: ನ್ಯಾಯ ಸಂಸ್ಥೆಯಲ್ಲಿ ವೃತ್ತಿಪರ ವಕೀಲರಿಗೆ ಉದ್ಯೋಗ ಬೆಂಗಳೂರು: ರಾಜ್ಯದಲ್ಲಿ ನ್ಯಾಯ ಸಂಸ್ಥೆಯು ವೃತ್ತಿಪರ ವಕೀಲರಿಗಾಗಿ ಪೂರ್ಣ ಸಮಯಕ್ಕೆ ಉದ್ಯೋಗಾವಕಾಶ ನೀಡುತ್ತಿದ್ದು ಕಾನೂನು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತರು ಈ ಅವಕಾಶ ಪಡೆಯಬಹುದಾಗಿದೆ. ನ್ಯಾಯ ಕನ್ನಡದ ಲೀಡ್ ಸಂಸ್ಥೆಯಾಗಿದ್ದು, ಕಾನೂನಿನ ಬಗ್ಗೆ ಅರಿವು ಹೊಂದಿರುವ ಅತ್ಯಂತ ಅನುಭವಿ ಹಿರಿಯ ವಕೀಲರನ್ನು ಹುಡುಕುತ್ತಿದೆ. ಕೆಳಗಿನ ಅರ್ಹತೆಗಳನ್ನು ಹೊಂದಿರುವವರು ಈ ಉದ್ಯೋಗಾವಕಾಶ ಪಡೆಯಬಹುದು. ಕನಿಷ್ಠ 5 ವರ್ಷ ವಕೀಲಿಕೆಯಲ್ಲಿ ಅನುಭವ ಅಥವಾ ಬೋಧನಾ ಅನುಭವ ಹೊಂದಿರಬೇಕು. ನಿರರ್ಗಳವಾಗಿ ಕನ್ನಡ ಮಾತನಾಡಲು ಬರಬೇಕು. ವಿಶೇಷವಾಗಿ ಕನ್ನಡದಲ್ಲಿ ಬರವಣಿಗೆ ಕೌಶಲ್ಯ ಮತ್ತು ಸಂಶೋಧನೆ ಜ್ಞಾನ ಅತ್ಯಗತ್ಯ. ಸಾಮಾಜಿಕ ಮಾಧ್ಯಮಗಳ ಬಳಕೆದಾರರಾಗಿದ್ದು, ಕನ್ನಡಿಗರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಪ್ರಸರಣ ತಂತ್ರಗಳನ್ನು ಸೃಜಿಸಬೇಕು. ಟೀಮ್‌ ಅಥವಾ ಪ್ರಾಜೆಕ್ಟ್ ಲೀಡ್ ಮಾಡುವುದು, ಫೆಲೋಶಿಷ್‌ಗಳ ಮೆಲ್ವೀಚಾರಣೆ, ವಿವಿಧ ಕಂಪನಿ, ಸಂಸ್ಥೆಗಳೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಹೊಂದಿರಬೇಕು. ಬೆಂಗಳೂರಿನಲ್ಲಿರುವವರಿಗೆ ಅವಕಾಶ ನೀಡಲಾಗುವುದು. ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವವರಿಗೆ ಸಂಸ್ಥೆಯು ಆಕರ್ಷಕ ವೇತನ ನೀಡಲಾಗುತ್ತದೆ. ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ ಸಂಪರ್ಕಿಸಬಹುದು: ://../ ಅರ್ಜಿ ಸಲ್ಲಿಸುವ ವೆಬ್‌ ವಿಳಾಸ: ://..///46255 ಇ–ಮೇಲ್‌: @. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.