ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ವಿವಿಧ ಹುದ್ದೆಗಳು ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಹಾಗೂ ಕೋಲ್ಕತ್ತಾದ ಪ್ರಾದೇಶಿಕ ಕಚೇರಿಗಳಲ್ಲಿ ಖಾಲಿಯಿರುವ ಹತ್ತು ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಸಹಾಯಕ ಸಂಪಾದಕ, ಉಪ ಸಂಪಾದಕ(ಹಿಂದಿ ಮತ್ತು ಇಂಗ್ಲಿಷ್‌ ಭಾಷೆ), ಸೇಲ್ಸ್‌ ಕಮ್ ಎಕ್ಸಿಬಿಷನ್‌ ಅಸಿಸ್ಟೆಂಟ್‌, ಹಿರಿಯ ಅಕೌಂಟೆಟ್‌, ಟೆಕ್ನಿಕಲ್ ಅಸಿಸ್ಟೆಂಟ್‌, ರಿಸೆಪ್ಷನಿಸ್ಟ್‌ ಮತ್ತು ಟೆಲಿಫೋನ್ ಆಪರೇಟರ್‌ ತಲಾ ಒಬ್ಬರು ಮತ್ತು ಸ್ಟೆನೊಗ್ರಾಫರ್‌ ಗ್ರೇಡ್ – ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿದೆ. ವೇತನ : ಮಾಸಿಕ ₹25,500 ರಿಂದ ₹1,77,1500. ಅರ್ಜಿಯನ್ನು ಸಾಹಿತ್ಯ ಅಕಾಡೆಮಿ ಜಾಲತಾಣದಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲೇ ಸಲ್ಲಿಸಬೇಕು. ಅ.29ರಂದು ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನ ನವೆಂಬರ್ 28, 2022. ಅರ್ಜಿಯ ನಮೂನೆ ಹಾಗೂ ಇನ್ನಿತರ ವಿವರಗಳಿಗಾಗಿ ://-../ ಜಾಲತಾಣಕ್ಕೆ ಭೇಟಿಕೊಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.