ಮಾದರಿ ಪ್ರಶ್ನೋತ್ತರ 1) ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಭಾರತದ ಮೊದಲ ಲಿಥಿಯಂ ಐಯಾನ್ ಸೆಲ್ ಉತ್ಪಾದನಾ ಘಟಕ ಆಂಧ್ರಪ್ರದೇಶದ ತಿರುಪತಿಯಲ್ಲಿ ಕಾರ್ಯಾರಂಭ ಮಾಡಿದೆ, ಈ ಘಟಕ ಪ್ರತಿ ನಿತ್ಯ 20,000 ಸೆಲ್‌ಗಳನ್ನು ಉತ್ಪಾದಿಸಬಲ್ಲದು. 2) ಪ್ರಸ್ತುತ ಭಾರತ ತನಗೆ ಅಗತ್ಯವಿರುವ ಲಿಥಿಯಂ ಅಯಾನ್ ಸೆಲ್‌ಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದೆ. ಚೀನಾ, ದಕ್ಷಿಣ ಕೊರಿಯ, ವಿಯೆಟ್ನಾಂ ಹಾಗೂ ಹಾಂಕಾಂಗ್‌ಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಲಿಥಿಯಂ ನಿಕ್ಷೇಪ ಪತ್ತೆ ಹಚ್ಚಲಾಗಿದೆ. 3) ಜಗತ್ತಿನಲ್ಲಿ ಅತಿ ಹೆಚ್ಚು ಲಿಥಿಯಂ ಸಂಗ್ರಹವನ್ನು ಚಿಲಿ ದೇಶ ಹೊಂದಿದೆ. ಅಲ್ಲಿ 93 ಲಕ್ಷ ಟನ್‌ನಷ್ಟು ಲಿಥಿಯಂ ಸಂಗ್ರಹವಿದೆ. ಇದಲ್ಲದೇ ಆಸ್ಟ್ರೇಲಿಯಾ, ಅರ್ಜಿಂಟೀನಾ ಹಾಗೂ ಚೀನಾ ದೇಶಗಳಲ್ಲಿಯೂ ಲಿಥಿಯಂ ಲಭ್ಯವಿದೆ. ಇತ್ತೀಚಿನ ಶೋಧನೆಯ ಪ್ರಕಾರ ಭಾರತವು 59 ಲಕ್ಷ ಟನ್ ಲಿಥಿಯಂ ಹೊಂದಿದೆ. 4) ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ, ನಮ್ಮ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ಗ್ರಾಮ ವ್ಯಾಪ್ತಿಯಲ್ಲಿ ಲಿಥಿಯಂ ನಿಕ್ಷೇಪ ಇರುವುದಾಗಿ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ತಂಡ ದೃಢಪಡಿಸಿಸಿದೆ. ಉತ್ತರ ಸಂಕೇತಗಳು ಎ) 1, 2, ಮತ್ತು 4 ಮಾತ್ರ ಸರಿಯಾಗಿವೆ ಬಿ) 1, 3, ಮತ್ತು 4 ಮಾತ್ರ ಸರಿಯಾಗಿವೆ ಸಿ) 1, 2, ಮತ್ತು 4 ಮಾತ್ರ ಸರಿಯಾಗಿವೆ ಡಿ)1, 2, 3, 4 ಎಲ್ಲಾ ಹೇಳಿಕೆಗಳು ಸರಿಯಾಗಿವೆ ಉತ್ತರ: ಡಿ 2) ಆಲ್ಟ್ ಡಿಜಿಟಲ್ ಟೆಕ್ನಾಲಾಜಿ ಎಂಬ ಸಾಫ್ಟ್‌ವೇರ್ ಕಂಪನಿ ವಡ್ಡಿನಕೊಪ್ಪ ಎಂಬ ಹಳ್ಳಿಯಲ್ಲಿ ತನ್ನ ಶಾಖೆಯೊಂದನ್ನು ತೆರೆದಿದೆ. ಹಾಗಾದರೆ ಈ ಹಳ್ಳಿ ಎಲ್ಲಿದೆ? ಎ) ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿ) ಬೆಂಗಳೂರಿನ ಶ್ರೀನಗರ ಸಿ) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಡಿ) ಹಾಸನ ಜಿಲ್ಲೆಯ ಹಿರಿಸಾವೆ ಉತ್ತರ:- ಎ 3) ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ತುಮಕೂರಿನ ಗುಬ್ಬಿ ತಾಲೂಕಿನ ಬಿದರೆಹಳ್ಳಕಾವಲ್‌ನಲ್ಲಿ ಆರಂಭಿಸಲಾಗಿದೆ. 2) ತುಮಕೂರಿನ ಬಿದರೆಹಳ್ಳಕಾವಲ್‌ನಲ್ಲಿ ಆರಂಭಿಸಲಾದ ಹೆಲಿಕಾಪ್ಟರ್ ಉತ್ಪಾದನಾ ಘಟಕವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಸೇರಿದೆ. 3) ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಹೆಲಿಕಾಪ್ಟರ್ ಘಟಕವನ್ನು ಮೊದಲ ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ ಎಂದು ಗುರುತಿಸಲಾಗಿದೆ. ಉತ್ತರ ಸಂಕೇತಗಳು :- ಎ) 1 ಮತ್ತು 3 ಮಾತ್ರ ಸರಿಯಾಗಿದೆ ಬಿ) 1 ಮತ್ತು 2 ಮಾತ್ರ ಸರಿಯಾಗಿದೆ ಸಿ) ಎಲ್ಲವೂ ತಪ್ಪಾಗಿವೆ. ಡಿ) 1, 2 ಮತ್ತು 3 ಮೂರು ಸರಿಯಾಗಿದೆ ಉತ್ತರ: ಡಿ 4) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ದೇಗುಲದಲ್ಲಿ ರಾಮನ ವಿಗ್ರಹವನ್ನು ನಿರ್ಮಿಸಲು ಸಾಲಿಗ್ರಾಮ ಶಿಲೆಯನ್ನು ಎಲ್ಲಿಂದ ತರಿಸಿಕೊಳ್ಳಲಾಗಿದೆ? ಎ) ನೇಪಾಳ ಬಿ) ಥಾಯ್ಲೆಂಡ್ ಸಿ) ಮ್ಯಾನ್ಮಾರ್ ಡಿ) ಇಂಡೋನೇಷಿಯಾ ಉತ್ತರ: ಎ 5) ಜೀವಿತಾವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹಾಲು ನೀಡಬಲ್ಲ ಭಾರಿ ಸಾಮರ್ಥ್ಯದ ಮೂರು ಹಸುಗಳನ್ನು ಸೃಷ್ಟಿಸಿರುವುದಾಗಿ ಯಾವ ದೇಶದ ವಿಜ್ಞಾನಿಗಳು ಘೋಷಿಸಿದ್ದಾರೆ? ಎ) ಬ್ರಿಟನ್ ಬಿ) ಜಪಾನ್ ಸಿ) ನ್ಯೂಜಿಲೆಂಡ್ ಡಿ) ಚೀನಾ ಉತ್ತರ: ಡಿ 6) ಎರಡನೇ ಆಡಳಿತ ಸುಧಾರಣಾ ಆಯೋಗದ 4 ಮತ್ತು 5ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಗ್ರಾಮೀಣ ಕೋಟಾವನ್ನು ‘ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾವಾಗಿ ಪರಿವರ್ತಿಸಬೇಕು’ ಇಲ್ಲವೇ ಶೇ 7.5ರಷ್ಟು ಸೀಟುಗಳನ್ನು ಅವರಿಗೆ ಮೀಸಲಿಡಬೇಕು. 2) ಗ್ರಾಮೀಣ ವ್ಯಾಸಂಗ, ಕನ್ನಡ ಮಾಧ್ಯಮ, ಹೈದರಾಬಾದ್ ಕರ್ನಾಟಕ ಮೊದಲಾದ ಪ್ರಮಾಣಪತ್ರಗಳ ಸಿಂಧುತ್ವವನ್ನು ಜೀವಿತಾವಧಿಗೆ ವಿಸ್ತರಿಸಬೇಕು. 3) ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಿ 8 ಕ್ಕೆ ಇಳಿಸುವುದು, ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನ ಮಾಡುವುದು, ಉತ್ತಮ ಆಡಳಿತಕ್ಕಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು. 