ಕೆಎಎಸ್ ಪ್ರಿಲಿಮ್ಸ್ ಸ್ಪೆಷಲ್: ಕರ್ನಾಟಕ ಆರ್ಥಿಕ ಸಮೀಕ್ಷೆ 2023-24 ಭಾಗ 10 1. ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನ ಪ್ರಮಾಣ ಎಷ್ಟು? (1) 17.9 (2) 17.2 (3) 16.5 (4) 16.9 ಉತ್ತರ: (3) 2020ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನ ಪ್ರಮಾಣ 16.5 ಆಗಿತ್ತು. 2. ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ ಎಷ್ಟು ? (1) 6.5 (2) 6.3 (3) 6.7 (4) 6.2 ಉತ್ತರ: (4) 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ 6.2 ಆಗಿತ್ತು. 3. ಕರ್ನಾಟಕದಲ್ಲಿ 2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣ ಎಷ್ಟು ? (1) 83 (2) 69 (3) 92 (4) 97 ಉತ್ತರ: (2) 2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣವು 69 ಆಗಿತ್ತು. 4. ಕರ್ನಾಟಕದಲ್ಲಿ 2020 ರಲ್ಲಿ 1000 ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣ ಎಷ್ಟು ? (1) 25 (2) 21 (3) 19 (4) 23 ಉತ್ತರ: (3) 2020 ರಲ್ಲಿ 1000 ಜೀವಂತ ಜನನಗಳಿಗೆ ಇದ್ದ ಶಿಶು ಮರಣ ಪ್ರಮಾಣವು 19 ಆಗಿತ್ತು. 5. ಕರ್ನಾಟಕದಲ್ಲಿ 2020 ರಲ್ಲಿ ಪ್ರತಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ ಪ್ರಮಾಣ ಎಷ್ಟು ? (1) 28 (2) 26 (3) 29 (4) 21 ಉತ್ತರ: (4) 2020 ರಲ್ಲಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ ಪ್ರಮಾಣ 21 ಆಗಿತ್ತು. 6. ಕರ್ನಾಟಕದಲ್ಲಿ 2020 ರಲ್ಲಿ ಎಷ್ಟು ಶೇಕಡಾ ದಂಪತಿಗಳು ಕುಟುಂಬ ಯೋಜನಾ ಕ್ರಮಗಳನ್ನು ಕೈಗೊಂಡಿದ್ದಾರೆ ? (1) 63% (2) 67.9% (3) 68.7% (4) 70.9% ಉತ್ತರ: (3) 2020 ರಲ್ಲಿ ಕುಟುಂಬ ಯೋಜನೆ ಚಿಕಿತ್ಸೆಗೆ ಒಳಪಟ್ಟ ದಂಪತಿಗಳ ಶೇಕಡಾವಾರು ಪ್ರಮಾಣವು 68.7% ಆಗಿದೆ. 7. ಕರ್ನಾಟಕದಲ್ಲಿ 2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ ಎಷ್ಟು ? (1) 67.9 ವರ್ಷಗಳು (2) 70.9 ವರ್ಷಗಳು (3) 69.7 ವರ್ಷಗಳು (4) 68.7 ವರ್ಷಗಳು ಉತ್ತರ: (3) 2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ 67.9 ವರ್ಷಗಳು. 8. ಕರ್ನಾಟಕದಲ್ಲಿ 2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ ಎಷ್ಟು? (1) 67.9 ವರ್ಷಗಳು (2) 70.9 ವರ್ಷಗಳು (3) 69.7 ವರ್ಷಗಳು (4) 68.7 ವರ್ಷಗಳು ಉತ್ತರ: (2) 2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ 70.9 ವರ್ಷಗಳು. 9. ರಾಜ್ಯದಲ್ಲಿ ಎಷ್ಟು ಶೇಕಡಾವಾರು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ ? (1) 87% (2) 90% (3) 97% (4) 100% ಉತ್ತರ: (3) ರಾಜ್ಯದಲ್ಲಿ ಎಷ್ಟು ಶೇಕಡಾವಾರು 97 ರಷ್ಟು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ 10. 2020 ರಲ್ಲಿ ರಾಜ್ಯದಲ್ಲಿ ಇದ್ದ ಒಟ್ಟು ಫಲವತ್ತತೆ ದರ ಎಷ್ಟು? (1) 1.5 (2) 1.6 (3) 1.7 (4) 1.8 ಉತ್ತರ: (3) ಕರ್ನಾಟಕದಲ್ಲಿ 2015–16 ರಲ್ಲಿ 1.8 ರಷ್ಟಿದ್ದ ಒಟ್ಟು ಫಲವತ್ತತೆ ದರ 2020 ರಲ್ಲಿ 1.7 ಕ್ಕೆ ಇಳಿದಿದೆ. (2015 ರಿಂದ 2020 ರವರೆಗೆ ಕರ್ನಾಟಕದ ಆರೋಗ್ಯ ಸೂಚಕಗಳಿಗಾಗಿ ಇಂಗ್ಲಿಷ್ ಆವೃತ್ತಿಯಲ್ಲಿ ನೀಡಿದ ಕೋಷ್ಟಕವನ್ನು ನೋಡಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.