‘ನಮ್ಮ ಮೆಟ್ರೊ’ದಲ್ಲಿ ಗುತ್ತಿಗೆ ಆಧಾರಿತ ಉದ್ಯೋಗ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್(ಬಿಎಂಆರ್‌ಸಿಎಲ್), ಭದ್ರತಾ ವಿಭಾಗ ಹಾಗೂ ಅಗ್ನಿಶಾಮಕ ವಿಭಾಗಗಳಲ್ಲಿ ಖಾಲಿ ಇರುವ ಅರವತ್ತಕ್ಕೂ ಹೆಚ್ಚು ಗುತ್ತಿಗೆ ಆಧಾರಿತ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಯಾವ ವಿಭಾಗ, ಎಷ್ಟು ಹುದ್ದೆ: ಡೆಪ್ಯೂಟಿ ಚೀಫ್ ಫೈಯರ್ ಫೀಸರ್- 1 ಹುದ್ದೆ, ಫೈಯರ್ ಮ್ಯಾನ್- 25 ಹುದ್ದೆಗಳು, ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್- 1 ಹಾಗೂ ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ -38 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ: ಪಿಯುಸಿ(12 ನೇ ತರಗತಿ) ಹಾಗೂ ಬಿ.ಎಸ್ಸಿ ಪದವಿ ಪೂರೈಸಿರಬೇಕು‌(ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ) ವಯೋಮಿತಿ: ಕನಿಷ್ಠ 25 ವರ್ಷ ಗರಿಷ್ಠ 62 ವರ್ಷಗಳು (ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ) ವೇತನ: ₹25 ಸಾವಿರದಿಂದ ₹60 ಸಾವಿರದವರೆಗೆ (ಹುದ್ದೆಗಳಿಗೆ ಅನುಗುಣವಾಗಿ ವೇತನ ವ್ಯತ್ಯಾಸವಾಗುತ್ತದೆ) ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವರು ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು‌; ಜನರಲ್ ಮ್ಯಾನೇಜರ್ (), ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಕಾಂಪ್ಲೆಕ್ಸ್, .. ರಸ್ತೆ ಶಾಂತಿನಗರ, ಬೆಂಗಳೂರು - 560027 ಅರ್ಜಿ ಸಲ್ಲಿಕೆ ವಿವರ: ಮಾರ್ಚ್ 21 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ‌. ಏಪ್ರಿಲ್ 20, 2023 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 22, 2023. ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಗಾಗಿ ://... ಜಾಲತಾಣಕ್ಕೆ ಭೇಟಿ ನೀಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.