ಮಾಸಿಕ ವೇತನ ₹25,000 | ಸಹಕಾರ ಬ್ಯಾಂಕ್‌: 100 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಮಹಾರಾಷ್ಟ್ರ ರಾಜ್ಯದ ಅಕೊಲಾ ಸಹಕಾರ ಬ್ಯಾಂಕ್‌ನಲ್ಲಿ ಖಾಲಿ ಇರುವ ಕಿರಿಯ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನುಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 100 ವಿದ್ಯಾರ್ಹತೆ :ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯಗಳಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೇತನ: ತರಬೇತಿ ಅವಧಿಯಲ್ಲಿ ಮಾಸಿಕ ₹ 10 ಸಾವಿರ ವೇತನ ನೀಡಲಾಗುವುದು. ತರಬೇತಿಯಲ್ಲಿ ಯಶಸ್ವಿಯಾದವರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಗ ಮಾಸಿಕ ₹25 ಸಾವಿರ ಸೇರಿದಂತೆ ಇತರೆ ಭತ್ಯೆಗಳನ್ನು ನೀಡಲಾಗುವುದು. ವಯಸ್ಸು:ಕನಿಷ್ಠ 21 ವರ್ಷ ತುಂಬಿರಬೇಕು, ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ: ಅಂಗವಿಕಲರಿಗೆ 10 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ನೇಮಕಾತಿ: ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆಯ ಮೂಲಕ ನಡೆಯಲಿದೆ. ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳ ಮೆರೀಟ್‌ ಲಿಸ್ಟ್‌ ತಯಾರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಓದಿ: 2021: ಎಸ್‌ಬಿಐನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಳಿಗೆ ಬ್ಯಾಂಕಿನ ವೆಬ್‌ಸೈಟ್‌ ನೋಡಬಹುದು. ಅರ್ಜಿ ಸಲ್ಲಿಕೆ ಕೊನೆ ದಿನಾಂಕ:04-09-2021 ವೆಬ್‌ಸೈಟ್‌:://../adccbjcaug21 ಓದಿ:ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.