ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಪ್ರಶ್ನೋತ್ತರಗಳು 1) ಇತ್ತೀಚೆಗೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ತೆಗೆದು ಹಾಕಲಾಗಿದೆ. ಈ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಕಾರ್ಯಾಲಯ ಎಲ್ಲಿದೆ? ಎ) ಜಿನೀವಾ ಬಿ) ನ್ಯೂಯಾರ್ಕ್ ಸಿ) ಟೊಕಿಯೋ ಡಿ)ವಾಷಿಂಗ್‌ಟನ್ ಡಿಸಿ ಉತ್ತರ: ಎ 2) ಮಣಿಪಾಲದ ಬಳಿ ಸಿಕ್ಕ ಹೊಸ ಪ್ರಬೇಧವೊಂದಕ್ಕೆ ಲಂಡನ್‌ನ ಪ್ರತಿಷ್ಠಿತ ಬಯೋಲಾಜಿಕಲ್ ಸೊಸೈಟಿಯು ಪ್ಯಾರಾ ಕೈಟ್ಲಿಯ ಭಟ್ಟಿಯೈ ಎಂದು ಹೆಸರಿಟ್ಟು ಗೌರವಿಸಿತ್ತು. ಹಾಗಾದರೆ ಈ ಕೆಳಗೆ ಉಲ್ಲೇಖಿಸಿರುವ ಯಾರ ಗೌರವಾರ್ಥ ಈ ಹೆಸರನ್ನು ಇಡಲಾಗಿದೆ? ಎ) ಡಾ.ಕೆ. ಗೋಪಾಲ್ ಕೃಷ್ಣ ಭಟ್ಟ ಬಿ) ಡಾ.ಎಂ. ಗಜಾನನ ಭಟ್ ಸಿ) ಡಾ.ಜೆ. ಸುರಾಮ್ ಭಟ್ ಡಿ) ಮೇಲಿನ ಯಾರೂ ಅಲ್ಲ ಉತ್ತರ: ಎ (ವಿವರಣೆ:- ಪ್ರಸಿದ್ಧ ಸಸ್ಯ ವಿಜ್ಞಾನಿ ಡಾ ಕೆ. ಗೋಪಾಲ್ ಕೃಷ್ಣ ಭಟ್ಟ ಇತ್ತೀಚಿಗೆ ನಿಧನರಾದರು. ಸಸ್ಯವರ್ಗೀಕರಣದಲ್ಲಿ ದೊಡ್ಡ ಪಾತ್ರವಹಿಸಿದ್ದಲ್ಲದೇ ಉಡುಪಿ, ದಕ್ಷಿಣ ಕನ್ನಡದಲ್ಲಿರುವ ಸಸ್ಯ ಪ್ರಭೇದಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ಲೋರಾ ಆಫ್ ಉಡುಪಿ, ಫ್ಲೋರಾ ಆಫ್ ದಕ್ಷಿಣ ಕನ್ನಡ ಈ ಮೊದಲಾದ ಕೃತಿಗಳನ್ನು ಬರೆದಿದ್ದಾರೆ) 3) ಏರೋಸ್ಪೇಸ್ ಕಂಪನಿಯಾದ ಪಿಕ್ಸಲ್() ತಯಾರಿಸಿದ ಶಕುಂತಲಾ ಎಂಬ ಹೆಸರಿನ ಉಪಗ್ರಹ ಅಮೆರಿಕದಿಂದ ನಭಕ್ಕೆ ಉಡಾಯಿಸಲಾಯಿತು.ಈ ಕಂಪನಿಯನ್ನು ಆರಂಭಿಸಿದ ಕನ್ನಡಿಗ ಯಾರು? ಎ) ಡಾ. ಸುನಿಲ್ ಗಾಂವ್ಕರ್ ಬಿ) ರಮೇಶ ಪಂಡಿತ್ ಸಿ) ಅವೇಜ್ ಅಹಮದ್ ( ) ಡಿ) ಮೇಲಿನ ಯಾರೂ ಅಲ್ಲ ಉತ್ತರ: ಸಿ 4) ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್-2022ನಲ್ಲಿ ( () -2022) ಇರುವ ಅಂಶವನ್ನು ಗಮನಿಸಿ. ಯಾವ ಅಂಶ ಸರಿ ಇದೆ ಎನ್ನುವುದನ್ನು ಗುರುತಿಸಿ. ಎ) ಆರೋಪಿತ ಅಪರಾಧಿಯ ಅಪರಾಧ ಸಾಬೀತು ಆಗದಿದ್ದರೆ ಅವರಿಂದ ಪಡೆದ ಫಿಂಗರ್ ಪ್ರಿಂಟ್ ಹಾಗೂ ಫೂಟ್ ಪ್ರಿಂಟ್ ಮೊದಲಾದ ದೈಹಿಕ ಮಾದರಿಗಳ ಸಂಗ್ರಹವನ್ನು ನಾಶ ಮಾಡಲಾಗುವುದು. ಬಿ) ಸಬ್-ಇನ್‌ಸ್ಪೆಕ್ಟರ್ ಮತ್ತು ಮೇಲಿನ ಅಧಿಕಾರಿಗಳು ಮಾತ್ರ ಆರೋಪಿಯ ದೈಹಿಕ ಮಾದರಿಗಳ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ ಸಿ) ಆರೋಪಿತ ಅಪರಾಧಿಯ ದೈಹಿಕ ಮಾದರಿಗಳನ್ನು 75 ವರ್ಷಗಳ ಕಾಲ ಸಂರಕ್ಷಿಸಿಡಲು ಅವಕಾಶಗಳಿವೆ. ಡಿ) ಕೈದಿಗಳ ಗುರುತು ಪತ್ತೆ ಕಾಯ್ದೆ-1920ಯು ಈ ಕಾಯ್ದೆಯ ಜೊತೆ ಜೊತೆಗೆ ಮುನ್ನಡೆಯಲಿದೆ. ಉತ್ತರ: ಸಿ 5) ನಮ್ಮ ರಾಜ್ಯದ ಮೊದಲ ರಾಷ್ಟ್ರೀಯ ಆಯುಷ್ ಕ್ರೀಡಾ ಔಷಧ ಕೇಂದ್ರ (ಆಯುಷ್ ಸ್ಪೋರ್ಟ್ಸ್‌ ಮೆಡಿಸಿನ್ ಸೆಂಟರ್) ಎಲ್ಲಿ ಆರಂಭವಾಗಲಿದೆ? ಎ) ಬೆಂಗಳೂರು ಬಿ) ಮಂಗಳೂರು ಸಿ) ಮಂಡ್ಯ ಡಿ) ವಿಜಯಪುರ ಉತ್ತರ: ಬಿ 6) ಈ ಕೆಳಗಿನ ಯಾವುದು ವಿಶ್ವದ ಮೊದಲ ವಿದ್ಯುತ್ ಚಾಲಿತ ಸರಕು ಸಾಗಣೆ ಹಡಗು ಆಗಿದೆ? ಎ) ಯಾಂಗ್ಟಿ ರಿವರ್ ತ್ರೀ ಗಾರ್ಜಸ್ ಬಿ) ವಿಕ್ರಮ್ ಸಾಗರ್ ಸಿ) ಧೂದ್ ಸಾಗರ್ ಡಿ) ಯಾರಾ ಬಿರ್ಕೆಲ್ಯಾಂಡ್ ಉತ್ತರ: ಡಿ 6) ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಟಿ. ಎಂ.ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿರುವ ವರದಿಯಲ್ಲಿರುವ ಯಾವ ಅಂಶವನ್ನು ತಪ್ಪಾಗಿ ನೀಡಲಾಗಿದೆ? ಎ) ಪೊಲೀಸ್ ಕಾಯ್ದೆಯಡಿ ಸೂಚಿಸಲಾದ ದಂಡದ ಮೊತ್ತವನ್ನು ಪರಿಷ್ಕರಿಸಬೇಕು. ಬಿ) ಸೈಬರ್ ಅಪರಾಧ ಭೇದಿಸಲು ಠಾಣೆಗೆ ಒಬ್ಬರು ಅಥವಾ ಇಬ್ಬರನ್ನು ಎಂಸಿಎ/ಬಿಸಿಎ/ ಡಿಪ್ಲಮಾ ಪದವೀಧರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಸಿ) ಪ್ರತಿ ಕಂದಾಯ ಜಿಲ್ಲೆಯಲ್ಲಿ ಮಿನಿವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಬೇಕು ಡಿ) ಲಾಕಪ್ ಕೈದಿಗಳಿಗೆ ದಿನಕ್ಕೆ ಎರಡೂ ಊಟದ ಜತೆಗೆ ಬೆಳಿಗ್ಗೆ ಮತ್ತು ಸಂಜೆ ತಿಂಡಿ, ಚಹಾ/ಕಾಫಿ ಹಾಗೂ ವಾರಕ್ಕೊಮ್ಮೆ ವಿಶೇಷ ಹಬ್ಬದೂಟವನ್ನು ನೀಡಬೇಕು. ಉತ್ತರ: ಡಿ 7) ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಸರ್ಬಿಯಾ ದೇಶದ ಅಧ್ಯಕ್ಷರಾಗಿ ಅಲೆಕ್ಸಾಂಡರ್ ವುಸಿಕ್ ಆಯ್ಕೆಯಾಗಿದ್ದಾರೆ 2) ಹಂಗೇರಿ ದೇಶದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ವಿಕ್ಟರ್ ಓರ್ಬನ್ ಆಯ್ಕೆಯಾಗಿದ್ದಾರೆ. ಉತ್ತರ ಸಂಕೇತಗಳು ಎ) ಹೇಳಿಕೆ 1 ಮಾತ್ರ ಸರಿಯಾಗಿದೆ ಬಿ) ಹೇಳಿಕೆ 2 ಮಾತ್ರ ಸರಿಯಾಗಿದೆ ಸಿ) ಎರಡೂ ಹೇಳಿಕೆಗಳು ತಪ್ಪಾಗಿವೆ . ಡಿ) ಎರಡೂ ಹೇಳಿಕೆಗಳು ಸರಿಯಾಗಿವೆ ‌‌ಉತ್ತರ: ಡಿ 8) ಭಾರತದ ರಫ್ತು ಸರ್ವಕಾಲಿಕ ದಾಖಲೆಯನ್ನು ಬರೆದಿದ್ದು 417.8 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ. ಹಾಗಾದರೆ ಯಾವೆಲ್ಲಾ ದೇಶಗಳಿಗೆ ಭಾರತ ಅತಿಹೆಚ್ಚು ರಫ್ತು ಮಾಡುತ್ತಿದೆ? ಎ) ಅಮೆರಿಕ, ಸರ್ಬಿಯಾ, ಚೀನಾ, ಬಾಂಗ್ಲಾದೇಶ, ಯುಎಇ, ಬಿ) ಹಂಗೇರಿ ಅಮೆರಿಕ, ನೆದರ್ಲೆಂಡ್ಸ್, ಬಾಂಗ್ಲಾದೇಶ, ಯುಎಇ ಸಿ) ಅಮೆರಿಕ, ಯುಎಇ, ಚೀನಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌ ಡಿ) ಅಮೆರಿಕ, ಚೀನ, ನೇಪಾಳ, ಜಪಾನ್ ಮತ್ತು ಶ್ರೀಲಂಕ ಉತ್ತರ:ಸಿ 9) ಇತ್ತೀಚೆಗೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವಬಾ ಭಾರತಕ್ಕೆ ಬಂದ ಸಂದರ್ಭದಲ್ಲಿ ನೇಪಾಳದಲ್ಲಿ ಭಾರತದ ರುಪೆ ಕಾರ್ಡ್ ಬಳಸಲು ಅನುವಾಗುವ ಸೇವೆಗೆ ಚಾಲನೆ ನೀಡಿದರು. ಈ ಕೆಳಗಿನ ಯಾವೆಲ್ಲಾ ದೇಶಗಳಲ್ಲಿ ರುಪೆ ಕಾರ್ಡ್ ಬಳಸಲು ಮಾನ್ಯತೆ ನೀಡಿವೆ? ಎ) ಭೂತಾನ್, ಸಿಂಗಪುರ, ಯುಎಇ ಬಿ) ಶ್ರೀಲಂಕಾ, ಅಮೆರಿಕ, ರಷ್ಯಾ ಸಿ) ಥಾಯ್ಲೆಂಡ್, ಭೂತಾನ್, ಜಪಾನ್ ಡಿ) ಮಲೇಷ್ಯಾ, ಜಪಾನ್, ಸಿಂಗಪುರ ಉತ್ತರ: ಎ ನಿಮಗಿದು ಗೊತ್ತೇ? ರಕ್ತ ಹಿರುವ ಬಾವಲಿಗಳು ಇವೆಯೇ? ಭೂಮಿಯ ಮೇಲೆ ಬಾವಲಿಗಳು