,, ಪಾಸ್‌ | ವೇತನ ₹25,000: ESICಯಲ್ಲಿ 3847 ಹುದ್ದೆಗಳಿಗೆ ಅರ್ಜಿ ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 3847 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 3847 ( ರಾಜ್ಯದಲ್ಲಿ 284 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು) ಹುದ್ದೆಗಳ ವಿವರ 1) ಕ್ಲರ್ಕ್ – 1726 2) ಸ್ಟೆನೋಗ್ರಾಫರ್ – 163 3) ಮಲ್ಟಿ ಟಾಸ್ಕಿಂಗ್ ಸ್ಟಾಫ್‌ – 1931 ಕ್ಲರ್ಕ್... ವಿದ್ಯಾರ್ಹತೆ: ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್‌ ಆಗಿರಬೇಕು. ವೇತನ ಶ್ರೇಣಿ: ₹ 25,500-₹ 81,100. ಸ್ಟೆನೋಗ್ರಾಫರ್... ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಟೈಪಿಂಗ್‌, ಶಾರ್ಟ್‌ಹ್ಯಾಂಡ್‌ ಕೋರ್ಸ್‌ ಪಡೆದಿರಬೇಕು ವೇತನ ಶ್ರೇಣಿ: ₹ 25,500-₹ 81,100. ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ... ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವೇತನ ಶ್ರೇಣಿ: ₹ 18,000-₹ 56,900. ವಿದ್ಯಾರ್ಹತೆ ಮಾಹಿತಿ, ವೇತನ, ಅರ್ಜಿ ಶುಲ್ಕ ಪಾವತಿ, ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ನೋಡುವುದು. ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 27 ವಯೋಮಿತಿ ಸಡಿಲಿಕೆ ಎಸ್‌ಸಿ/ಎಸ್‌ಟಿ: 5 ವರ್ಷಗಳು ಒಬಿಸಿ: 3 ವರ್ಷಗಳು ಅಂಗವಿಕಲರು 10 ವರ್ಷಗಳು ಅರ್ಜಿ ಶುಲ್ಕ: ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 250. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ₹ 500. ಶುಲ್ಕ ಇದೆ. ನೇಮಕಾತಿ: ಎಲ್ಲ ಹುದ್ದೆಗಳ ಆಯ್ಕೆಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮ್ಸ್‌ ಪರೀಕ್ಷೆ, ಮುಖ್ಯ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ ನಡೆಸಲಾಗುವುದು. ಓದಿ:ವೇತನ ₹21,700 | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 641 ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಹೊರತುಪಡಿಸಿ, ಇತರೆ ಯಾವುದೇ ವಿಧಾನದಲ್ಲಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ . .. ಗೆ ಭೇಟಿ ನೀಡಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15–02–2022 ವೆಬ್‌ಸೈಟ್ ವಿಳಾಸ:://... ಓದಿ:ಕಾರ್ಮಿಕ ವಿಮಾ ನಿಗಮ: 1120 ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.