ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳು ತಾತ್ಕಾಲಿಕ ಹುದ್ದೆಗಳಾಗಿವೆ. ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳ ಸಂಖ್ಯೆ: 23 ಹುದ್ದೆಗಳ ವಿವರ: ಇಂಗ್ಲಿಷ್,ಹಿಂದಿ,ಸಂಸ್ಕೃತ,ತೆಲುಗು,ಉರ್ದು,ಇತಿಹಾಸ,ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ,ಶಿಕ್ಷಣಶಾಸ್ತ್ರ,ಭೌತಶಾಸ್ತ್ರಸೂಕ್ಷ್ಮಜೀವಾಣುಶಾಸ್ತ್ರ, ಬಯೋಟೆಕ್ನಾಲಜಿ, ಪ್ರಾಣಿಶಾಸ್ತ್ರ,ಗಣಿತಶಾಸ್ತ್ರ,ಸಸ್ಯಶಾಸ್ತ್ರ ಸೇರಿದಂತೆ 23 ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದು. ವಿದ್ಯಾರ್ಹತೆ : ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎನ್‌ಇಟಿ / ಕೆಎಸ್‌ಇಟಿ / ಪಿಹೆಚ್‌ಡಿ ಯಾವುದಾದರೊಂದು ಅರ್ಹತೆ ಪಡೆದಿರಬೇಕು. ಯುಜಿಸಿ-2018 ರ ಮಾರ್ಗಸೂಚಿ ಅನುಸಾರ ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. ಸಂದರ್ಶನ: 10-08-2021 ರಿಂದ 13-08-2021 ರವರೆಗೆ ಸಂದರ್ಶನ ಇರಲಿದೆ.ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅದರ 5 ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್‌ಸೈಟ್‌ ನೋಡುವುದು. ವೆಬ್‌ಸೈಟ್‌:://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.