ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ: ದ್ವಾರಸಮುದ್ರದ ಹೊಯ್ಸಳರು 1. ಈ ಕೆಳಗಿನ ಕನ್ನಡದ ಆರಂಭಿಕ ಕವಿಗಳಲ್ಲಿ ಅಭಿನವ ಪಂಪ ಎಂದು ಪ್ರಸಿದ್ಧನಾದವನು ಯಾರು ? ಎ.‌ ಪೊನ್ನ→ಬಿ.‌ ನಾಗಚಂದ್ರ ಸಿ.‌ ಹರಿಹರ→ಡಿ. ಕುಮಾರವ್ಯಾಸ ⇒ಉತ್ತರ. ಬಿ 2. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ನಾಗಚಂದ್ರನು ಮಲ್ಲಿನಾಥಪುರಾಣ ಮತ್ತು ರಾಮಚಂದ್ರಚರಿತ ಪುರಾಣ ಎಂಬ ಕಾವ್ಯಗಳು ರಚಿಸಿದ್ದಾನೆ. ಬಿ. ನೇಮಿಚಂದ್ರ ಕವಿಯು ಲೀಲಾವತಿ ಮತ್ತು ನೇಮಿನಾಥ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ. 4 3.→ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ. ರಾಘವಾಂಕನು ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತ್ರೆ, ವೀರೇಶ ಚರಿತೆ ಮುಂತಾದ ಕೃತಿಗಳನ್ನು ಬರೆದಿದ್ದಾನೆ. ಬಿ.‌ ಈತನು ರಗಳೆಗಳ ಕವಿ ಎಂದು ಹೆಸರಾದ ಹರಿಹರನ ಸೋದರಳಿಯನಾಗಿದ್ದನು. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. →2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ. 4 4. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ.→ಕೇಶಿರಾಜನು ಶಬ್ದಮಣಿದರ್ಪನ ಕೃತಿಯನ್ನು ರಚಿಸಿದ್ದಾನೆ. ಬಿ.‌→ಮಲ್ಲಿಕಾರ್ಜುನನು ಸೂಕ್ತಿ ಸುಧಾರ್ಣವ ಎಂಬ ಕೃತಿಯನ್ನು ರಚಿಸಿದ್ದಾನೆ. ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. 1. ಹೇಳಿಕೆ ಎ ಸರಿಯಾಗಿದೆ. 2. ಹೇಳಿಕೆ ಬಿ ಸರಿಯಾಗಿದೆ. 3. ಎರಡೂ ಹೇಳಿಕೆಗಳು ತಪ್ಪಾಗಿವೆ. 4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ. 4 5.→ತಮಿಳುನಾಡಿನಲ್ಲಿ ಚೋಳರಿಂದ ಪ್ರಾಣಾಪಾಯಕ್ಕೆ ಗುರಿಯಾದ ರಾಮಾನುಜಾಚಾರ್ಯರಿಗೆ ಆಶ್ರಯವನ್ನು ನೀಡಿದ ಕನ್ನಡದ ದೊರೆಗಳು ಯಾರು ? ಎ.→ದ್ವಾರಸಮುದ್ರದ ಹೊಯ್ಸಳರು ಬಿ.‌→ರಾಷ್ಟ್ರಕೂಟರು ಸಿ.→ಕಲ್ಯಾಣದ ಕಲಚೂರಿಗಳು ಡಿ.→ವಿಜಯನಗರದ ಅರಸರು ಉತ್ತರ. ಎ 7. ಹೊಯ್ಸಳರ ಕಾಲದ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ.→ರಾಣಿ ಶಾಂತಲೆ ನಾಟ್ಯಸರಸ್ವತಿ ಎಂದು ಹೆಸರುಪಡೆದಿದ್ದಳು. ಬಿ.→ರಾಣಿಯು ವೈಷ್ಣವಳಾಗಿದ್ದು ರಾಜವಿಷ್ಣುವರ್ಧನ ಜೈನನಾಗಿದ್ದ ವ್ಯವಸ್ಥೆಯು ಧಾರ್ಮಿಕ ಸಹಿಷ್ಣುತೆಯ ಪರಮೋಚ್ಛ ಉದಾಹರಣೆಯಾಗಿತ್ತು. →1. ಹೇಳಿಕೆ ಎ ಸರಿಯಾಗಿದೆ. →2. ಹೇಳಿಕೆ ಬಿ ಸರಿಯಾಗಿದೆ. →3. ಎರಡೂ ಹೇಳಿಕೆಗಳು ತಪ್ಪಾಗಿವೆ. →4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ. 1 8.→ಈ ಕೆಳಗಿನ ಯಾವುವು ಜೈನ ಧರ್ಮದ ಪಂಥಗಳಾಗಿವೆ ? ಎ. ಶ್ವೇತಾಂಬರ, ದಿಗಂಬರ ಮತ್ತು ಯಾಪನೀಯ ಬಿ.‌ ಶ್ವೇತಾಂಬರ, ದಿಗಂಬರ ಮತ್ತು ಕಾಪಾಲಿಕ ಉತ್ತರ. ಎ 9. ಹೊಯ್ಸಳರ ಕಾಲದಲ್ಲಿ ಈ ಕೆಳಗಿನ ಯಾವುದೆಲ್ಲಾ ಆತ್ಮ ಬಲಿಗಳ ಪ್ರಕಾರಗಳು ಶಾಸನಗಳಲ್ಲಿ ಉಲ್ಲೇಖವಾಗಿದೆ ? ಎ.‌ಲೆಂಕರು→ಬಿ. ಗರುಡರು→ ಸಿ. ತುಳಿಲಾಲ್‌→ಡಿ. ವೇಳೆವಾಳಿ ಇ. ಜೋಳವಾಳಿ →1. ಎ ಬಿ‌ ಮತ್ತು ಸಿ.→2. ಬಿ ಡಿ ಮತ್ತು ಇ 3. ಡಿ ಮತ್ತು ಇ→4. ಮೇಲಿನ ಎಲ್ಲವೂ ಉತ್ತರ. 4 10. ಹೊಯ್ಸಳರ ಕಾಲದ ಕೃಷಿ ವ್ಯವಸ್ಥೆಯ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಎ.→ಹೊಯ್ಸಳರ ಕಾಲದ ಕೃಷಿ ಭೂಮಿಯನ್ನು ಸಾಮಾನ್ಯವಾಗಿ ದೇವ ಮಾತ್ರಕ ಮತ್ತು ನದಿ ಮಾತ್ರಕ ಎಂದು ಎರಡು ಭಾಗಗಳಾಗಿ ವಿಂಗಡಿಸಿದ್ದರು. ಬಿ.→ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ಜಮೀನುಗಳನ್ನು ನದಿ ಮಾತ್ರಕ ಎಂದೂ ಕೆರೆಬಾವಿಗಳನ್ನು ಆಶ್ರಯಿಸಿದ ಭೂಮಿಯನ್ನು ದೇವಮಾತ್ರಕ ಎಂದು ಕರೆಯಲಾಗುತ್ತಿತ್ತು . ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. →1. ಹೇಳಿಕೆ ಎ ಸರಿಯಾಗಿದೆ. →2. ಹೇಳಿಕೆ ಬಿ ಸರಿಯಾಗಿದೆ. →3. ಎರಡೂ ಹೇಳಿಕೆಗಳು ತಪ್ಪಾಗಿವೆ. →4. ಎರಡೂ ಹೇಳಿಕೆಗಳು ಸರಿಯಾಗಿವೆ. ಉತ್ತರ .1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.