4) ನೇಮಕಾತಿ ಪ್ರಕ್ರಿಯೆಗಳಲ್ಲಿ ದಾಖಲಾತಿ ಪರಿಶೀಲನಾ ಕಾರ್ಯವನ್ನು ಆಯಾ ಇಲಾಖೆಗಳೇ ಮಾಡಬೇಕು. ಇದರಿರಿಂದ ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು ಮೇಲಿನ ಯಾವೆಲ್ಲಾ ಶಿಫಾರಸ್ಸುಗಳನ್ನು ಮಾಡಿದೆ? ಉತ್ತರ ಸಂಕೇತಗಳು : ಎ) 1 ಮತ್ತು 3 ಮಾತ್ರ ಬಿ) 2 ಮತ್ತು 3 ಮಾತ್ರ ಸಿ) 1 ಮತ್ತು 2 ಮಾತ್ರ . ಡಿ) 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ ಉತ್ತರ: ಡಿ 7) ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಲಾದ ‘ಶ್ರೀ ಅನ್ನ’ ಯಾವುದಕ್ಕೆ ಸಂಬಂಧಿಸಿದೆ? ಎ) ಸಿರಿಧಾನ್ಯ ಬಿ) ರಸಗೊಬ್ಬರ ಸಿ) ಹಿರಿಯ ನಾಗರಿಕರ ಪಿಂಚಣಿ ಡಿ) ಮೇಲಿನ ಯಾವುದೂ ಅಲ್ಲ. ಉತ್ತರ: ಎ 8) ಆರ್ಥಿಕ ಸಮೀಕ್ಷೆ 2022-23ರ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಏಪ್ರಿಲ್ 1 ರಿಂದ ಶುರುವಾಗುವ ಆರ್ಥಿಕ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಶೇ 6 ರಿಂದ ಶೇ 6.8 ಇರಲಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ(2020-21ರಲ್ಲಿ) ದೇಶದ ಜಿಡಿಪಿಯು ಶೇ 8.7ರಷ್ಟು ಕಂಡಿತ್ತು. ಈ ವರ್ಷದ (2022-23ರಲ್ಲಿ) ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 7ರಷ್ಟು ನಿರೀಕ್ಷೆ ಇದೆ. 2) ಫಿಸಿಕಲ್ ಡೆಫಿಸಿಟ್ 2020-21ರಲ್ಲಿ ಜಿಡಿಪಿಯ ಶೇ 9.2ರಷ್ಟಿತ್ತು 2021-22ರಲ್ಲಿ ಜಿಡಿಪಿಯ ಶೇ 6.7ಕ್ಕೆ ಇಳಿಯಿತು, ವಿತ್ತ ವರ್ಷ 2022-23ರಲ್ಲಿ ಜಿಡಿಪಿಯ ಶೇ 6.4ಕ್ಕೆ ಇಳಿಯುವ ಸಾಧ್ಯತೆ ಇದೆ. 3) ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರವು 2020-21ರಲ್ಲಿ ಶೇ. 3.3ರಷ್ಟು ಬೆಳವಣಿಗೆ ದಾಖಲಿಸಿದರೆ 2021-22ರಲ್ಲಿ ಶೇ 3ರಷ್ಟು ಬೆಳವಣಿಗೆ ದರವನ್ನು ದಾಖಲಿಸಿತು. 2022-23ರಲ್ಲಿ ಶೇ 3.5ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. 4) ಕೈಗಾರಿಕಾ ವಲಯವು 2020-21ರಲ್ಲಿ ಶೇ (-)3.3ರಷ್ಟು ಬೆಳವಣಿಗೆ ದಾಖಲಿಸಿದರೆ 2021-22ರಲ್ಲಿ ಶೇ 10.3ರಷ್ಟು ಬೆಳವಣಿಗೆ ದರವನ್ನು ದಾಖಲಿಸಿತು. 2022-23ರಲ್ಲಿ ಶೇ 4.1ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ? ಎ) ಹೇಳಿಕೆ 1 ಮತ್ತು 3ರ ಮಾತ್ರ ಸರಿಯಾಗಿದೆ ಬಿ) ಹೇಳಿಕೆ 1, 2, ಮತ್ತು 3 ಮಾತ್ರ ಸರಿಯಾಗಿದೆ ಸಿ) ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ ಡಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ. ಉತ್ತರ: ಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.