: ಪರಮಾಣು ಇಲಾಖೆ- 484 ಅಪ್ರೆಂಟಿಸ್‌ಗಳಿಗೆ ಅರ್ಜಿ ಬೆಂಗಳೂರು: ಕೇಂದ್ರ ಸರ್ಕಾರದ ಪರಮಾಣು ಇಲಾಖೆಯ ಅದೀನದಲ್ಲಿರುವ ಎಲೆಕ್ಟ್ರಾನಿಕ್ ಕಾರ್ಪೋರೆಷನ್‌ ಆಫ್ ಇಂಡಿಯಾ ಲಿಮಿಟೆಡ್‌ 484 ಅಪ್ರೆಂಟಿಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಐಟಿಐಯಲ್ಲಿ ಪಾಸಾಗಿರಬೇಕು. ವಿವಿಧ ಟ್ರೇಡ್‌ಗಳಲ್ಲಿ ಐಟಿಐ ವಿದ್ಯಾರ್ಹತೆ ಪಡೆದವರು ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷದ ಒಳಗಿನವರಾಗಿರಬೇಕು. ಸರ್ಕಾರದ ಅನ್ವಯ ಒಬಿಸಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಮಾಸಿಕ ಶಿಷ್ಯವೇತನ ನೀಡಲಾಗುವುದು. ಆನ್‌ಲೈನ್‌ ಮೂಲಕ ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 10 ಕೊನೆಯ ದಿನವಾಗಿದೆ. ಆನ್‌ಲೈನ್‌ ನೋಂದಣಿ ಮಾಡಲು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು: ://.../ ಹೆಚ್ಚಿನ ಮಾಹಿತಿಗೆ ಈ ಜಾಣಕ್ಕೆ ಭೇಟಿ ಕೊಡಿ: ://...//Advt_ITI_16_2023. *** ಡಿಆರ್‌ಡಿಒ: ಜೂನಿಯರ್‌ ರಿಸರ್ಚ್‌ ಫೆಲೊಶಿಪ್‌ಗಳಿಗೆ ಅರ್ಜಿ ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಎರಡು ಜೂನಿಯರ್‌ ರಿಸರ್ಚ್‌ ಫೆಲೊಶಿಪ್‌ (ಜೆಆರ್‌ಎಫ್)ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನ ಡಿಆರ್‌ಡಿಒ ಕಚೇರಿಗೆ ಈ ಜೆಆರ್‌ಎಫ್‌ಗಳನ್ನು ನಿಯೋಜನೆ ಮಾಡಲಾಗುವುದು. ಬಿ.ಇ, ಬಿ.ಟೆಕ್‌ ಅಥವಾ ಎಂ.ಇ, ಎಂ.ಟೆಕ್‌ ಪಡೆದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಜೆಆರ್‌ಎಫ್‌ಗೆ ನೇಮಕವಾದವರಿಗೆ ಮಾಸಿಕ ₹ 46,990 ವೇತನ ನೀಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 28 ವರ್ಷದ ವಯಸ್ಸಿನ ಒಳಗೆ ಇರಬೇಕು. ಒಬಿಸಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿಯನ್ನು ಅಕ್ಟೋಬರ್‌ 10ರ ಒಳಗೆ ಸಲ್ಲಿಸಬೇಕು. ವೆಬ್‌ಸೈಟ್‌: ://.../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.