ಮಾಧ್ಯಮಗಳಲ್ಲಿ ಅವಕಾಶಗಳು ಬೇಕೆ? ಇಲ್ಲಿದೆ ಅವಕಾಶ... ಪತ್ರಕರ್ತ/ಪತ್ರಕರ್ತೆಯಾಗಬೇಕು ಎಂಬ ಕನಸು ಹಲವರಿಗಿರುತ್ತದೆ. ಅದರಲ್ಲೂ ಟಿ.ವಿ.ಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇಂದು ಹೆಚ್ಚು. ಇಂಥ ಉತ್ಸಾಹಿಗಳಿಗೆ ಪತ್ರಿಕೋದ್ಯಮದಲ್ಲಿ ತರಬೇತಿಯನ್ನು ನೀಡಿ, ವೃತ್ತಿಪರರನ್ನಾಗಿಸಲು ಬೆಂಗಳೂರಿನಲ್ಲಿ ಸಂಸ್ಥೆಯೊಂದು ಹುಟ್ಟಿಕೊಂಡಿದೆ. ಅದುವೇ ‘ಅಲ್ಮಾ ಸೂಪರ್ ಮಿಡಿಯಾ ಸ್ಕೂಲ್‌’. ಪತ್ರಕರ್ತ ಗೌರೀಶ್ ಅಕ್ಕಿ ನೇತೃತ್ವದಲ್ಲಿ ಈ ಸಂಸ್ಥೆ ಆರಂಭವಾಗಿದೆ. ಯಾವುದೇ ವಿಷಯದಲ್ಲಿ ಡಿಗ್ರಿ ಪಡೆದು, ಆಂಗ್ಲಭಾಷಾ ಜ್ಞಾನವಿರುವವರು ಈ ಸಂಸ್ಥೆಗೆ ಪ್ರವೇಶವನ್ನು ಪಡೆಯಬಹುದು. ಟಿ.ವಿ., ರೇಡಿಯೊ, ಮುದ್ರಣಮಾಧ್ಯಮ, ಅಂತರ್ಜಾಲ ವಿಭಾಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೋರ್ಸ್‌ಗೆ ಸೇರಬಹುದು. ಈ ಕೋರ್ಸ್‌ನ ಅವಧಿ ಒಂದು ವರ್ಷ; ಎರಡು ಸೆಮಿಸ್ಟರ್‌ಗಳಿರುತ್ತವೆ. ಕೋರ್ಸ್‌ ಮುಗಿದ ಮೇಲೆ ರಾಜ್ಯದ ಹೆಸರಾಂತ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಇಂಟರ್ನಶಿಪ್‌ಗೆ ಅವಕಾಶವಿರುತ್ತದೆ. ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ. ಕೋರ್ಸ್‌ನ ವಿಷಯಗಳು ಟಿ.ವಿ./ದೃಶ್ಯಮಾಧ್ಯಮ: ಕಾಪಿ ಎಡಿಟರ್‌, ವರದಿಗಾರಿಕೆ, ಪ್ರೊಡ್ಯೂಸರ್ ಮತ್ತು ನ್ಯೂಸ್ ಆ್ಯಂಕರ್. ಮುದ್ರಣಮಾಧ್ಯಮ: ಕಾಪಿ ಎಡಿಟರ್‌, ವರದಿಗಾರಿಕೆ, ನುಡಿಚಿತ್ರ ಬರಹಗಳು ಹಾಗೂ ಅಂಕಣ ಬರಹ ರೇಡಿಯೊ: ಕಾಪಿ ಎಡಿಟರ್, ವರದಿಗಾರಿಕೆ, ನ್ಯೂಸ್ ರೀಡರ್, ನ್ಯೂಸ್ ಬುಲೆಟಿನ್ ‍ಪ್ರೊಡ್ಯುಸರ್‌ ಅಂರ್ತಜಾಲ: ಕಾಪಿ ಎಡಿಟರ್ ಮತ್ತು ವರದಿಗಾರಿಕೆ. ಬೇರೆ ಬೇರೆ ವಿಭಾಗಕ್ಕೆ ಅನುಗುಣವಾಗಿ ತರಗತಿಗಳನ್ನು ನಡೆಸಲಾಗುವುದು. ಲೋಕಾಯುಕ್ತ, ಸೈಬರ್ ಕ್ರೈಂ ವಿಭಾಗ, ಫೊರೆನಿಕ್ಸ್ ಲ್ಯಾಬ್, ಎಫ್‌ಐಸಿಸಿಐ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜೊತೆ ವಿದ್ಯಾರ್ಥಿಗಳಿಗೆ ಸಂವಾದವನ್ನು ಏರ್ಪಡಿಸುವುದು ಈ ಕೋರ್ಸಿನ ವಿಶೇಷ.ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಅನುಭವೀ ‍ಪತ್ರಕರ್ತರು ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಲಿದ್ದಾರೆ. ಪ್ರವೇಶಕ್ಕೆ ಕೊನೆಯ ದಿನಾಂಕ: ಜುಲೈ 21 ಸಂಪರ್ಕಕ್ಕೆ: 7618746667 * : .. * : @. * : ../----611392509195592 * : ://./media_alma ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.