ಸಾವಿರಾರು ವರ್ಷಗಳಿಂದಲೂ ಇವೆ. ಪಳೆಯುಳಿಕೆಗಳ ಅಧ್ಯಯನದಿಂದ ಈ ಅಂಶ ರುಜುವಾತಾಗಿದೆ. ವಿಜ್ಞಾನಿಗಳಿಗೆ ಈಗ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಬಾವಲಿಗಳ ಬಗ್ಗೆ ಮಾಹಿತಿ ಲಭ್ಯವಿದೆ. ಧ್ರುವ ಪ್ರದೇಶಗಳನ್ನು ಬಿಟ್ಟರೆ, ವಿಶ್ವದ ಉಳಿದ ಎಲ್ಲ ಭಾಗಗಳಲ್ಲೂ ಬಾವಲಿಗಳನ್ನು ಕಾಣಬಹುದು. ಹಾರಬಲ್ಲ ಸಾಮರ್ಥ್ಯವಿರುವ ಏಕೈಕ ಸಸ್ತನಿ ಎಂದರೆ ಬಾವಲಿ ಮಾತ್ರ‍್ರ. ಬಾವಲಿಗಳು ರೆಕ್ಕೆ ಬಿಚ್ಚಿದಾಗ ಅದರ ಉದ್ದ 15 ಸೆ.ಮೀನಿಂದ 180 ಸೆಂ.ಮೀವರೆಗೆ ಇರುತ್ತದೆ. ಹೆಚ್ಚು ಬಾವಲಿಗಳು ಕೀಟ, ಹಣ್ಣು ಮತ್ತು ಮಿನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನೇ ಕುಡಿದು ಜೀವಿಸುವ ಒಂದು ಜಾತಿಯ ಬಾವಲಿ ಇದೆ. ಅದಕ್ಕೆ ನೆತ್ತರು ಬಾವಲಿಗಳೆಂದು( ) ಹೆಸರು. ನೆತ್ತರು ಬಾವಲಿಗಳಿಗೆ ಜನರು ತುಂಬ ಹೆದರುತ್ತಾರೆ. ಇವು ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುತ್ತವೆ. ಈ ಬಾವಲಿಗಳು ರೆಕ್ಕೆಗಳನ್ನು ಬಿಚ್ಚಿದಾಗ, ಅದರ ಉದ್ದ 30 ಸೆ.ಮೀನಷ್ಟಿರುತ್ತದೆ. ದೇಹದ ಉದ್ದ 10 ಸೆಂ.ಮೀನಷ್ಟಿರುತ್ತದೆ. ಈ ಬಾವಲಿಯ ಮುಂದಿನ ಹಲ್ಲು ಸೂಜಿಯಷ್ಟು ಮೊನಚಾಗಿರುತ್ತದೆ. ಈ ಹಲ್ಲಿನಿಂದ ಅವು ನಿದ್ರಿಸುತ್ತಿರುವ ಮನುಷ್ಯ, ಕುದುರೆ, ಹಸು, ನಾಯಿ, ಆಡು ಅಥವಾ ಕೋಳಿ ಇತ್ಯಾದಿ ಪ್ರಾಣಿಗಳ ಚರ್ಮವನ್ನು ಕೊರೆಯುತ್ತದೆ. ಅದು ಚರ್ಮವನ್ನು ಎಷ್ಟು ನಯವಾಗಿ ಕೊರೆಯುತ್ತದೆಂದರೆ, ಪ್ರಾಣಿಗಳಿಗೆ ಅದರ ನೋವು ಸ್ವಲ್ಪವೂ ಗೊತ್ತಾಗುವುದಿಲ್ಲ. ಅನಂತರ ಬಾವಲಿ ತನ್ನ ನಾಲಿಗೆಯಿಂದ ರಕ್ತ ಹೀರುತ್ತವೆ. ಮೊದಲು ಈ ಬಾವಲಿ ತಾನು ಕಚ್ಚಲಿರುವ ಜಾಗವನ್ನು ನೆಕ್ಕುತ್ತದೆ. ಒಂದು ವೇಳೆ ಅದು ಕಚ್ಚಿದ ಪ್ರಾಣಿ ಎಚ್ಚೆತ್ತರೆ. ಬಾವಲಿ ಕೂಡಲೇ ಹಾರಿ ಹೋಗುತ್ತದೆ. (ಮಾಹಿತಿ: ಯೂಟ್ಯೂಬ್ ಚಾನೆಲ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.