆ:250 ವಿದ್ಯಾರ್ಹತೆ: ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉರ್ತೀಣರಾಗಿರಬೇಕು. ವೇತನ ಶ್ರೇಣಿ : ಮೂಲ ವೇತನ ₹ 18,600 ಇರಲಿದೆ. ಮಾಸಿಕ ವೇತನದಲ್ಲಿ ಇತರೆ ಭತ್ಯೆಗಳು ಸೇರಿವೆ. ವಯಸ್ಸು: 18ರಿಂದ 30 ವರ್ಷದೊಳಗಿನವರಾಗಿರಬೇಕು. ವಯೋಮಿತಿ:ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ( ದಿನಾಂಕ 30-08-1991 ರಿಂದ 30-08-2003 ರ ನಡುವೆ ಜನಿಸಿರಬೇಕು.). ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಇದನ್ನೂ ಓದಿ:ಡಿಪ್ಲೊಮಾ ವಿದ್ಯಾರ್ಹತೆ | ವಿಕ್ರಮ್ ಸಾರಾಬಾಯಿ ಕೇಂದ್ರ: 158 ಹುದ್ದೆಗಳಿಗೆ ಅರ್ಜಿ ಆಯ್ಕೆ ಪ್ರಕ್ರಿಯೆ: ದೈಹಿಕ ಹಾಗೂ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ನೋಡಬಹುದು. ಅರ್ಜಿ ಶುಲ್ಕ:ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ₹ 250, ಎಸ್‌ಸಿ, ಎಸ್‌ಟಿ, ಕೆಟಗರಿ–1ರ ಅಭ್ಯರ್ಥಿಗಳಿಗೆ ₹100 ಶುಲ್ಕ ಇರಲಿದೆ. ಇದನ್ನೂ ಓದಿ:ಮೂಲ ವೇತನ ₹25,500 | : 115 ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸಲು ಕೊನೆಯ ದಿನ: 30-08-2021 ಹೆಚ್ಚಿನ ಮಾಹಿತಿಗೆ:://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.