ಅರಣ್ಯ ರಕ್ಷಕ ಹುದ್ದೆಗಳ ಪರಿಷ್ಕೃತ ಕೀ ಉತ್ತರಗಳು ಪ್ರಕಟ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇದ್ದ ಅರಣ್ಯ ರಕ್ಷಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ಸರಿ ಉತ್ತರಗಳನ್ನು ಇಲಾಖೆಯು ಬಿಡುಗಡೆಮಾಡಿದೆ. ಅರಣ್ಯ ರಕ್ಷಕ ಹುದ್ದೆಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಕೀ ಉತ್ತರಗಳನ್ನು ನೋಡಬಹುದು. ಒಟ್ಟು 339 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ 11 ಸ್ಥಳಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯ ಸರಿ ಉತ್ತರಗಳನ್ನು ಕೆಲ ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಈಗ ಪರಿಷ್ಕೃತ ಉತ್ತರಗಳನ್ನು ಪ್ರಕಟಿಸಲಾಗಿದೆ. ಸರಿ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿದರೂ ಉತ್ತರಗಳನ್ನು ಪರೀಕ್ಷಿಸಬಹುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ:ವೇತನ ₹21,700 | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 641 ಹುದ್ದೆಗಳಿಗೆ ಅರ್ಜಿ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಇಲಾಖೆಯ ಈ ಕೆಳಗಿನ ವೆಬ್‌ವಿಳಾಸವನ್ನು ನೋಡನಹುದು. ವೆಬ್‌ಸೈಟ್‌: ://. ಇದನ್ನೂ ಓದಿ:ಬೆಂಗಳೂರು ಮೆಟ್ರೊ ರೈಲು: ಸ್ಟೇಷನ್‌ ಕಂಟ್ರೋಲರ್‌ ಹುದ್ದೆಗಳಿಗೆ ಅರ್ಜಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.