ದೆಹಲಿ ಪೊಲೀಸ್ ಪರೀಕ್ಷೆ 2022: ಕಾನ್‌ಸ್ಟೆಬಲ್‌(ಚಾಲಕ) ಹುದ್ದೆಗಳ ಆಯ್ಕೆ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕಾನ್‌ಸ್ಟೆಬಲ್‌(ಚಾಲಕ–ಪುರುಷ) ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ‘ದೆಹಲಿ ಪೊಲೀಸ್ ಪರೀಕ್ಷೆ 2022‘ ಶೀರ್ಷಿಕೆಯಡಿ ಈ ಪರೀಕ್ಷೆ ನಡೆಯಲಿದೆ. ಎಷ್ಟು ಹುದ್ದೆಗಳಿಗಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದನ್ನು ನಿಗದಿಪಡಿಸಿಲ್ಲ. ನಂತರ ಹುದ್ದೆಗಳ ಸಂಖ್ಯೆ ನಿಗದಿಗೊಳಿಸುವುದಾಗಿ ಜುಲೈ 8ರಂದು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ. ವಿದ್ಯಾರ್ಹತೆ:10+2 ಅಥವಾ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಭಾರಿ ವಾಹನಗಳ ಚಾಲನೆಯಲ್ಲಿ ಅನುಭವವಿರಬೇಕು. ಭಾರಿ ಮೋಟಾರು ವಾಹನಗಳಿಗೆ ಮಾನ್ಯವಾದ ಚಾಲನಾ ಪರವಾನಗಿ (ಆನ್‌ಲೈನ್‌ ಸ್ವೀಕೃತಿಯ ಅಂತಿಮ ದಿನಾಕದಂತೆ ಪರವಾನಗಿ ಹೊಂದಿರಬೇಕು) ಹೊಂದಿರಬೇಕು. ವಾಹನಗಳ ನಿರ್ವಹಣೆಯ ಜ್ಞಾನವನ್ನೂ ಹೊಂದಿರಬೇಕು. ವಯೋಮಿತಿ:ಜುಲೈ1, 2022ರ ಅನ್ವಯ ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷಗಳು. ನಿರ್ದಿಷ್ಟ ವರ್ಗದವರು ವಯೋಮಿತಿ ಸಡಿಲಿಕೆಗೆಗಾಗಿ ಜುಲೈ 8ರಂದು ಆಯೋಗ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಅಧಿಸೂಚನೆಯ ಪ್ಯಾರಾ–4ಅನ್ನು ಪರಿಶೀಲಿಸಬಹುದು. ಪ್ರವೇಶ ಶುಲ್ಕ:₹100(ಮಾಜಿ ಸೈನಿಕರಿಗೆ, ಎಸ್ಸಿ, ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ) ಅರ್ಜಿ ಸಲ್ಲಿಸುವ ವಿಧಾನ:ಸಿಬ್ಬಂದಿ ನೇಮಕಾತಿ ಸಂಸ್ಥೆ (ಎಸ್‌ಎಸ್‌ಸಿ)ಯ ಜಾಲತಾಣ //.. ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಅಧಿಸೂಚನೆಯ ಅನುಬಂಧ– ಮತ್ತು ಅನ್ನು ನೋಡಿ. ಅರ್ಜಿ ಸಲ್ಲಿಸಲು ಕೊನೆ ದಿನ:ಜುಲೈ 29, 2022. ಆನ್‌ಲೈನ್ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ವಿಷಯಗಳು: · ಪತ್ರಿಕೆ –1 : ಇದು ಕಂಪ್ಯೂಟರ್ ವಿಷಯ ಆಧಾರಿತವಾದ ಪರೀಕ್ಷೆ. ವಸ್ತುನಿಷ್ಠ ()ಮಾದರಿಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. · ದೈಹಿಕ ಸಹಿಷ್ಣುತೆ ಮತ್ತ ಮಾಪನ ಪರೀಕ್ಷೆ (&) · ಟ್ರೇಡ್ ಪರೀಕ್ಷೆ · ವೈದ್ಯಕೀಯ ಪರೀಕ್ಷೆ ಈ ಹುದ್ದೆಯ ಹೆಚ್ಚಿನ ವಿವರಕ್ಕಾಗಿ .... ಮತುῗ ://... ಜಾಲತಾಣಗಳಿಗೆ ಭೇಟಿ ನೀಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.