ಸಾಮಾನ್ಯ ಜ್ಞಾನ: ಬಾದಾಮಿಯ ಚಾಲುಕ್ಯರು 1. ಬಾದಾಮಿಯ ಚಾಲುಕ್ಯರ ಕಾಲದ ಬೆಳವಣಿಗೆಗಳ ಕುರಿತು ಈ‌ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ವಿಕ್ರಮಾದಿತ್ಯನ ರಾಣಿಯಾದ ಲೋಕ ಮಹಾದೇವಿಯು ಪಟ್ಟದಕಲ್ಲಿನ ಲೋಕೇಶ್ವರ ದೇವಾಲಯವನ್ನು ಕಟ್ಟಿಸಿದ್ದು ಅದು ಈಗ ವಿರೂಪಾಕ್ಷ ದೇಗುಲವೆಂದು ಪ್ರಸಿದ್ಧವಾಗಿದೆ. ಬಿ. ವಿಕ್ರಮಾದಿತ್ಯನ ದ್ವಿತೀಯ ರಾಣಿ ತ್ರೈಲೋಕ್ಯ ಮಹಾದೇವಿಯು ತ್ರೈಲೋಕೇಶ್ವರ ದೇವಾಲಯವನ್ನು ಕಟ್ಟಿಸಿದ್ದು ಅದು ಇಂದು ಮಲ್ಲಿಕಾರ್ಜುನ ದೇಗುಲವೆಂದು ಹೆಸರಾಗಿದೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: 4 2. ಬಾದಾಮಿ ಚಾಲುಕ್ಯರ ಕಾಲದ ಆಡಳಿತಕ್ಕೆ ಸಂಬಂಧಿಸಿದಂತೆ ಈ‌ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ಚಾಲುಕ್ಯರು ಪ್ರಬಲವಾದ ಸೇನಾಡಳಿತವನ್ನು ಸಂಘಟಿಸಿದ್ದು ಅದನ್ನು ‘ಕರ್ನಾಟ ಬಲ’ ಎಂದು ಕರೆಯಲಾಗುತ್ತಿತ್ತು. ಬಿ. ವರಾಹ ರಾಜ ಚಿಹ್ನೆಯಾಗಿದ್ದು ಪಾಲಿಧ್ವಜ ಅವರ ಧ್ವಜವಾಗಿತ್ತು. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: 4 3. ಬಾದಾಮಿ ಚಾಲುಕ್ಯರ ಕಾಲದ ಭೂ ಘಟಕಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ * ಮಂಡಲ, ವಿಷಯ, ದೇಶ, ನಾಡು, ಭೋಗ, ರಾಷ್ಟ್ರ, ಕಂಪಣ, ಗ್ರಾಮ ಇವುಗಳಲ್ಲಿ ಯಾವುದು ಬಾದಾಮಿ ಚಾಲುಕ್ಯರ ಕಾಲದಲ್ಲಿ ಭೂ ಘಟಕಗಳಾಗಿರಲಿಲ್ಲ ? ಎ. ಕಂಪಣ ಮತ್ತು ವಿಷಯ ಬಿ. ಭೋಗ ಮತ್ತು ರಾಷ್ಟ್ರ ಸಿ. ವಿಷಯ ಮತ್ತು ಮಂಡಲ ಡಿ. ಯಾವುದು ಅಲ್ಲ ಉತ್ತರ: ಡಿ 4. ಬಾದಾಮಿ ಚಾಲುಕ್ಯರ ಕಾಲದ ಭೂ ಕಂದಾಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ಭಾಗಕಾರ ಮತ್ತು ವಡ್ಡರಾವುಳ ಇವು ಭೂಕಂದಾಯಗಳಾಗಿದ್ದವು. ಬಿ. ಪೆರ್ಜುಂಕವು ಆ ಕಾಲದ ವಾಣಿಜ್ಯ ತೆರಿಗೆಯಾಗಿತ್ತು. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: 4 5. ಬಾದಾಮಿ ಚಾಲುಕ್ಯರ ಕಾಲದ ವ್ಯಾಪಾರ ವಹಿವಾಟುಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಸಮಾನವೃತ್ತಿಯ ಜನರು ಜೊತೆಗೂಡಿ ಸಂಘಗಳನ್ನು ರಚಿಸಿಕೊಂಡಿದ್ದು ಇವುಗಳನ್ನು ಶ್ರೇಣಿಗಳು ಎಂದು ಕರೆಯಲಾಗುತ್ತಿತ್ತು. ಬಿ. ಅಯ್ಯಾವೊಳೆ ಐನೂರ್ವರು, ಪಟ್ಟಣಿಗಾರು, ತುಂಬುಲಿಗರು ಇವು ಪ್ರಖ್ಯಾತವಾದ ಶ್ರೇಣಿಗಳಾಗಿದ್ದವು. