ಬೆಂಗಳೂರು ಸಿಟಿ ಪೊಲೀಸ್‌ನಲ್ಲಿ ಸೈಬರ್ ಸೆಕ್ಯುರಿಟಿ ಹುದ್ದೆ: ₹75,000 ವೇತನ ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಇಲಾಖೆ ಸೂಚನೆ ಹೊರಡಿಸಿದೆ. ನಗರದ 8 ಸೈಬರ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಹುದ್ದೆಗಳು ಖಾಲಿ ಇವೆ. ಗುತ್ತಿಗೆಸ್ವರೂಪದ ಹುದ್ದೆಗಳು ಇವಾಗಿದ್ದು, ಇನ್ಫಾರ್ಮೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್/ ಟೆಲಿಕಮ್ಯೂನಿಕೇಶನ್ಸ್‌ನಲ್ಲಿ ಬಿ.ಇ., ಬಿ.ಟೆಕ್., ಬಿಸಿಎ, ಎಂ.ಎಸ್‌ಸಿ ಅಥವಾ ಎಂಸಿಎ ಪದವಿ ಪಡೆದಿರಬೇಕು. ಸೈಬರ್ ಸೆಕ್ಯುರಿಟಿ ಅಥವಾ ಸೈಬರ್ ಫಾರನ್ಸಿಕ್ಸ್‌ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಇರುವವರು ಮತ್ತು ಮೇಲೆ ಸೂಚಿಸಿದ ಅರ್ಹತೆ ಹೊಂದಿರುವ ಅಭ್ಯರ್ಥಿಗಳು 28 ಫೆಬ್ರುವರಿ 2022ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಸೈಬರ್ ಸೆಕ್ಯುರಿಟಿ ಅನಲಿಸ್ಟ್ ಹುದ್ದೆಗೆ ₹75,000 ಮತ್ತು ಡಿಜಿಟಲ್ ಫಾರೆನ್ಸಿಕ್ ಅನಲಿಸ್ಟ್ ಹುದ್ದೆಗೆ ₹50,000 ತಿಂಗಳ ವೇತನವಿದೆ. ಹೆಚ್ಚಿನ ವಿವರಗಳಿಗೆ– ://./3Gdq1ns ‘ಟೋಯಿಂಗ್’ ಸುಲಿಗೆಗೆ ಜನಾಕ್ರೋಶ: ಗೃಹ ಸಚಿವ, ಕಮಿಷನರ್ ಆದೇಶಕ್ಕೂ ಕಿಮ್ಮತ್ತಿಲ್ಲ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.