ವೃತ್ತಿಪರತೆಯ ಬೇಬಿಸಿಟ್ಟಿಂಗ್ ಇಂಟರ್ನ್‌ಷಿಪ್‌ ‘ನಾನು ಕೆನಡಾಗೆ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಹೋಗಲ್ಲ. ನನಗೆ ಇಲ್ಲೇ ಒಳ್ಳೆ ಕಂಪನಿಯಲ್ಲಿಇಂಟರ್ನ್‌ಷಿಪ್‌ ಸಿಕ್ಕಿದೆ. ಎಕ್ಸ್‌ಚೇಂಜ್ ಪ್ರೋಗ್ರಾಂಗಿಂತ ಇದು ಮುಖ್ಯ’ ಎಂದು ಹೇಳಿದ ಎಂಜಿನಿಯರಿಂಗ್ ಪದವೀಧರ ರೋಹಿತ್, ವಿದೇಶ ದಲ್ಲಿ ಕಲಿಯುವ ಅವಕಾಶವನ್ನೇ ನಿರಾಕರಿಸಿ, ಕಂಪನಿ ಯೊಂದರಲ್ಲಿಇಂಟರ್ನ್‌ಷಿಪ್‌ಗೆ ಸೇರಿದ. ಆತ ಈಗ ಅದೇ ಕಂಪನಿಯಲ್ಲಿ ಪೂರ್ಣ ಪ್ರಮಾಣದ ನೌಕರ ! ಏನಿದುಇಂಟರ್ನ್‌ಷಿಪ್‌ ಓದಿದ್ದನ್ನು ಪ್ರಾಯೋಗಿಕವಾಗಿ ಬಳಸುವುದು ಹೇಗೆಂದು ಹೇಳಿಕೊಡುವ ಈಇಂಟರ್ನ್‌ಷಿಪ್‌, ಈಗ ಅಭ್ಯರ್ಥಿಗಳಿಗೆ ಕೇವಲ ಕಲಿಕಾ ಭಾಗವಷ್ಟೇ ಆಗದೇ, ಕೌಶಲ ವೃದ್ಧಿಸಿ, ಉದ್ಯೋಗ ನೀಡುವ ಒಂದು ಅದ್ಭುತ ಪ್ರಕ್ರಿಯೆಯೂ ಆಗಿದೆ. ಹಾಗಾಗಿಯೇ, ರೋಹಿತ್‌ ನಂತಹ ವಿದ್ಯಾರ್ಥಿಗಳು ವಿದೇಶದ ಕಲಿಕೆಯನ್ನೇ ಕೈಬಿಟ್ಟುಇಂಟರ್ನ್‌ಷಿಪ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ.ಪಠ್ಯಕ್ರಮದಲ್ಲಿ(ಸಿಲಬಸ್‌) ನಿಗದಿತ ಕೆಲವೇ ಗಂಟೆಗಳ ಪ್ರಾಯೋಗಿಕ(ಲ್ಯಾಬ್)ಕಲಿಕೆ ಇರುತ್ತದೆ. ದಿನವೂ ಬದಲಾ ಗುತ್ತಿರುವ ತಂತ್ರಜ್ಞಾನದ ಹೊಸ ಕಾಣ್ಕೆಗಳು ಪಠ್ಯಕ್ರಮ ದಲ್ಲಿ ಇರುವುದಿಲ್ಲ. ಆದರೆ ತರಗತಿಯಲ್ಲಿ ಕಲಿಸಲಾಗುವ ಮೂಲಭೂತ ಅಂಶಗಳಿಗೂ ಹೊಸ ಅವಿಷ್ಕಾರ, ಅಭಿವೃದ್ಧಿಗಳಿಗೆ ಸಂಬಂಧವಿರುತ್ತದೆ. ಇಂದಿನ ತಾಂತ್ರಿಕ ಶಿಕ್ಷಣದ ಅವಿಭಾಜ್ಯ ಅಂಗವೇ ಆಗಿರುವಇಂಟರ್ನ್‌ಷಿಪ್‌, ವಿದ್ಯಾರ್ಥಿ ತರಗತಿಯಲ್ಲಿ ಓದಿದ್ದನ್ನು ಪ್ರಾಯೋಗಿಕ ವಾಗಿ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಬಳಸುವುದು ಹೇಗೆ ಎಂಬುದನ್ನು ಸಮಗ್ರವಾಗಿ ಕಲಿಸಿಕೊಡುತ್ತದೆ. ತಂತ್ರಜ್ಞಾನ ಸಂಸ್ಥೆಗಳಲ್ಲಿ ‘ಹ್ಯಾಂಡ್ಸ್ ಆನ್’ಅನುಭವ ನೀಡಿ, ವಿದ್ಯಾರ್ಥಿಗಳ ಒಣಕಲಿಕೆಗೆ ಹಸಿ ಹೂರಣ ತುಂಬಿ ಅವರನ್ನು ಉದ್ಯೋಗರಂಗದಲ್ಲಿ ದುಡಿಯಲು ಸಿದ್ಧಗೊಳಿಸು ವುದಲ್ಲದೇ, ಪುಸ್ತಕಗಳಲ್ಲಿರುವುದನ್ನು ಕೆಲಸದ ರೂಪಕ್ಕಿಳಿಸಿ ತಾವು ಕಲಿತಿದ್ದನ್ನು ಯಾವಾಗ ಅಳವಡಿಸಬೇಕೆಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಜೊತೆಗೆ ಕಲಿಕೆಯ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಭಾರತದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶಿಸುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ()ಇಂಟರ್ನ್‌ಷಿಪ್‌ ಅನ್ನು ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿದೆ. – ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಕಾಲೇಜಸ್‌ ಆ್ಯಂಡ್‌ ಎಂಪ್ಲಾಯರ್ಸ್ ಸಮೀಕ್ಷೆ ಪ್ರಕಾರ ಪದವಿ ಶಿಕ್ಷಣ ಪೂರೈಸುವ ಶೇ 56 ರಷ್ಟು ವಿದ್ಯಾರ್ಥಿಗಳು ಒಂದಲ್ಲಾ ಒಂದುಇಂಟರ್ನ್‌ಷಿಪ್‌ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ‘ಇಂಟರ್ನ್’ ಗಳೆಂದು ಕರೆಯುತ್ತಾರೆ. ಕೈಗಾರಿಕೆಗಳಲ್ಲಿ, ಸಂಶೋಧನಾ ಕೇಂದ್ರ, ಕಂಪನಿಗಳಲ್ಲಿ ಶೇ 60ರಷ್ಟು ತರಬೇತಿಗಳಿಗೆ ಸ್ಟೈಫಂಡ್ ನೀಡಲಾಗುತ್ತದೆ. ಉಚಿತ ಹಾಗೂ ಶುಲ್ಕ ತೆಗೆದುಕೊಂಡುಇಂಟರ್ನ್‌ಷಿಪ್‌ಗೆ ಅವಕಾಶ ನೀಡುವ ಅನೇಕ ತಾಂತ್ರಿಕ ಸಂಸ್ಥೆಗಳು, ಕಾಲೇಜುಗಳು, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ಸಂಶೋಧನಾ ಕೇಂದ್ರಗಳು ಇವೆ. ಹಲವು ಪ್ರತಿಷ್ಠಿತ ಎಂಜಿನಿ ಯರಿಂಗ್ ಕಾಲೇಜುಗಳು ತಮ್ಮಲ್ಲಿರುವ ಕೋರ್ಸ್‌ಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಬಳಸುವಂತಹ ಪ್ರಸಿದ್ಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಅಂತಿಮ ವರ್ಷದ ಪದವಿಯ ವಿದ್ಯಾರ್ಥಿಗಳನ್ನು ನೇರ ಕಂಪನಿಗೇ ಕಳಿಸಿಕೊಡುತ್ತವೆ. ಕೆಲವು ಕಂಪನಿಗಳು ಕಾಲೇಜಿನಲ್ಲೇ ತಮ್ಮ ಇನ್‌ಕ್ಯುಬೇಶನ್ ಸೆಂಟರ್ ತೆರೆದು ಅಲ್ಲೇ ಪ್ರಾಯೋಗಿಕ ತರಬೇತಿ ನೀಡುವುದೂ ಇದೆ. ಇಂಟರ್ನ್‌ಷಿಪ್‌ ಯಾಕೆ? ಓದು ಮುಗಿದ ತಕ್ಷಣ ಉದ್ಯೋಗ ಪಡೆದುಕೊಳ್ಳಲು ಓದಿನ ಜೊತೆಗೆ ವಿದ್ಯಾರ್ಥಿ ಕಲಿತಿರುವ ಇತರ ಕೌಶಲಗಳೇನು ಎಂಬುದು ಮುಖ್ಯವಾಗುತ್ತದೆ. ಲಿಂಕ್ಡ್ಇನ್ ಕಂಪನಿಯ ಸರ್ವೆಯ ಪ್ರಕಾರ ವಿದ್ಯಾರ್ಥಿಯ ಹಲವು ಕೌಶಲಗಳಲ್ಲಿ ‘ಸಾಫ್ಟ್‌ಸ್ಕಿಲ್’ ಕೌಶಲಕ್ಕೆ ಹೆಚ್ಚು ಬೇಡಿಕೆ ಇದೆ. ಅಲ್ಲದೆ ಸಂವಹನಕಲೆ, ನಾಯಕತ್ವದ ಗುಣ, ತಂಡದಲ್ಲೊಬ್ಬನಾಗಿ ದುಡಿಯುವ ತಾಳ್ಮೆ ಮತ್ತು ಸಮಸ್ಯೆ ಬಿಡಿಸುವ ತಾಕತ್ತುಗಳಿಗೆ ಹೆಚ್ಚಿನ ಆದ್ಯತೆ ಇದ್ದು ಇವುಗಳನ್ನೆಲ್ಲಾ ಕಲಿಸುವಇಂಟರ್ನ್‌ಷಿಪ್‌ ಉದ್ಯೋಗಾಕಾಂಕ್ಷಿಗಳ ‘ಬೇಬಿ ಸಿಟ್ಟಿಂಗ್’ ಎಂದೇ ಪ್ರಸಿದ್ಧವಾಗಿದೆ. ವಿದೇಶದ ವಿದ್ಯಾಭ್ಯಾಸದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ ಮತ್ತು ಇದು ವಿದ್ಯಾರ್ಥಿಗಳ ಅರ್ಜಿಯ ತೂಕವನ್ನು ಹೆಚ್ಚಿಸಿ ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರಿಗೆ ಮುಕ್ತ ಸ್ವಾಗತ ಕೋರುತ್ತವೆ. ಎರಡಕ್ಕಿಂತ ಹೆಚ್ಚು ತರಬೇತಿ ಪಡೆದವರಿಗೆ ಹಲವು ಅವಕಾಶಗಳ ಬಾಗಿಲು ತೆರೆಯುತ್ತವೆ. ಅಲ್ಲದೆ ಶೈಕ್ಷಣಿಕ ಮೌಲ್ಯಮಾಪನಕ್ಕೆ ಕ್ರೆಡಿಟ್ ಸ್ಕೋರ್ ಕೂಡ ಸಿಗುತ್ತದೆ. ಯಾವ್ಯಾವ ವಿಷಯಗಳು? ಎಲ್ಲ ಕಂಪನಿಗಳೂಇಂಟರ್ನ್‌ಷಿಪ್‌ ನೀಡುವುದಿಲ್ಲ. ಕೆಲವು ಕಂಪನಿಗಳು ಲಿಖಿತ ಪರೀಕ್ಷೆ ಇಲ್ಲವೆ ಸಂದರ್ಶನ ನಡೆಸಿ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುತ್ತವೆ. ನಾಲ್ಕು ವಾರಗಳಿಂದ ಹಿಡಿದು ಆರು ತಿಂಗಳವರೆಗಿನ ತರಬೇತಿ ಲಭ್ಯವಿರುತ್ತದೆ. ಡಿಪ್ಲೊಮಾ, ಐಟಿಐನಿಂದ ಹಿಡಿದು ಪತ್ರಿಕೋದ್ಯಮ, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರ, ಮಾರ್ಕೆಟಿಂಗ್, ಮ್ಯಾನೇಜ್‌ಮೆಂಟ್‌ ವೈದ್ಯಕೀಯ ಸೇವೆ, ಹೀಗೆ ಎಲ್ಲ ರಂಗದಲ್ಲೂ ಈಗಇಂಟರ್ನ್‌ಷಿಪ್‌ ಕಡ್ಡಾಯ ವಾಗಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಅವಕಾಶ ದೊರೆತು, ಅಭ್ಯರ್ಥಿಗಳು ಬುದ್ಧಿವಂತರಾಗಿದ್ದರೆ ಓದು ಮುಗಿದ ನಂತರ ಅಲ್ಲೇ ಕೆಲಸ ಗಿಟ್ಟಿಸಬಹುದು. ಎಲ್ಲೆಲ್ಲಿದೆ? ಇಂಟೆಲ್, ಹ್ಯಾಟ್ ಹೋಟೆಲ್ಸ್, ಅತಿಥಿ ಸತ್ಕಾರ ಉದ್ಯಮದ ಮ್ಯಾರಿಯಟ್ ಇಂಟರ್‌ನ್ಯಾಷನಲ್ ಯುಟ್ಯೂಬ್, ಲಿಂಕ್ಡ್ಇನ್, ಫೋರ್ಡ್, ಸಿಸ್ಕೊ, ಐಬಿಎಂ, ಫೇಸ್‌ಬುಕ್, ಬ್ಲಾಕ್ ಬರ‍್ರಿ, ಆ್ಯಪಲ್, ಅಮೆರಿಕನ್ ಎಕ್ಸ್‌ಪ್ರೆಸ್‌, ಅಮೆಜಾನ್, ಅಕ್ಸೆಂಚರ್, ಕಾರ್ ಮ್ಯಾಕ್ಸ್, ಚಾನೆಲ್ 4, ಗೂಗಲ್, ಡಿಸ್ಕವರಿ ಕಮ್ಯುನಿಕೇಶನ್ಸ್, ಜನರಲ್ ಮಿಲ್ಸ್‌ಗಳು ಅಂತರರಾಷ್ಟ್ರೀಯ ವೇದಿಕೆಯ ಬಹು ಬೇಡಿಕೆಯ ತಾಣಗಳಾಗಿವೆ. ವಾಣಿಜ್ಯ ವಿಷಯ(ಕಾಮರ್ಸ್) ಓದಿದದ ವರಿಗೆ ಅವಕಾಶ ನೀಡುವ ಕೆಪಿಎಂಜಿ ಕಂಪನಿ ತಿಂಗಳಿಗೆ ₹15 ಸಾವಿರದವರೆಗೆ ಸಹಾಯಧನ ನೀಡಿದರೆ, ಹ್ಯಾಟ್ ಹೋಟೆಲ್ ಗಂಟೆಗೆ ₹12 ಡಾಲರ್ ನೀಡುತ್ತದೆ. ಫೋರ್ಡ್ ಕಂಪನಿಇಂಟರ್ನ್‌ಷಿಪ್‌ಗೆ ಬರುವ ವಿದ್ಯಾರ್ಥಿಗಳನ್ನು ತನ್ನ ಕಾಯಂ ನೌಕರರಷ್ಟೇ ಸಮಾನವಾಗಿ ನಡೆಸಿಕೊಳ್ಳುತ್ತದೆ. ಇವೆಲ್ಲ ಒಂದಷ್ಟು ಉದಾಹರಣೆಗಳಷ್ಟೇ.