ಸಿಬಿಎಸ್‌ಸಿ ಬೋರ್ಡ್‌ ಪರೀಕ್ಷೆ ಆರಂಭ ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಹಾಗೂ 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಬುಧವಾರ ಆರಂಭವಾಗಿವೆ. ಈ ವರ್ಷ 38 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದಾದ್ಯಂತ ಹಾಗೂ ಹೊರದೇಶಗಳಲ್ಲಿ ಇರುವ 7,250 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. 10ನೇ ತರಗತಿಯ ಪರೀಕ್ಷೆಗಳು 76 ವಿಷಯಗಳನ್ನು ಒಳಗೊಂಡಿದ್ದು, ಮಾರ್ಚ್‌ 21ರಂದು ಪರೀಕ್ಷೆಗಳು ಮುಕ್ತಾಯವಾಗಲಿವೆ. 12ನೇ ತರಗತಿಯ ಪರೀಕ್ಷೆಗಳು 115 ವಿಷಯಗಳನ್ನು ಒಳಗೊಂಡಿದ್ದು, ಏಪ್ರಿಲ್‌ 5ರಂದು ಮುಕ್ತಾಯವಾಗಲಿವೆ. ಸಿಬಿಎಸ್‌ಸಿ ಅಧಿಕಾರಿಗಳ ಪ್ರಕಾರ ಈ ವರ್ಷ 38.83 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.