ಭಾರತೀಯ ಅಂಚೆ ಇಲಾಖೆ: 221 ಪೋಸ್ಟ್‌ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ ಭಾರತೀಯ ಅಂಚೆ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳನ್ನು ಕ್ರೀಡಾಕೋಟದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಅರ್ಚರಿ, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಶೂಟಿಂಗ್, ಕುಸ್ತಿ, ವಾಲಿಬಾಲ್, ಟೆನ್ನಿಸ್, ಚೆಸ್, ಹಾಕಿ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುಆನ್‌ಲೈನ್‌ ಮೂಲಕವೇ ಅರ್ಜಿಗಳನ್ನುಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 221 ಹುದ್ದೆಗಳು:ಪೋಸ್ಟ್‌ಮ್ಯಾನ್,ಸಾರ್ಟಿಂಗ್ ಅಸಿಸ್ಟೆಂಟ್‌, ಎಂಟಿಎಸ್‌ ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಕಂಪ್ಯೂಟರ್‌ ಶಿಕ್ಷಣದ ಸರ್ಟಿಫಿಕೇಟ್‌ ಪಡೆದಿರಬೇಕು. ವೇತನ ಶ್ರೇಣಿ: ₹ 21,700- ₹ 69,100 (ಇತರೆ ಭತ್ಯೆಗಳು ಸೇರಿ) ವಯಸ್ಸು: ಕನಿಷ್ಠ 18 ವರ್ಷಗಳು, ಗರಿಷ್ಠ 27 ವರ್ಷಗಳ ವಯೋಮಿತಿಯಲ್ಲಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಆದಾಗ್ಯೂ ಸರ್ಕಾರಿ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು. ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗೆ ಅಂಚೆ ಇಲಾಕೆಯ ವೆಬ್‌ಸೈಟ್ ನೋಡುವುದು. ಅರ್ಜಿ ಸಲ್ಲಿಕೆ ಕೊನೆ ದಿನಾಂಕ:ನವೆಂಬರ್ 12, 2021 ವೆಬ್‌ಸೈಟ್:://.../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.