: ಎನ್‌ಸಿಇಆರ್‌ಟಿ: ಪ್ರಾಂಶುಪಾಲರ ಹುದ್ದೆಗಳು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ಮೈಸೂರು, ಶಿಲ್ಲಾಂಗ್‌, ಭುವನೇಶ್ವರ ಮತ್ತು ಭೂಪಾಲ್ ರಾಜ್ಯಗಳಲ್ಲಿ ಖಾಲಿ ಇರುವ ನಾಲ್ಕು ಪ್ರಾಚಾರ್ಯರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆ ದಿನ. ಆಫ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು. ಶೈಕ್ಷಣಿಕ ಅರ್ಹತೆ:ಎನ್‌ಸಿಇಆರ್‌ಟಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯುಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್‌. ಡಿ ಪೂರ್ಣಗೊಳಿಸಿರಬೇಕು. ವೇತನ: ₹ 37400 ರಿಂದ ₹ 67000 ಮಾಸಿಕ ವಯಸ್ಸಿನ ಮಿತಿ: ಗರಿಷ್ಠ 60 ವರ್ಷಗಳು ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ. ಎಸ್‌.ಸಿ/ಎಸ್‌.ಟಿ/ಅಂಗವಿಕಲರು/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸುವ ವಿಳಾಸ: ಸೆಕ್ಷನ್ ಆಫೀಸರ್, ನೇಮಕಾತಿ- ವಿಭಾಗ, ಕೊಠಡಿ ಸಂಖ್ಯೆ -12, 5 ನೇ ಮಹಡಿ, ಜಾಕಿರ್ ಹುಸೇನ್ ಬ್ಲಾಕ್, , ನವದೆಹಲಿ-110016 ಅರ್ಜಿ ನಮೂನೆ ಮತ್ತು ಇತರೆ ಮಾಹಿತಿಗಾಗಿ ://../ ಈ ಜಾಲತಾಣಕ್ಕೆ ಭೇಟಿ ನೀಡಿ. ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿಗೆ ಭೇಟಿ ನೀಡಿ. ://../////Advt_173_42en. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.