12ನೇ ತರಗತಿ ಫಲಿತಾಂಶ ಶಾಲೆಗಳಿಗೆ ರವಾನೆ: ಸಿಬಿಎಸ್ಇ ನವದೆಹಲಿ(ಪಿಟಿಐ): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿಯ ಮೊದಲ ಹಂತದ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಆಂತರಿಕ ಮೌಲ್ಯ ಮಾಪನ ಮತ್ತು ಪ್ರಯೋಗಾಲಯದ ಅಂಕಗಳು ಶಾಲೆಗಳ ಬಳಿಯೇ ಇದೆ. ಲಿಖಿತ ಪರೀಕ್ಷೆಯ ಅಂಕಗಳನ್ನು ಕಳಿಸಿಕೊಡಲಾಗಿದೆ' ಎಂದರು. ಸಿಬಿಎಸ್ಇಯ 12ನೇ ತರಗತಿಯ 2ನೇ ಹಂತದ ಪರೀಕ್ಷೆಯು ಏಪ್ರಿಲ್ 26ರಿಂದ ಆರಂಭವಾಗಲಿದೆ. ಮೊದಲ ಹಂತದ ಪರೀಕ್ಷೆಯು ಕಳೆದ ವರ್ಷದ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ನಡೆದಿತ್ತು. ಕೊರೊನಾ ನಿಯಂತ್ರಣದ ಭಾಗವಾಗಿ ಸಿಬಿಎಸ್ಇಯ ಪರೀಕ್ಷೆಗಳನ್ನು 2 ಹಂತಗಳಲ್ಲಿ ನಡೆಸುವುದಾಗಿ ಕಳೆದ ವರ್ಷ ಸಿಬಿಎಸ್ಇ ಮಂಡಳಿ ಘೋಷಣೆ ಮಾಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.