: 70 ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ ರಾಷ್ಟ್ರೀಯ ಕೆಮಿಕಲ್ಸ್‌ ಮತ್ತು ಫರ್ಟಿಲೈಜರ್ಸ್‌ ಲಿಮಿಟೆಡ್‌ (ಆರ್‌ಸಿಎಫ್‌ಎಲ್) ಯಾವುದೇ ಪದವಿಯಲ್ಲಿ ಪಾಸಾದ ಅಭ್ಯರ್ಥಿಗಳಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆ ಹೆಸರು : ಸೆಕ್ರೇಟರಿಯಲ್ ಅಸಿಸ್ಟಂಟ್‌ ಹುದ್ದೆಗಳ ಸಂಖ್ಯೆ : 70 ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವೇತನ: ಕೇಂದ್ರ ಸರ್ಕಾರದ ವೇತನ ಆಯೋಗದ ಅನ್ವಯ ಮಾಸಿಕ ವೇತನ ನೀಡಲಾಗುವುದು. ವಯಸ್ಸು: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಟ 25 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಆಯ್ಕೆ ವಿಧಾನ: ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ನೇರ ನೇಮಕ ಮಾಡಲಾಗುತ್ತದೆ ಅರ್ಜಿ ಸಲ್ಲಿಸಲು ಕಡೆ ದಿನ: 08-04-2023 ವೆಬ್‌ಸೈಟ್‌ ವಿಳಾಸ : ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.