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: 4 6. ಬಾದಾಮಿ ಚಾಲುಕ್ಯರ ಕಾಲದ ವ್ಯಾಪಾರ ವಹಿವಾಟುಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ಅಯ್ಯಾವೊಳೆ ಐನೂರ್ವರು ಎನ್ನುವುದು ಆಗ ಚಾಲ್ತಿಯಲ್ಲಿದ್ದ 500 ಮಹಾರಾಜರನ್ನೊಳಗೊಂಡ ವರ್ತಕ ಸಂಘಗಳ ಮಹಾಶ್ರೇಣಿ ಆಗಿತ್ತು. ಬಿ. ಇದು ಈಸ್ಟ್ ಇಂಡಿಯಾ ಕಂಪನಿಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ:4 7. ಬಾದಾಮಿ ಚಾಲುಕ್ಯರ ಕಾಲದ ಧಾರ್ಮಿಕ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ಬಾದಾಮಿಯ ಚಾಲುಕ್ಯರು ಜೈನ, ಬೌದ್ಧ ಧರ್ಮಗಳ ಮತ್ತು ಶೈವ, ವೈಷ್ಣವ ಪಂಥಗಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹಗಳನ್ನು ನೀಡಿದ್ದರು. ಬಿ. ಈ ಕಾಲದಲ್ಲಿ ಪಾಶುಪತ ಮತ್ತು ಲಕುಲೀಶ ಪಂಥಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದವು. ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ: 4 8. ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಪನ್ನಸ, ಮತ್ತರು, ಮರುತ್ತರು, ನಿವರ್ತನ ಮುಂತಾದ ಪದಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ? ಎ. ಭೂ ಕಂದಾಯ ವ್ಯವಸ್ಥೆ. ಬಿ. ಭೂ ಮಾಪನ ವ್ಯವಸ್ಥೆಯ ಮಾಪಕಗಳು. ಸಿ. ವಾಣಿಜ್ಯ ಕಂದಾಯ ವಿಭಾಗಗಳು. ಡಿ. ವರ್ತಕ ಸಂಘಗಳ ಹೆಸರುಗಳು. ಉತ್ತರ: ಬಿ 9. ಬಾದಾಮಿ ಚಾಲುಕ್ಯರ ಕಾಲದ ಶಾಸನಗಳಲ್ಲಿ ಕಂಡುಬರುವ ವೀಸಾ, ಬಾಂಡಸೇರು, ಕುಳ ಮುಂತಾದ ಉಲ್ಲೇಖಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? ಎ. ತೂಕ ಮತ್ತು ಮಾಪಕದ ಸಾಧನಗಳು. ಬಿ. ಭೂಮಾಪನದ ಅಳತೆಗಳು. ಸಿ. ಕುಟುಂಬ ವ್ಯವಸ್ಥೆಯ ಘಟಕಗಳು. ಡಿ. ಆಡಳಿತ ವ್ಯವಸ್ಥೆಯ ಘಟಕಗಳು. ಉತ್ತರ. ಎ 10. ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಕಂಡು ಬರುವ ಧರಣ, ವೀಸ, ಪೊನ್ನ ಮತ್ತು ಬೇಳೆ ಮುಂತಾದವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? ಎ. ಸೈನ್ಯಾಡಳಿತದ ಒಳಗಿನ ಘಟಕಗಳು. ಬಿ. ಆಹಾರ ಧಾನ್ಯಗಳ ವಿಧಗಳು. ಸಿ. ನಾಣ್ಯಗಳ ವಿಧಗಳು. ಡಿ. ಆಡಳಿತದ ಘಟಕಗಳು. ಉತ್ತರ. ಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.