ಬಸವನಬಾಗೇವಾಡಿ | ಬೆರಳಚ್ಚುಗಾರ, ದಲಾಯತ್ ಹುದ್ದೆಗೆ ಅರ್ಜಿ ಆಹ್ವಾನ ಬಸವನಬಾಗೇವಾಡಿ: ಇಲ್ಲಿನ ತಾಲ್ಲೂಕು ಸೇವಾ ಸಮಿತಿಯು ಆಡಳಿತ ಸಹಾಯಕ ಒಂದು ಹುದ್ದೆ, ಬೆರಳಚ್ಚುಗಾರ ಒಂದು ಹುದ್ದೆಗೆ ಗುತ್ತಿಗೆ (ತಾತ್ಕಾಲಿಕ) ಆಧಾರದ ಮೇಲೆ 6 ತಿಂಗಳ ಅವಧಿಗೆ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಡಳಿತ ಸಹಾಯಕ/ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿ ಹಾಗೂ ಸಿನಿಯರ್‌ ಕನ್ನಡ, ಇಂಗ್ಲಿಷ್ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ದಲಾಯತ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ದಾಖಲೆಗಳ ದೃಢೀಕೃತ ಪ್ರತಿಗಳು, ಇತ್ತೀಚಿನ 2 ಭಾವಚಿತ್ರ, ಮೊಬೈಲ್ ಸಂಖ್ಯೆಯೊಂದಿಗೆ ವಿವರದಾದ ಅರ್ಜಿಯನ್ನು ಸೆ.19 ರೊಳಗೆ ಸದಸ್ಯ ಕಾರ್ಯದರ್ಶಿಗಳು, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯಾಲಯಗಳ ಸಂಕೀರ್ಣ, ವಿಜಯಪುರ ರಸ್ತೆ, ಬಸವನಬಾಗೇವಾಡಿ-586203 ಈ ವಿಳಾಸಕ್ಕೆ ಸಲ್ಲಿಸಬೇಕು. ಸಂದರ್ಶನಕ್ಕೆ ಹಾಜರಾಗಲು ಪ್ರತ್ಯೇಕವಾದ ಪತ್ರ ಕಳುಹಿಸುವುದಿಲ್ಲ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸೆ.23 ರಂದು ಬಸವನಬಾಗೇವಾಡಿಯ ತಾಲ್ಲೂಕು ಸೇವಾ ಸಮಿತಿ ಕಚೇರಿಯಲ್ಲಿ ಹಾಜರಾಗಬೇಕು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ತೇಜಸ್ವಿನಿ ಸೊಗಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.