: ಭಾರತೀಯ ಆರ್ಥಿಕ ಸೇವೆ, ಸಂಖ್ಯಾಶಾಸ್ತ್ರ ಸೇವೆ ಹುದ್ದೆಗಳಿಗೆ ಅರ್ಜಿ ಭಾರತೀಯ ಆರ್ಥಿಕ ಸೇವೆ ಮತ್ತು ಭಾರತೀಯ ಸಂಖ್ಯಾಶಾಸ್ತ್ರ ಸೇವೆ ಹುದ್ದೆಗಳ ನೇಮಕಾತಿಗೆಕೇಂದ್ರ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಒಟ್ಟು 53 ಹುದ್ದೆಗಳನ್ನು ಭರ್ತಿಮಾಡಿ ಕೊಳ್ಳಲಾಗುವುದು. ಅಭ್ಯರ್ಥಿಗಳನ್ನು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಹಾಕಬೇಕು. ಹುದ್ದೆಗಳ ಸಂಖ್ಯೆ: 53 ಭಾರತೀಯ ಆರ್ಥಿಕ ಸೇವೆ : 24 ಭಾರತೀಯ ಅಂಕಿಅಂಶ ಸೇವೆ : 29 ವಿದ್ಯಾರ್ಹತೆ... 1) ಭಾರತೀಯ ಆರ್ಥಿಕ ಸೇವೆ : ಅರ್ಥಶಾಸ್ತ್ರ / ಅಪ್ಲೈಡ್ ಎಕನಾಮಿಕ್ಸ್‌ / ಬ್ಯುಸಿನೆಸ್ ಎಕನಾಮಿಕ್ಸ್‌ / ಎಕನಾಮೆಟ್ರಿಕ್ಸ್‌ ಪೋಸ್ಟ್‌ನಲ್ಲಿ ಪದವಿ ಪಡೆದಿರಬೇಕು. 2) ಭಾರತೀಯ ಅಂಕಿಅಂಶ ಸೇವೆ: ಸ್ಟ್ಯಾಟಿಸ್ಟಿಕ್ಸ್ / ಮ್ಯಾಥೆಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ / ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್‌ ಪದವಿ ಪಡೆದಿರಬೇಕು. ವೇತನ: ಕೇಂದ್ರ ಸರ್ಕಾರ ವೇತನ ಆಯೋಗದ ಅನ್ವಯ ಗ್ರೂಪ್‌ ‘ಎ‘ ಅಡಿಯಲ್ಲಿ ಮಾಸಿಕ ವೇತನ ನೀಡಲಾಗುವುದು. ವಯಸ್ಸು *ಕನಿಷ್ಠ 21 ವರ್ಷಗಳಾಗಿರಬೇಕು. ವಯೋಮಿತಿ ಸಡಿಲಿಕೆ * ಸಾಮಾನ್ಯ ವರ್ಗದ ಅಭ್ಯರ್ಥಿಗಳು– ಗರಿಷ್ಠ 32 ವರ್ಷ * ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ * ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 37 ವರ್ಷ * ಅಂಗವಿಕಲ ಅಭ್ಯರ್ಥಿಗಳಿಗೆ –42 ವರ್ಷಗಳು ಅರ್ಜಿ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹ 100 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ನೇಮಕಾತಿ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಸುವ ವಿಧಾನ * ಲೋಕಸೇವಾ ಆಯೋಗದ ವೆಬ್‌ಸೈಟ್‌ ://.. ಗೆ ಲಾಗಿನ್‌ ಆಗಿ ಅನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ಮುಖ್ಯ ಮಾಹಿತಿ * ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 26-04-2022 * ಯುಪಿಎಸ್‌ಸಿ ವೆಬ್‌ಸೈಟ್‌: ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.