ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಸಮಾಂತರ ಶ್ರೇಢಿಗಳು ಗಣಿತ ಪ್ರಮುಖಾಂಶಗಳು *ಮೊದಲ ಪದವನ್ನು ಹೊರತುಪಡಿಸಿ ಪ್ರತಿಯೊಂದು ಪದವನ್ನು ಪಡೆಯಲು ಅದರ ಹಿಂದಿನ ಪದಕ್ಕೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೂಡಿಸುವುದರಿಂದ ಪಡೆಯುವ ಸಂಖ್ಯಾ ಪಟ್ಟಿಯೇ ಸಮಾಂತರ ಶ್ರೇಢಿ. ಆ ಸ್ಥಿರ ಸಂಖ್ಯೆಯನ್ನು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ಎನ್ನುತ್ತಾರೆ. ಇದು ಧನ, ಋಣ ಅಥವಾ ಶೂನ್ಯ ಆಗಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ. ಸಮಾಂತರ ಶ್ರೇಢಿಯ ಮೊದಲ ಪದ a1, ಎರಡನೇ ಪದ a2.... nನೇ ಪದ , ಸಾಮಾನ್ಯ ವ್ಯತ್ಯಾಸ ಆಗಿರಲಿ ಆಗ ಸಮಾಂತರ ಶ್ರೇಢಿಯು a1, a2, a3 ...... ಆಗಿರುತ್ತದೆ. ಆದ್ದರಿಂದ a2- a1= a3 - a2=..................= - -1 = , + , + 2d, + 3d ............. ಇದು ಸಮಾಂತರ ಶ್ರೇಡಿಯನ್ನು ಸೂಚಿಸುತ್ತದೆ. ಇದರಲ್ಲಿ ಮೊದಲ ಪದ, ಸಾಮಾನ್ಯ ವ್ಯತ್ಯಾಸ. ಇದು ಸಮಾಂತರ ಶ್ರೇಢಿಯ ಸಾಮಾನ್ಯ ರೂಪವಾಗಿದೆ. ಈ ಸಮಾಂತರ ಶ್ರೇಢಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ ಗಳನ್ನು ಕಂಡುಹಿಡಿಯಿರಿ. ಸಂಖ್ಯೆಗಳು ಸಮಾಂತರ ಶ್ರೇಢಿಯಲ್ಲಿವೆ ಎಂದು ನಮಗೆ ತಿಳಿದಿದ್ದಲ್ಲಿ, ಯಾವುದೇ ಎರಡು ಅನುಕ್ರಮ ಪದಗಳನ್ನು ಉಪಯೋಗಿಸಿ ಕಂಡುಹಿಡಿಯಬಹುದು. ಸಮಾಂತರ ಶ್ರೇಢಿಯ ನೇ ಪದ: ಸಮಾಂತರ ಶ್ರೇಢಿಯ ಮೊದಲ ಪದ ಸಾಮಾನ್ಯ ವ್ಯತ್ಯಾಸ ಆದಾಗ ಅದರ nನೇ ಪದವು ಸಮಾಂತರ ಶ್ರೇಢಿಯ ಮೊದಲ ಪದಗಳ ಮೊತ್ತ ಮೊದಲ ಪದ ಸಾಮಾನ್ಯ ವ್ಯತ್ಯಾಸ ಕೊಟ್ಟಾಗ ಮೊದಲ ಪದ ಮತ್ತು ಕೊನೆಯ ಪದ ಕೊಟ್ಟಾಗ ಪ್ರಶ್ನೋತ್ತರಗಳು 1. ಒಂದು ಸಮಾಂತರ ಶ್ರೇಢಿಯ ನೇ ಪದ (7n+1) ಆದಾಗ, ಅದರ 5ನೇ ಪದ ಎ. 36 ಬಿ. 35 ಸಿ. 13 ಡಿ. 8 ಉತ್ತರ: ಎ. 36 2. 10, 7, 4 ..... ಈ ಸಮಾಂತರ ಶ್ರೇಢಿಯ 30ನೇ ಪದ ಎ. 97 ಬಿ. 77 ಸಿ. -77 ಡಿ. -87 ಉತ್ತರ: ಸಿ. -77 3. ಒಂದು ಸಮಾಂತರ ಶ್ರೇಢಿಯ 11ನೇ ಪದ 38, 16ನೇ ಪದ 73 ಆದರೆ 31ನೇ ಪದವನ್ನು ಕಂಡುಹಿಡಿಯಿರಿ. ಪರಿಹಾರ: =16, =11 4. 6ರಿಂದ ಭಾಗಿಸಲ್ಪಡುವ ಮೊದಲ 40 ಧನಾತ್ಮಕ ಪೂರ್ಣಾಂಕಗಳ ಮೊತ್ತವೇನು? ಪರಿಹಾರ: 6ರಿಂದ ಭಾಗವಾಗುವ ಧನ ಸಂಖ್ಯೆಗಳು 6, 12, 18, 24 … ಸಾಮಾನ್ಯ ವ್ಯತ್ಯಾಸ 6 ಮತ್ತು ಮೊದಲ ಪದ 6 5. ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ ಪದ 5, ಕೊನೆಯ ಪದ 45 ಮತ್ತು ಮೊತ್ತ 400 ಆದರೆ ಅದರ ಪದಗಳ ಸಂಖ್ಯೆ ಮತ್ತು ಸಾಮಾನ್ಯ ವ್ಯತ್ಯಾಸ ಕಂಡುಹಿಡಿಯಿರಿ. *** ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.