ಯುಜಿಸಿಇಟಿ-24: ಆಪ್ಷನ್ ಎಂಟ್ರಿ ಆರಂಭ ಬೆಂಗಳೂರು: ಯುಜಿಸಿಇಟಿ–24ನೇ ಸಾಲಿನ ಎಂಜಿನಿಯರಿಂಗ್‌, ವಾಸ್ತುಶಿಲ್ಪ, ಪಶು ವೈದ್ಯಕೀಯ ಇತ್ಯಾದಿ ಕೋರ್ಸ್‌ಗಳ ಪ್ರವೇಶಕ್ಕೆ ಆಪ್ಟನ್‌ ಎಂಟ್ರಿ (ಆಯ್ಕೆ ದಾಖಲು) ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಚಾಲನೆ ನೀಡಿದೆ. ಜುಲೈ 23ರಿಂದ ಆಪ್ಷನ್‌ ಎಂಟ್ರಿ ಆರಂಭವಾಗಿದ್ದು, ಏಳು ದಿನಗಳ ಅವಕಾಶ ನೀಡಲಾಗಿದೆ. ಪ್ರಕಟಿಸಲಾಗಿರುವ ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ಪರಿಶೀಲಿಸಿ ಆಯ್ಕೆಗಳನ್ನು ದಾಖಲಿಸುವಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಪರಿಶೀಲನಾ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ಜಾಲತಾಣದಲ್ಲಿ ಲಿಂಕ್‌ ನೀಡಲಾಗಿದೆ‌ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆ ದಾಖಲಾತಿಯ ಕೊನೆಯ ದಿನದ ನಂತರದ ಮೂರನೇ ದಿನ, ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಆನಂತರ ಆಯ್ಕೆಗಳನ್ನು ಬದಲಿಸಿಕೊಳ್ಳಲು ಮೂರು ದಿನ ಅವಕಾಶ ನೀಡಲಾಗುತ್ತದೆ. ಆನಂತರ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಪ್ರಕಟಣೆ ಹೇಳಿದೆ. ವೈದ್ಯಕೀಯ ಕೋರ್ಸ್‌ಗಳು: ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಸೂಚನೆಗಳು/ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಅದರಂತೆ ಈ ಕೋರ್ಸ್‌ಗಳಿಗೆ ಆಪ್ಷನ್‌ಗಳನ್ನು ಸೇರಿಸುವ ಬಗ್ಗೆ ವಿವರಗಳನ್ನು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ವಿವರಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.