ಮೂಲ ವೇತನ ₹ 35 ಸಾವಿರ: ಬಿಇಎಲ್‌ನಲ್ಲಿ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) 2021ನೇ ಸಾಲಿನ ನೇಮಕಾತಿ ಕುರಿತಂತೆ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಹೊರಡಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳು: ಪ್ರಾಜೆಕ್ಟ್ ಎಂಜಿನಿಯರ್‌ ಹುದ್ದೆಗಳ ಸಂಖ್ಯೆ: 36 ಸ್ಥಳ: ಬೆಂಗಳೂರು ಮತ್ತು ಇತರೆ ಕಡೆ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ, ಬಿ.ಟೆಕ್‌, ಎಂಬಿಎ, ಪಿಜಿ ಡಿಪ್ಲೊಮಾ, ಬಿ. ಆರ್ಕ್‌ ಪದವಿ ಪಡೆದಿರಬೇಕು. ವೇತನ: ₹35 ಸಾವಿರ ಮೂಲ ವೇತನ ಸಿಗಲಿದೆ. ವಯೋಮಿತಿ: ಪ್ರಾಜೆಕ್ಟ್ ಎಂಜಿನಿಯರ್‌ಗೆ 28 ವರ್ಷ ಮೀರಿರಬಾರದು . ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ ಇದೆ. ಆಯ್ಕೆ ಪ್ರಕ್ರಿಯೆ: ಪದವಿ ಅಂತಿಮ ವರ್ಷದ ಅಂಕಗಳ ಸರಾಸರಿ ಹಾಗೂ ವೈಯಕ್ತಿಕ ಸಂದರ್ಶನ. ಅರ್ಜಿ ಶುಲ್ಕ: ಪ್ರಾಜೆಕ್ಟ್ ಎಂಜಿನಿಯರ್‌ ಹುದ್ದೆಯ ಒಬಿಸಿ ಅಭ್ಯರ್ಥಿಗಳಿಗೆ ₹ 500 ಇದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 26, 2021 ಹೆಚ್ಚಿನ ಮಾಹಿತಿಗೆ: ://-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.