ವಿದ್ಯಾರ್ಥಿ ವೇತನ: ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22 ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22 ವಿವರ: ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22, ಮಾಜಿ ಸೈನಿಕರು / ಮಾಜಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಅವಲಂಬಿತ ಮಕ್ಕಳು ಮತ್ತು ಮೃತರ ಪತ್ನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ. ಅರ್ಹತೆ: ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಅಂಕಗಳೊಂದಿಗೆ 10+2 / ಡಿಪ್ಲೊಮಾ / ಡಿಗ್ರಿ ಪದವಿ ಹೊಂದಿರುವ ಮತ್ತು ವೃತ್ತಿಪರ ಪದವಿ ಕೋರ್ಸ್‌‌ನ ಮೊದಲ ವರ್ಷದಲ್ಲಿ (ಲ್ಯಾಟರಲ್ ಎಂಟ್ರಿ ಮತ್ತು ಇಂಟಿಗ್ರೇಟೆಡ್ ಕೋರ್ಸ್‌‌ಗಳನ್ನು ಹೊರತುಪಡಿಸಿ) ಪ್ರವೇಶ ಪಡೆದ ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 28, 2022 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ:.b4s.//PMF1 ಐಐಟಿ ಗಾಂಧಿನಗರ್ ಫಿಸಿಕ್ಸ್ ಡಿಸಿಪ್ಲಿನ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ 2022 ವಿವರ: ಐಐಟಿ ಗಾಂಧಿನಗರ್ ಫಿಸಿಕ್ಸ್ ಡಿಸಿಪ್ಲಿನ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2022, ಪಿಎಚ್‌ಡಿ ಪದವೀಧರರಿಗೆ ನೀಡುವ ಸಂಶೋಧನಾ ಅವಕಾಶವಾಗಿದೆ. ಅರ್ಹತೆ: ‘ಸಾಫ್ಟ್-ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್‌’ನಲ್ಲಿ ತರಬೇತಿಯೊಂದಿಗೆ ಭೌತಶಾಸ್ತ್ರದಲ್ಲಿ ಅಥವಾ ವಿಜ್ಞಾನ / ಎಂಜಿನಿಯರಿಂಗ್‌ನ ಯಾವುದೇ ಸಂಬಂಧಿತ ಶಾಖೆಯಲ್ಲಿ ಪಿಎಚ್‌ಡಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 28, 2022 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//GPP3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.