ವಿದ್ಯಾರ್ಥಿ ವೇತನ: ಎಲ್‌ಎಸ್‌ಸಿಎಲ್ ಹಾರ್ಟಿಕಲ್ಚರ್ ಇಂಟರ್ನ್‌ಷಿಪ್ 2023 ಎಲ್‌ಎಸ್‌ಸಿಎಲ್ ಹಾರ್ಟಿಕಲ್ಚರ್ ಇಂಟರ್ನ್‌ಷಿಪ್ 2023 ಲೂಧಿಯಾನ್‌ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ ಎಲ್‌ಎಸ್‌ಸಿಎಲ್‌ ಹಾರ್ಟಿಕಲ್ಚರ್‌ ಇಂಟರ್ನ್‌ಷಿಪ್‌ ಗಾಗಿ ಬಿ.ಎಸ್ಸಿ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ತೋಟಗಾರಿಕೆ ವಿಷಯದಲ್ಲಿ ಬಿ.ಸಿ ಪದವಿ ಜೊತೆಗೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೌಶಲ ಮತ್ತು ಆಸಕ್ತಿ ಇದ್ದವರು ಈ ಇಂಟರ್ನ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಈ ಇಂಟರ್ನ್‌ಷಿಪ್‌ ಅವಧಿ 12 ತಿಂಗಳು ಅವಧಿಯವರೆಗೆ ಲಭ್ಯವಿರುತ್ತದೆ. ಆರ್ಥಿಕ ನೆರವು: ಮಾಸಿಕ ₹ 12,000 ಅರ್ಜಿ ಸಲ್ಲಿಕೆ ಕೊನೆ ದಿನ: 28/2/2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//LHSI3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.