ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ಸಾಮಾನ್ಯ ಜ್ಞಾನ– ಪ್ರಶ್ನೆ–ಉತ್ತರಗಳು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿವಿಲ್‌ ಕಾನ್‌ಸ್ಟೆಬಲ್‌ ಹುದ್ದೆಗಳು, ಕೆಪಿಎಸ್‌ಸಿ ಗ್ರೂಪ್‌ ‘ಸಿ’ಯ ವಿವಿಧ ಹುದ್ದೆಗಳು, ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿಯ ಸಬ್ಇನ್‌ಸ್ಪೆಕ್ಟರ್ ಹಾಗೂ ಕೆಎಸ್‌ಐಎಸ್‌ಎಫ್‌ನ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ. **** 1)→ಯಾವ ದಿನವನ್ನು ‘ವಿಶ್ವ ಪಾರ್ಶ್ವವಾಯು ದಿನ’ ಎಂದು ಆಚರಿಸುತ್ತಾರೆ? ಎ) ಅಕ್ಟೋಬರ್ 29→ಬಿ) ನವೆಂಬರ್-29 ಸಿ) ಡಿಸೆಂಬರ್- 12→ಡಿ) ಜನವರಿ 23 ಉತ್ತರ: ಎ (ವಿವರಣೆ: ಪ್ರಪಂಚದಲ್ಲಿ ಪ್ರತಿ 3 ಸೆಕೆಂಡಿಗೆ ಒಬ್ಬರಿಗೆ ಪಾರ್ಶ್ವವಾಯು(ಸ್ಟ್ರೋಕ್‌ /ಲಕ್ವ) ಪೀಡಿತರಾಗುತ್ತಿದ್ದಾರೆ. ಪ್ರತಿ ವರ್ಷ 12.2 ದಶಲಕ್ಷ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಲಕ್ವ ಹೊಡೆದ ಮೊದಲ 4 ರಿಂದ 5 ಗಂಟೆಗಳನ್ನು`ಗೋಲ್ಡನ್ ಹವರ್’ ಎನ್ನುತ್ತಾರೆ. ಆ ಅವಧಿಯಲ್ಲಿ ಚಿಕಿತ್ಸೆ ನೀಡದೇ ಹೋದರೆ ಮಿದುಳಿನ ನರಮಂಡಳಕ್ಕೆ ಹಾನಿಯಾಗುತ್ತದೆ).‌ 2) ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಕುಲಾಂತರಿ (ಡಿಎಂ ಎಚ್-11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಈ ಸಾಸಿವೆಯನ್ನು ದೆಹಲಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. ಕೇಂದ್ರ ಪರಿಸರ ಸಚಿವಾಲಯದ ವ್ಯಾಪ್ತಿಯ ಕುಲಾಂತರಿ ನಿಯಂತ್ರಕ ಜೆನಿಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯಲು ಅನುಮತಿ ನೀಡಿದೆ. ಹಾಗಾದರೆ ಈ ಅನುಮತಿ ಎಷ್ಟು ವರ್ಷಕ್ಕೆ ಸೀಮಿತವಾಗಿದೆ? ಎ) ಆರು ವರ್ಷ→ಬಿ) ನಾಲ್ಕು ವರ್ಷ ಸಿ) ಹತ್ತು ವರ್ಷ→ಡಿ) ಒಂದು ವರ್ಷ ಉತ್ತರ: ಬಿ 3)→ಜಾಗತಿಕ ವಿಶ್ಲೇಷಣಾ ಸಂಸ್ಥೆಯಾಗಿರುವಗ್ಯಾಲಪ್ ಪ್ರಕಟಿಸಿರುವ ಕಾನೂನು ಮತ್ತು ಸುವ್ಯವಸ್ಥೆ ಸೂಚ್ಯಂಕ 2022ರ(' 2022 2022) ವರದಿ ಪ್ರಕಾರ____________ ದೇಶವು ವಿಶ್ವದ ಅತ್ಯಂತ ಸುರಕ್ಷಿತ ದೇಶವಾಗಿದೆ ಮತ್ತು ಅಫ್ಘಾನಿಸ್ತಾನ ಅತ್ಯಂತ ಅಸುರಕ್ಷಿತ ದೇಶವಾಗಿದೆ. ಎ) ಭಾರತ→ಬಿ) ಚೀನ ಸಿ) ಅಮೆರಿಕ→ಡಿ) ಸಿಂಗಾಪುರ ಉತ್ತರ: ಡಿ (ವಿವರಣೆ: ಗ್ಯಾಲಪ್ ಪ್ರಕಟಿಸಿರುವ ಕಾನೂನು ಮತ್ತು ಸುವ್ಯವಸ್ಥೆ ಸೂಚ್ಯಂಕ-2022ರ (' 2022) ವರದಿ ಪ್ರಕಾರ ಐದು ಅತ್ಯಂತ ಸುರಕ್ಷಿತ ದೇಶಗಳು ಎಂದರೆ ಸಿಂಗಾಪುರ, ತಜಕಿಸ್ತಾನ, ನಾರ್ವೆ, ಸ್ವಿಟ್ಜರ್ಲೆಂಡ್, ಇಂಡೋನೇಷಿಯಾ) 4)→ರಿಷಿ ಸುನಾಕ್ ಇಂಗ್ಲೆಂಡ್‌ನ ಪ್ರಧಾನಿಯಾಗಿ ಆಯ್ಕೆಯಾದರು. ಇದೇ ರೀತಿ ಬೇರೆ ಬೇರೆ ದೇಶದಲ್ಲಿ ಅಲ್ಲಿನ ಸರ್ಕಾರದ ಪ್ರಮುಖರಾಗಿ(ಅಧ್ಯಕ್ಷ/ಉಪಾಧ್ಯಕ್ಷ/ಪ್ರಧಾನಿ) ಭಾರತೀಯ ಮೂಲದವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅಂಶಗಳನ್ನು ಹೊಂದಿಸಿ ಬರೆಯಿರಿ ಪಟ್ಟಿ-1→ಪಟ್ಟಿ-2 ಎ) ಗಯಾನಾ→1) ಮೊಹಮ್ಮದ್ ಇರ್ಫಾನ್ ಅಲಿ ಬಿ) ಐರ್ಲೆಂಡ್→2) ಲಿಯೋ ವರದಕರ್ ಸಿ) ಸುರಿನಾಂ→3) ಚಂದ್ರಿಕಾ ಪ್ರಸಾದ್ ಸಂತೋಖಿ ಡಿ) ಪೋರ್ಚುಗಲ್→4) ಅಂಟೋನಿಯೋ ಕೋಸ್ಟ್. ಉತ್ತರ ಸಂಕೇತಗಳು ಎ) ಎ- 1, ಬಿ-4, ಸಿ-3, ಡಿ-2 ಬಿ) ಎ- 2, ಬಿ-4, ಸಿ-1, ಡಿ-3 ಸಿ) ಎ- 1, ಬಿ-2, ಸಿ-3, ಡಿ-4 ಡಿ) ಎ- 3, ಬಿ- 1 ಸಿ-2, ಡಿ-4‌ ಉತ್ತರ: ಸಿ 5)→ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಪೂರಕವಾಗಿ 2025ಕ್ಕೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಸಾಧಿಸಲು ವಿಶೇಷ ಸಮಿತಿ ರಚಿಸಲಾಗಿದೆ. ಹಾಗಾದರೆ ‘ಕರ್ನಾಟಕ: ಒಂದು ಟ್ರಿಲಿಯನ್ ಡಾಲರ್ ಜಿಡಿಪಿಯ ಗುರಿ (: $1 )’ ಅನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರು? ಎ) ಟಿ. ವಿ. ಮೋಹನ್‌ದಾಸ್ ಪೈ ಮತ್ತು ನಿಶಾ ಹೊಳ್ಳ ಬಿ) ಎನ್. ಆರ್. ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಸಿ) ನಂದನ ನಿಲೇಕಣಿ ಮತ್ತು ಚೈತ್ರಾ ಪೈ ಡಿ) ಮೇಲಿನ ಯಾರೂ ಅಲ್ಲ ಉತ್ತರ: ಎ 6)→ಉಗ್ರರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವ ಕುರಿತಂತೆ ಜಾಗತಿಕವಾಗಿ ಕಣ್ಗಾವಲು ಸಂಸ್ಥೆ `ಆರ್ಥಿಕ ಕ್ರಿಯಾಯೋಜನೆ ಕಾರ್ಯಪಡೆ ( ())’ ಕೆಲಸ ಮಾಡುತ್ತದೆ. ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವ ಬೆಳವಣಿಗೆ ಕುರಿತ ‘ಬೂದು ವಲಯ’ (ಗ್ರೇ ಲಿಸ್ಟ್) ಪಟ್ಟಿಯಿಂದ ಪಾಕಿಸ್ತಾನವನ್ನು ಕೈಬಿಡಲಾಗಿದೆ. ಎಷ್ಟು ವರ್ಷಗಳಿಂದ ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಇಡಲಾಗಿತ್ತು? ಎ) 10→ಬಿ) 12 ಸಿ) 4 ಡಿ) ಮೇಲಿನ ಯಾವುದೂ ಸರಿಯಾಗಿಲ್ಲ ಉತ್ತರ: ಸಿ (ಮಾಹಿತಿ: ಯೂಟ್ಯೂಬ್ ಚಾನೆಲ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.