ರೈಲ್ವೆ ಗ್ರೂಪ್ ಡಿ ಪರೀಕ್ಷೆ ಸಿದ್ಧತೆಗೆ ವೊಡಾಫೋನ್–ಐಡಿಯಾದಿಂದ ‘ ಆ್ಯಪ್‍’ ಬೆಂಗಳೂರು: ರೈಲ್ವೆ ಗ್ರೂಪ್ ಡಿ ಪರೀಕ್ಷೆಗೆ ನೆರವಾಗಲು ವೊಡಾಫೋನ್–ಐಡಿಯಾ ಕಂಪನಿಯು ಉಚಿತ ‘ ಆ್ಯಪ್‌’ ಅನ್ನು ಸಿದ್ಧಪಡಿಸಿದೆ. ಈ ಆ್ಯಪ್‌ನ ಮೂಲಕ ಅಭ್ಯರ್ಥಿಗಳು ಉಚಿತ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಬಹುದಾಗಿದೆ. 2022ರ ಆಗಸ್ಟ್ 17ರಿಂದ ಆರಂಭವಾಗುವ ರೈಲ್ವೆ ಡಿ ಗ್ರೂಪ್ ಪರೀಕ್ಷೆಗಳಿಗೆ ಸಿದ್ಧತಾ ಪರೀಕ್ಷಾ ಸಾಮಗ್ರಿಗಳನ್ನು (ಸ್ಟಡಿ ಮೆಟೀರಿಯಲ್) ಆ್ಯಪ್‌ ಒದಗಿಸುತ್ತಿದೆ. ಉದ್ಯೋಗದ ಆಕಾಂಕ್ಷಿಗಳು ಈ ಮೂಲಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್‍ನಲ್ಲಿ ರೈಲ್ವೆ ಗ್ರೂಪ್ ಡಿ ಪರೀಕ್ಷಾ ಸರಣಿಗಳು ಲಭ್ಯವಿದೆ. ಟ್ರ್ಯಾಕ್ ನಿರ್ವಹಣೆದಾರರು(ಗ್ರೇಡ್-4), ಸಹಾಯಕರು, ಲೆವೆಲ್-1 ಹುದ್ದೆಗಳನ್ನು ಒಳಗೊಂಡಂತೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳ ನೇಮಕಾತಿಗೆ ತಯಾರಾಗಲು ಆ್ಯಪ್‌ ಸಹಾಯ ಮಾಡಲಿದೆ. ಆ್ಯಪ್‌ನಲ್ಲಿ ಪರೀಕ್ಷಾ ಸಾಮಾಗ್ರಿಗಳನ್ನು ಪಡೆಯಲು ಮಾರ್ಗಸೂಚಿ * 1ನೇ ಹಂತ: ನಿಮ್ಮ ಸಂಖ್ಯೆ ಮೂಲಕ ಆ್ಯಪ್‍ಗೆ ಲಾಗಿನ್ ಆಗಿ * 2ನೇ ಹಂತ: ` ' ಆಯ್ಕೆ ಮೇಲೆ ಕ್ಲಿಕ್ ಮಾಡಿ. * 3ನೇ ಹಂತ: ` ' ಆಯ್ಕೆ ಮೇಲೆ ಕ್ಲಿಕ್ಕಿಸಿ * 4ನೇ ಹಂತ: ನಿಮ್ಮ ಪ್ರೊಫೈಲ್ ವಿವರಗಳನ್ನು ಭರ್ತಿ ಮಾಡಿ '' ಅನ್ನು ಆಯ್ಕೆ ಮಾಡಿ. * 5ನೇ ಹಂತ: ನಿಮಗೆ ಅಗತ್ಯವಿರುವ ರೈಲ್ವೆ ಕೋರ್ಸ್‍ಗಳನ್ನು ಆಯ್ಕೆ ಮಾಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.