ಅಕ್ಸೆಂಚರ್‌ ಕಂಪನಿಯಲ್ಲಿಇಂಟರ್ನ್‌ಷಿಪ್‌ ಪಡೆಯಲು ನೀವು ಕಾಲೇಜಿನ ಪದವೀಧರರೇ ಆಗಬೇಕೆಂದಿಲ್ಲ. ವಿದ್ಯಾಭ್ಯಾಸ ಪಡೆದು ನಿಮ್ಮಲ್ಲಿ ಸಾಫ್ಟ್‌ವೇರ್‌, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ ನಿರ್ವಹಣೆಗಳಲ್ಲಿ ಆಸಕ್ತಿ ಮತ್ತು ಅಲ್ಪ ಪರಿಣತಿ ಇದ್ದರೂ ಸಾಕು, ನೀವು ಅವಕಾಶ ಪಡೆಯಬಹುದು. ಎಂಬಿಎ ವಿದ್ಯಾರ್ಥಿಗಳು ಮೆಕಿನ್ಸೀ, ಗೋಲ್ಡ್‌ಮನ್ ಸಾಚ್ಸ್, ಜೆ.ಪಿ.ಮೋರ್ಗನ್ ಚೇಸ್, ಬೇನ್ ಆ್ಯಂಡ್ ಕಂಪನಿ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಗೂಗಲ್, ಡೆಲಾಯಿಟ್‌ಗಳಲ್ಲಿ ಇಂಟರ್ನ್‌ಗೆ ಸೇರಬಹುದು. ‘ವಿಂಗ್ಸ್’ () ಯೋಜನೆಯ ಅಡಿ ಅವಕಾಶ ನೀಡುವ ಅಮೆರಿಕನ್ ಎಕ್ಸ್‌ಪ್ರೆಸ್‌ಸಂಸ್ಥೆ ತಿಂಗಳಿಗೆ ₹68,000 ಸ್ಟೈಫಂಡ್ ನೀಡುತ್ತದೆ. ಭಾರತದ ಹದಿನಾರು ಮುಖ್ಯ ನಗರಗಳಲ್ಲಿ ಶಾಖೆ ಹೊಂದಿರುವ ಜರ್ಮನ್ ಮೂಲದ ಡಾಯ್ಚ ಬ್ಯಾಂಕ್ ತಿಂಗಳಿಗೆ ₹57,000 ನೀಡುತ್ತದೆ. ಪೇ ಪಲ್, ಐಟಿಸಿ, ಕ್ಯಾಡ್‌ಬರಿ, ಅರಿಸ್ಟಾ ಕಂಪ್ಯೂಟರ್ ಕಂಪನಿ, ಮೈಕ್ರೋಸಾಫ್ಟ್, ಅಡೋಬ್, ಬಿಎಂಡಬ್ಲೂ, ಶೆಲ್, ಮೋರ್ಗನ್ ಸ್ಟಾನ್ಲಿ, ಫ್ಲಿಪ್‌ಕಾರ್ಟ್, ನೆಟ್ ಆ್ಯಪ್, ಟಾಟಾ ಮೋಟರ‍್ಸ್, ಯಾಹೂ, ಓರಾಕಲ್, ಸ್ಯಾಪ್, ವಿಎಂ ವೇರ್‌ಗಳೂ ಕನಿಷ್ಠ ₹35 ಸಾವಿರ ಸ್ಟೈಪೆಂಡ್‌ ನೀಡಿ, ಕೆಲಸವನ್ನೂ ಕಲಿಸುತ್ತವೆ. ರಾಜಕೀಯಕ್ಕೆ ಸೇರುವವರಿಗೆ ಆಮ್ ಆದ್ಮಿ ಪಾರ್ಟಿ ಎರಡು ತಿಂಗಳಇಂಟರ್ನ್‌ಷಿಪ್‌ ನೀಡುತ್ತದೆ. ಟೆಕ್ ಮಹೀಂದ್ರ, ಥಾಮಸ್ ಕುಕ್, ಓಯೋ ರೂಮ್ಸ್, ಔಟ್‌ಲುಕ್ ಮ್ಯಾಗಜಿನ್, ಟೈಟನ್ ಕಂಪನಿ, ಬುಕ್ ಮೈ ಶೋ ಕಂಪನಿಗಳು ಭಾರತದ ವಿದ್ಯಾರ್ಥಿಗಳಿಗೆಇಂಟರ್ನ್‌ಷಿಪ್‌ ಸೌಲಭ್ಯ ಕಲ್ಪಿಸುವ ಪ್ರಮುಖ ಸಂಸ್ಥೆಗಳಾಗಿವೆ. (ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.