‘ದೂರಶಿಕ್ಷಣ’ದ ಪದವಿಯನ್ನು ಉದ್ಯೋಗಕ್ಕೇಕೆ ಪರಿಗಣಿಸುವುದಿಲ್ಲ? 1. ದೂರಶಿಕ್ಷಣದ ಮೂಲಕ ಪಡೆದ ಪದವಿಯನ್ನು ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗಕ್ಕೇಕೆ ಪರಿಗಣಿಸುವುದಿಲ್ಲ? ದಯವಿಟ್ಟು ತಿಳಿಸಿ. - ಪ್ರಕಾಶ್ ಕಡೂರ್, ಊರು ತಿಳಿಸಿಲ್ಲ. ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ನಡೆಸುವ ದೂರ ಶಿಕ್ಷಣದಿಂದ ಪದವಿ ಪೂರ್ಣಗೊಳಿಸಿದರೆ ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ. ಆದರೆ, ಕಲಿಕೆಯ ದೃಷ್ಟಿಯಿಂದ ರೆಗ್ಯುಲರ್ ಮತ್ತು ದೂರಶಿಕ್ಷಣ ಕೋರ್ಸ್‌ಗಳಲ್ಲಿ ವ್ಯತ್ಯಾಸವಿರುವುದು ಸಹಜ. ಆದ್ದರಿಂದ, ವೈಯಕ್ತಿಕ ಸಂದರ್ಶನದಲ್ಲಿ ವಿಷಯದ ಕುರಿತು ಸಂದರ್ಶಕರು ಉದ್ದೇಶಪೂರ್ವಕವಾಗಿ ಒತ್ತಡ ತರುವಂತ ಪ್ರಶ್ನೆಗಳನ್ನೂ, ಸನ್ನಿವೇಶಗಳನ್ನೂ ಸೃಷ್ಟಿಸಿ, ಅಭ್ಯರ್ಥಿಗಳ ಕಲಿಕೆಯ ಮಟ್ಟ, ವೃತ್ತಿ ಸಂಬಂಧಿತ ಕೌಶಲಗಳು ಹಾಗೂ ವ್ಯಕ್ತಿತ್ವವನ್ನು ಪರಿಶೀಲಿಸುವುದು ಸಾಮಾನ್ಯ. ಇಂತಹ ಒತ್ತಡ ತರುವ ಪ್ರಶ್ನೆಗಳಿಂದ ಕಂಗಾಲಾಗದೆ, ಆತ್ಮವಿಶ್ವಾಸದಿಂದ ಉತ್ತರಿಸುವುದರಿಂದ ನಿಮ್ಮ ವ್ಯಕ್ತಿತ್ವದ ಪ್ರೌಢತೆ ಎದ್ದುಕಾಣುತ್ತದೆ. ಆದ್ದರಿಂದ, ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳನ್ನು ನಿರೀಕ್ಷಿಸಿ, ಸೂಕ್ತವಾಗಿ ತಯಾರಾಗುವುದೇ ನಿಮ್ಮ ಕಾರ್ಯತಂತ್ರವಾಗಿರಬೇಕು. ಈ ಕುರಿತು ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೀಕ್ಷಿಸಿ: ://../?=T_z3ngIeyWk 2. ನಾನು ಬಿಎ (ಪತ್ರಿಕೋದ್ಯಮ) ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಇದಾದ ನಂತರ, ಯಾವ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು? ಹಾಗೂ ಪದವಿಯಲ್ಲಿ ಓದುತ್ತಾ, ಯಾವ ರೀತಿ ಹಣ ಸಂಪಾದನೆ ಮಾಡಬಹುದೆಂದು ತಿಳಿಸಿ. - ಹೆಸರು, ಊರು ತಿಳಿಸಿಲ್ಲ. ಬಿಎ (ಪತ್ರಿಕೋದ್ಯಮ) ನಂತರ ಮುದ್ರಣ, ರೇಡಿಯೊ, ಟೆಲಿವಿಷನ್, ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ಹಾಗೂ ಭಾಷೆಯ ತಜ್ಞತೆಯಿದ್ದರೆ, ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ. ಈಗ, ವಿದ್ಯಾಭ್ಯಾಸದ ಜೊತೆಗೆ ಮಾಡಬಹುದಾದ ಅನೇಕ ಉದ್ಯೋಗಗಳಿವೆ. ಈ ಅರೆಕಾಲಿಕ ಉದ್ಯೋಗಗಳು ನಿಮ್ಮನ್ನು ವೃತ್ತಿಪರ ಜೀವನಕ್ಕಾಗಿ ಸಿದ್ಧಪಡಿಸುವುದರ ಜೊತೆಗೆ ನಿಮ್ಮ ವ್ಯಕ್ತಿತ್ವದ ಮೌಲ್ಯವನ್ನು ವೃದ್ಧಿಸಿ ಒಂದು ಹೊಸ ಜಗತ್ತನ್ನೇ ನಿಮಗೆ ಪರಿಚಯಿಸುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: ://../----3/ 3. ನಾನು ಬಿಕಾಂ ಪದವಿ ಪಡೆದಿದ್ದು, ಬಿ.ಇಡಿ ಮಾಡಬೇಕು ಎಂದುಕೊಂಡಿದ್ದೇನೆ. ಆಮೇಲೆ, ನಾನು ಶಿಕ್ಷಕ ವೃತ್ತಿಯನ್ನು ಅನುಸರಿಸಬಹುದೇ? ಹಾಗೂ ಯಾವ ವಿಷಯವನ್ನು ಬೋಧಿಸಬಹುದು? - ಹೆಸರು, ಊರು ತಿಳಿಸಿಲ್ಲ. ನಮಗಿರುವ ಮಾಹಿತಿಯಂತೆ, ಬಿಕಾಂ, ಬಿ.