ಶಿವಮೊಗ್ಗ ಬ್ಯಾಂಕ್: 98 ವಿವಿಧ ಹುದ್ದೆಗಳಿಗೆ ಅರ್ಜಿ; ಮೇ 16 ಕಡೆ ದಿನ ಬೆಂಗಳೂರು: ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ:ಕ್ಲರ್ಕ್‌, ಅಟೆಂಡರ್ ಹಾಗೂ ಡ್ರೈವರ್‌ ಹುದ್ದೆಗಳ ಸಂಖ್ಯೆ: 98 ಸ್ಥಳ: ಶಿವಮೊಗ್ಗ ವಿದ್ಯಾರ್ಹತೆ ಹಾಗೂ ವೇತನ: ಸಂಬಂಧಿತ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿಗಾಗಿ ಅಧಿಸೂಚನೆಯನ್ನು ನೋಡುವುದು. ವಯಸ್ಸು:ಶಿವಮೊಗ್ಗ ಡಿಸಿಸಿ ಬ್ಯಾಂಕ್ ಲಿಮಿಟೆಡ್‌ ನೇಮಕಾತಿ ಅಧಿಸೂಚನೆಯ ಪ್ರಕಾರ ಮೇ 16, 2022ಕ್ಕೆ ಅನುಗುಣವಾಗುವಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 35 ಒಬಿಸಿ ಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 38 ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 40 ನೇಮಕಾತಿ ವಿಧಾನ: ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ವಿಳಾಸ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ನಿಯಂತ್ರಣ ಸಮಿತಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್‌. ಬಾಲರಾಜ್‌ ಅರಸ್ ರಸ್ತೆ, ಪಿ.ಬಿ.ಸಂ–62, ಶಿವಮೊಗ್ಗ – 577201 ಅರ್ಜಿ ಸಲ್ಲಿಕೆ ಕಡೆ ದಿನಾಂಕ: 16–05–2022 ಅಧಿಸೂಚನೆ ಲಿಂಕ್‌: ://../-//2022/04/--2022. ಅಧಿಕೃತ ವೆಬ್‌ ಸೈಟ್‌:://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.