ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೆಗಳು 1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಎ. ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಪ್ರತಿ ವರ್ಷ ಜುಲೈ 3 ರಂದು ಆಚರಿಸಲಾಗುತ್ತದೆ. ಬಿ. ನಮ್ಮ ಪರಿಸರದ ಮೇಲೆ ಪ್ಲಾಸ್ಟಿಕ್ ಚೀಲಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಉದ್ದೇಶವಾಗಿದೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ. ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ. ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ : ಡಿ 2. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಎ. ಭಾರತವು ಜುಲೈ 1 2024 ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಟ್ರೇಗಳು, ಪ್ಲೇಟ್‌ ಗಳು, ಕಪ್‌ ಗಳು, ಸ್ಟ್ರಾಗಳು ಮತ್ತು ಪಾಲಿಸ್ಟೈರೀನ್ ಕಂಟೈನರ್‌ ಗಳ ಉತ್ಪಾದನೆ, ವಿತರಣೆ ಮತ್ತು ಬಳಕೆಯನ್ನು ನಿಷೇಧಿಸಿದೆ. ಬಿ. ಭಾರತದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಅನ್ನು ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ. ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ. ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: ಸಿ 3. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಪ್ಲಾಸ್ಟಿಕ್ ಚೀಲಗಳ ಬಳಕೆಯ ಸಮಸ್ಯೆಗೆ ಪರಹಾರಗಳಾಗಿವೆ. ಎ. ಪಾಲಿಪ್ರೊಪಿಲೀನ್ ಚೀಲಗಳ ಬಳಕೆಯನ್ನು ಬಳಕೆ ಮಾಡುವುದು. ಬಿ. ಪರಿಸರ ಸ್ನೇಹಿ ಪರ್ಯಾಯ ವಸ್ತುಗಳಾದ ಹತ್ತಿ, ಸೆಣಬು ಮತ್ತು ಇತ್ಯಾದಿಗಳಿಂದ ತಯಾರಿಸಿದ ಚೀಲಗಳನ್ನು ಬಳಸುವುದು. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ. ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ. ಡಿ ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ : ಡಿ 4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಎ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯು 1995ರಲ್ಲಿ ಪ್ರಾರಂಭವಾದ ಕೇಂದ್ರ ವಲಯದ ಯೋಜನೆಯಾಗಿದೆ. ಬಿ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರತಿ ಎಂಪಿ ಕ್ಷೇತ್ರಕ್ಕೆ ವಾರ್ಷಿಕವಾಗಿ ₹ 5 ಕೋಟಿ ಒದಗಿಸಲಾಗುತ್ತದೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ. ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ. ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ : ಬಿ 5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಎ. ರಾಜ್ಯದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು 2001-02ರಲ್ಲಿ ಪ್ರಾರಂಭಿಸಲಾಗಿದೆ. ಬಿ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ ₹500.00 ಲಕ್ಷಗಳನ್ನು ಒದಗಿಸಲಾಗುತ್ತದೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ. ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ. ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: ಎ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.