ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ ವಿವರ: ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸುವುದನ್ನು ಬೆಂಬಲಿಸಲು ಡಿಬಿಎಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗೆ ಮೀಸಲಾಗಿದೆ. ‌ ಅರ್ಹತೆ: ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಅಥವಾ ಪುದುಚೆರಿಯಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗಾಗಿ ಮುಕ್ತವಾಗಿದೆ. ಅರ್ಜಿದಾರರು ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾಗಿರಬೇಕು. ಆರ್ಥಿಕ ಸಾಹಯ ವಾರ್ಷಿಕ ₹20,000 (3 ವರ್ಷಗಳ ವರೆಗೆ) ಅರ್ಜಿ ಸಲ್ಲಿಸಲು ಕೊನೆ ದಿನ 5-02-2023 ‌ ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ : .b4s.//DBSDS11 ನರೋತಮ್ ಸೆಖ್ಸಾರಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2023 ವಿವರ: ನರೋತಮ್ ಸೆಖ್ಸಾರಿಯಾ ಸ್ಕಾಲರ್‌‍ಶಿಪ್ ಪ್ರೋಗ್ರಾಂ 2023, ಭಾರತ ಮತ್ತು ವಿದೇಶಗಳಲ್ಲಿನ ಉನ್ನತ-ಶ್ರೇಣಿಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಮುಂದುವರಿಸಲು ಸಿದ್ಧರಿರುವ ಪ್ರತಿಭಾನ್ವಿತ ಭಾರತೀಯ ವಿದ್ಯಾರ್ಥಿಗಳಿಗೆ ನರೋತಮ್‌ ಸೆಖ್ಸಾರಿಯಾ ಫೌಂಡೇಶನ್ ನೀಡುವ ಅವಕಾಶವಾಗಿದೆ. ಅರ್ಹತೆ: ಭಾರತೀಯ ಪ್ರಜೆಗಳಾಗಿದ್ದು, 30 ವರ್ಷಕ್ಕಿಂತ ಕಡಿಮೆ ವಯಸ್ಸಾದ ಮತ್ತು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಿಗೆ ಮುಕ್ತವಾಗಿದೆ. ಅರ್ಜಿದಾರರು ಮುಂಬರುವ ಸೆಮಿಸ್ಟರ್‌‌‌‌ ಅನ್ನು ಪ್ರಾರಂಭಿಸಲು‌‍ ಉನ್ನತ ಶ್ರೇಣಿಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಪದವಿಯನ್ನು ಮುಂದುವರೆಸಲು ಯೋಜಿಸುತ್ತಿರಬೇಕು. ಆರ್ಥಿಕ ಸಹಾಯ: ಬಡ್ಡಿ- ರಹಿತ ಸಾಲ ಸ್ಕಾಲರ್‌‌‌‌‌ಶಿಪ್‌‌‌‌‌‌‍ಗಳು ಅರ್ಜಿ ಸಲ್ಲಿಸಲು ಕಕೊನೆ ದಿನ: 16-03-2023 ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನಲ್ಲಿ ಅರ್ಜಿ ಹಾಕಿ. ಮಾಹಿತಿಗೆ: : .b4s.//NSSP4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.