ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಪರೀಕ್ಷೆ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಎಂಜಿನಿಯರ್‌ (ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಕ್ವಾಂಟಿಟಿ ಸರ್ವೇಯಿಂಗ್‌ ಮತ್ತು ಒಪ್ಪಂದಗಳು ) ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಆನ್‌ಲೈನ್‌ ಆಧಾರಿತ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯು ಇದೇ ನವೆಂಬರ್‌ನಲ್ಲಿ ನಡೆಯಲಿದೆ. ಪರೀಕ್ಷೆಯ ನಿಗದಿತ ದಿನಾಂಕದ ಬಗ್ಗೆ .... ನಲ್ಲಿ ತಿಳಿಸಲಾಗುವುದು. * ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಮತ್ತು ಅನುಭವ ಪಡೆದಿರಬೇಕು. *ವಯೋಮಿತಿ: ಸಾಮಾನ್ಯ ವರ್ಗದವರಿಗೆ 30 ವರ್ಷ, ಒಬಿಸಿ/ಎಸ್‌ಸಿ/ಎಸ್ಟಿ/ಇಎಸ್‌ಎಂ ಹಾಗೂ ಇತರೆ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಕುರಿತ ಮಾಹಿತಿಗಾಗಿ ಅಧಿಸೂಚನೆಯ 7.2ನೇ ಪ್ಯಾರಾ ನೋಡಿ. ನೇಮಕಾತಿ ವಿಧಾನ: ಪೇಪರ್ 1 (ಕಂಪ್ಯೂಟರ್‌ ಆಧಾರಿತ ಪರೀಕ್ಷೆ) * ಜನರಲ್‌ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್‌, * ಸಾಮಾನ್ಯ ಅರಿವು, * ಜನರಲ್‌ ಎಂಜಿನಿಯರಿಂಗ್‌ (ಸಿವಿಲ್‌–ನಿರ್ಮಾಣ) ಅಥವಾ ಸಾಮಾನ್ಯ ಎಂಜಿನಿಯರಿಂಗ್‌ (ಎಲೆಕ್ಟ್ರಿಕಲ್‌) ಅಥವಾ ಸಾಮಾನ್ಯ ಎಂಜಿನಿಯರಿಂಗ್‌ ( ಮೆಕ್ಯಾನಿಕಲ್‌) ಪೇಪರ್‌ 2 (ಲಿಖಿತ ಪರೀಕ್ಷೆ) ಜನರಲ್‌ ಎಂಜಿನಿಯರಿಂಗ್‌ (ಸಿವಿಲ್‌–ನಿರ್ಮಾಣ) ಅಥವಾ ಸಾಮಾನ್ಯ ಎಂಜಿನಿಯರಿಂಗ್‌ (ಎಲೆಕ್ಟ್ರಿಕಲ್‌) ಅಥವಾ ಸಾಮಾನ್ಯ ಎಂಜಿನಿಯರಿಂಗ್‌ ( ಮೆಕ್ಯಾನಿಕಲ್‌) ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್‌ 2 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಶುಲ್ಕ: ₹ 100 ( ಮಹಿಳೆ/ಎಸ್‌ಸಿ/ಎಸ್‌ಟಿ/ಇಎಸ್‌ಎಂ ವರ್ಗಗಳಿಗೆ ಯಾವುದೇ ಶುಲ್ಕವಿಲ್ಲ) ಹೆಚ್ಚಿನ ಮಾಹಿತಿಗೆ: ://..,://..../ ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.