ಕಂದಾಯ ಇಲಾಖೆ: , , . ಪಾಸ್‌; 3000 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಬೆಂಗಳೂರು: ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲು 3000 ಭೂಮಾಪಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನೇಮಕಾತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿ ನಂತರ ತಡೆ ಹಿಡಿದಿತ್ತು. ಇದೀಗ ಮತ್ತೆ ನೇಮಕಾತಿಗೆ ಚಾಲನೆ ನೀಡಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ (... ) ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಭೂಮಾಪಕ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ ತಿಳಿಸಿದೆ. ವಿದ್ಯಾರ್ಹತೆ: ಪಿಯುಸಿ (ವಿಜ್ಞಾನ ನಿಕಾಯ)ಯಲ್ಲಿ ಗಣಿತದಲ್ಲಿ ಶೇ 60 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಬಿ.ಇ, ಅಥವಾ ಸರ್ವೇ ಟ್ರೇಡ್‌ನಲ್ಲಿ ಐಟಿಐ, ಡಿಪ್ಲೋಮಾ ಪಡೆದಿರಬೇಕು. ವಯಸ್ಸು: ಕನಿಷ್ಠ 18, ಗರಿಷ್ಠ 65 ವರ್ಷಗಳು ಅರ್ಜಿ ಶುಲ್ಕ: ಅಭ್ಯರ್ಥಿಗಳು ನಾಡ ಕಚೇರಿಗಳಲ್ಲಿನ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ್‌ ನೀಡಿ ₹ 1000 ಶುಲ್ಕ ಪಾವತಿಸಿ, ವಿಶಿಷ್ಟ ಅರ್ಜಿ ಸಂಖ್ಯೆ ಹೊಂದಿರುವ ಸ್ವೀಕೃತಿ ಪತ್ರ ಪಡೆಯಬೇಕು, ಈ ಸಂಖ್ಯೆ ಇಲ್ಲದಿದ್ದರೆ ಆನ್‌ಲೈನ್‌ ಅರ್ಜಿ ತೆರೆಯುವುದಿಲ್ಲ. ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯ ವಿವರಗಳನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಓದಿ:,, ಪಾಸ್‌ | ವೇತನ ₹25,000: ESICಯಲ್ಲಿ 3847 ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸುವ ಕಡೆ ದಿನಾಂಕ: 21–01–2022 ಅಧಿಸೂಚನೆ ಲಿಂಕ್‌:://.../service201//%20NOTIFICATION-%2001-12-2021. ವೆಬ್‌ಸೈಟ್‌: ... ಓದಿ:ವೇತನ ₹21,700 | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 641 ಹುದ್ದೆಗಳಿಗೆ ಅರ್ಜಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.