339 ಅರಣ್ಯ ರಕ್ಷಕ ಹುದ್ದೆಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ದಿನಾಂಕ ಪ್ರಕಟ ಕರ್ನಾಟಕ ಅರಣ್ಯ ಇಲಾಖೆಯು339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಮೆರಿಟ್‌ ಲಿಸ್ಟ್‌ ತಯಾರಿಸಿರುವ ಇಲಾಖೆಯು ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಕರೆದಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆಗೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಓದಿ:ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು ಸೆಪ್ಟೆಂಬರ್‌27 ರಿಂದ ಅಕ್ಟೋಬರ್‌ 01 ರವರೆಗೆ ದೈಹಿಕ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕವನ್ನು ಅರಣ್ಯ ಇಲಾಖೆ ಪ್ರಕಟಿಸಿದೆ. ಚಿಕ್ಕಮಗಳೂರು, ಚಾಮರಾಜನಗರ, ಬಳ್ಳಾರಿ, ಧಾರವಾಡ, ಹಾಸನ, ಮಂಗಳೂರು, ಮೈಸೂರು, ಬೆಳಗಾವಿ, ಬೆಂಗಳೂರು, ಶಿವಮೊಗ್ಗದಲ್ಲಿ ದೈಹಿಕ ಪರೀಕ್ಷೆಯನ್ನು ನಡೆಸಲಾಗುವುದು. ಓದಿ: 2021: ಎಸ್‌ಬಿಐನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.