ವಿದ್ಯಾರ್ಥಿ ವೇತನ: ಎಚ್‌ಡಿಎಫ್‌ಸಿ ಬಡ್ತೇ ಕದಮ್ ಸ್ಕಾಲರ್‌ಷಿಪ್‌ 2022-23 ಎಚ್‌ಡಿಎಫ್‌ಸಿ ಬಡ್ತೇ ಕದಮ್ ಸ್ಕಾಲರ್‌ಷಿಪ್‌ 2022-23 ವಿವರ: ಎಚ್‌‌‌‌‌ಡಿಎಫ್‌‌‌‌‌‌‌‌‍ಸಿ ಬಡ್ತೇ ಕದಮ್ ವಿದ್ಯಾರ್ಥಿವೇತನ, ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಹಣಕಾಸಿನ ನೆರವು ನೀಡುವ ಗುರಿ ಹೊಂದಿರುವ ಕಾರ್ಯಕ್ರಮವಾಗಿದೆ. 11 ಮತ್ತು 12 ನೇ ತರಗತಿ, ಪದವಿಪೂರ್ವ ಕೋರ್ಸ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅರ್ಹತೆಗಳು (ಅರ್ಜಿ ಸಲ್ಲಿಸುವವರು): * ಪ್ರಸ್ತುತ 11 ರಿಂದ ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ತರಗತಿಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು * 11-12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ, ಪದವಿಪೂರ್ವ ಕೋರ್ಸ್‌ಗಳು, ಡಿಪ್ಲೊಮಾ/ಐಟಿಐ ಮತ್ತು ವೃತ್ತಿಪರ ಕೋರ್ಸ್‌ಗಳನ್ನುಅನುಸರಿಸುತ್ತಿರುವ ಅಂಗವಿಕಲ ವಿದ್ಯಾರ್ಥಿಗಳು. * ಮಾನ್ಯತೆ ಪಡೆದ ಕೋಚಿಂಗ್ ಸಂಸ್ಥೆಯಲ್ಲಿ ನೀಟ್, ಜೆಇಇ, ಕ್ಲಾಟ್ ಮತ್ತು ನಿಫ್ಟ್‌‌‌‍ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು. * ಹಿಂದಿನ ತರಗತಿ ಅಥವಾ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು (ಕೋಚಿಂಗ್ ವಿದ್ಯಾರ್ಥಿಗಳಿಗೆ ಶೇ 80) ಪಡೆದಿರಬೇಕು (ಗಮನಿಸಿ: ಅಂಗವಿಕಲ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳ ಅಗತ್ಯವಿಲ್ಲ). * ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹6 ಲಕ್ಷಕ್ಕಿಮತ ಕಡಿಮೆಯಿರಬೇಕು. (ಅಂಗವಿಕಲ ವಿದ್ಯಾರ್ಥಿಗಳಿಗೆ ₹ 8 ಲಕ್ಷಕ್ಕಿಂತ ಕಡಿಮೆಯಿರಬೇಕು). * ಯಾವುದೇ ರೀತಿಯ ಬಿಕ್ಕಟ್ಟಿನ (ಒಂಟಿ ಪೋಷಕ, ಅನಾಥ, ಕುಟುಂಬದಲ್ಲಿ ಮಾರಣಾಂತಿಕ ಕಾಯಿಲೆ, ಇತ್ಯಾದಿ) ಸ್ಥಿತಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿಮತ್ತು ವಿದ್ಯಾರ್ಥಿನಿಯರನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಆರ್ಥಿಕ ನೆರವು: ₹ 1 ಲಕ್ಷದವರೆಗೆ ಅರ್ಜಿ ಸಲ್ಲಿಸಲು ಕೊನೆದಿನ: 30–09-2022 ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//HTPF12 ––––––––– ಎಲ್‍ಐ‍ಸಿ ಎಚ್‍ಎಫ್‍ಎಲ್ ವಿದ್ಯಾದಾನ್ ಸ್ಕಾಲರ್‌ಷಿಪ್‌ 2022‌ ವಿವರ: ಎಲ್‍ಐ‍ಸಿ ಎಚ್‍ಎಫ್‍ಎಲ್ 11ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಮುಂದುವರಿಸುವ ವಿದ್ಯಾರ್ಥಿಗಳಿಗೆ ನೆರವಾಗಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಕಡಿಮೆ ಆದಾಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮೀಸಲಿಡಲಾಗಿದೆ. ಅರ್ಹತೆ: ಪ್ರಸ್ತುತ 11ನೇ ತರಗತಿ ಮತ್ತು ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 3.60 ಲಕ್ಷಕ್ಕಿಂತ ಹೆಚ್ಚಿರಬಾರದು. ಆರ್ಥಿಕ ನೆರವು: ₹20,000ದ ವರೆಗೆ ಅರ್ಜಿ ಸಲ್ಲಿಕೆ ಕೊನೆ ದಿನ: 30-09-2022 ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//LHVT3 ಕೃಪೆ:buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.