ಕರ್ನಾಟಕದಲ್ಲಿ ಉದ್ಯೋಗ: ಕೆಎಸ್‌ಎಂಸಿಎಲ್‌ನಲ್ಲಿ ಹುದ್ದೆಗಳು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ, ಸಹಾಯಕ ವ್ಯವಸ್ಥಾಪಕ, ಗಣಿ ಸಮೀಕ್ಷಕ, ಗಣಿ ಫೋರ್ಮನ್‌, ಎಲೆಕ್ಟ್ರಿಕಲ್ ಎಂಜಿನಿಯರ್, ಮೆಕಾನಿಕಲ್ ಫೋರ್‌ಮೆನ್‌ ತಂತ್ರಜ್ಞ, ಸಿವಿಲ್ ಎಂಜಿನಿಯರ್‌, ಭೂ ವಿಜ್ಞಾನಿ ಸೇರಿದಂತೆ ಹದಿನಾರಕ್ಕೂ ಹೆಚ್ಚು ವಿಭಾಗಗಳಲ್ಲಿನ ಗುತ್ತಿಗೆ ಆಧಾರಿತ 30 ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು, ಹಾಸನ, ಬಾಗಲಕೋಟೆ, ಬಳ್ಳಾರಿ ಭಾಗದಲ್ಲಿ ಈ ಉದ್ಯೋಗಗಳಿದ್ದು, ಅರ್ಹರು, ಜನವರಿ 16ರಿಂದ 20ರವರೆಗೆ ನಡೆಯುವ ‘ವಾಕ್‌–ಇನ್‌‘ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: ಕಾರ್ಪೊರೇಟ್ ಕಚೇರಿ: ಟಿಟಿಎಂಸಿ ‘ಎ‘ ಬ್ಲಾಕ್‌, 5 ನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಎಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027. ಮಾಹಿತಿಗಾಗಿ ‌.... ಜಾಲತಾಣಕ್ಕೆ ಭೇಟಿ ನೀಡಬಹುದು. ವಿದ್ಯಾರ್ಹತೆ: ಐಟಿಐ, ಡಿಪ್ಲೊಮಾ, ಗಣಿಗಾರಿಕೆ, ಎಲೆಕ್ಟ್ರಿಕಲ್ , ಸಿವಿಲ್‌ ಎಂಜಿನಿಯ ರಿಂಗ್‌, ಎಂಬಿಎ, ಎಂಎಸ್ಸಿ ಪದವಿ ಸೇರಿದಂತೆ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಪಡೆದಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಸ್ಟೇಟ್ ಮಿನಿರಲ್ಸ್‌ ಕಾರ್ಪೊ ರೇಷನ್‌ ಲಿಮಿಟೆಡ್‌ನ ... ಈ ಜಾಲತಾಣಕ್ಕೆ ಭೇಟಿ ನೀಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.