ಇಡಿ ನಂತರ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪದವಿ ಕೋರ್ಸ್ನಲ್ಲಿ ಓದಿರುವ ಪ್ರಮುಖ ವಿಷಯಗಳನ್ನು ಪ್ರೌಢಶಾಲೆಗಳಲ್ಲಿ ಭೋಧಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:://.//---/----#2 4. ಎನ್‌ಐಒಎಸ್ ಸರ್ಟಿಫಿಕೇಟ್ ಅನ್ನು ಎಲ್ಲಿ ಪಡೆದುಕೊಳ್ಳಬೇಕು? ಸಂಪೂರ್ಣ ಮಾಹಿತಿ ತಿಳಿಸಿ. -ಅನಿಲ್ ಕುಮಾರ್, ಬೀದರ್. ಎನ್‌ಐಒಎಸ್(ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್‌) ಸರ್ಟಿಫಿಕೇಟ್ ಪಡೆದುಕೊಳ್ಳುವ ಮಾಹಿತಿಗಾಗಿ ಗಮನಿಸಿ: ://../--/----. 5. ನಾನು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಕನ್ನಡದಲ್ಲಿ ಮತ್ತು ಆರನೆಯ ತರಗತಿಯಿಂದ ಹತ್ತನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೇನೆ. ಪಿಯುಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತಿರುವೆ. ನಾನು ಅರ್ಜಿ ಹಾಕುವಾಗ ಯಾವ ಮಾಧ್ಯಮ ಎಂದು ನಮೂದಿಸಬೇಕು? ತಿಳಿಸಿ. - ಹೆಸರು, ಊರು ತಿಳಿಸಿಲ್ಲ. ನೀವು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ, ಅರ್ಹತಾ ಪರೀಕ್ಷೆಯಲ್ಲಿನ ಮಾಧ್ಯಮವನ್ನು ನಮೂದಿಸುವುದು ಸೂಕ್ತ. 6. ನಾನು ಐಟಿಐ (ಫಿಟ್ಟರ್) ಮುಗಿಸಿದ್ದೇನೆ. ನಂತರ, ಡಿಪ್ಲೊಮಾ (ಮೆಕ್ಯಾನಿಕಲ್) ಮುಗಿಸಿದ್ದೇನೆ. ನನ್ನ ತಂದೆಯವರು ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನನ್ನನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ದ್ವಿತೀಯ ಪಿಯುಸಿಗೆ ತತ್ಸಮಾನವನ್ನು ಕೇಳುತ್ತಿದ್ದು ನಾನು ಮಾಡಿರುವ ಐಟಿಐ(ಫಿಟ್ಟರ್) ಮತ್ತು ಡಿಪ್ಲೊಮಾ(ಮೆಕ್ಯಾನಿಕಲ್), ಪಿಯುಸಿಗೆ ತತ್ಸಮಾನ ಆಗುವುದಿಲ್ಲವೇ? - ಶಿವಕುಮಾರ್ ಪ. ಕಾಳೇನವರ, ಧಾರವಾಡ. ನಮಗಿರುವ ಮಾಹಿತಿಯಂತೆ, ನೀವು ಮಾಡಿರುವ ಎರಡು ವರ್ಷದ ಐಟಿಐ (ಫಿಟ್ಟರ್) ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬಹುದು. ಆದರೂ, ನಿಖರವಾದ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ. 7. ನಾನು ದ್ವಿತೀಯ ಬಿಕಾಂ ಓದುತ್ತಿದ್ದೇನೆ. ನನಗೆ ಬ್ಯಾಂಕ್ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಬ್ಯಾಂಕ್ ಪರೀಕ್ಷೆಯ ತರಬೇತಿಗೆ ಹೋಗಬೇಕು. ಈ ಬಗ್ಗೆ ಮಾಹಿತಿ ನೀಡಿ. - ಹೆಸರು, ಊರು ತಿಳಿಸಿಲ್ಲ. ಬ್ಯಾಂಕ್ ಆಫೀಸರ್ ಪರೀಕ್ಷೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://../--2022/ ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು @..inಗೆ ಕಳಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.