ವಿದ್ಯಾರ್ಥಿ ವೇತನ: ಕೋಟಕ್‌ ಕನ್ಯಾ ಸ್ಕಾಲರ್‌ಷಿಪ್‌ ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ 12 ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗಾಗಿ ‘ಕೋಟಕ್‌ ಕನ್ಯಾ ಸ್ಕಾಲರ್‌ಷಿಪ್‌–2022‘ ಕಾರ್ಯಕ್ರಮವನ್ನು ರೂಪಿಸಿದೆ. ಆರ್ಥಿಕ ದುರ್ಬಲ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳನ್ನು ಮುಂದುವರಿಸಲು ನೆರವಾಗುವುದು ಈ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಉದ್ದೇಶವಾಗಿದೆ. ಅರ್ಹತೆ: ಅರ್ಜಿದಾರರು 12ನೇ ತರತಿಯ ಪರೀಕ್ಷೆಗಳಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವುಎಲ್ಲಾ ಮೂಲಗಳಿಂದ ₹ 3,20,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಈಗಾಗಲೇ ವೃತ್ತಿಪರ ಕೋರ್ಸ್‌ಗಳಲ್ಲಿ ಮೊದಲನೇ ವರ್ಷದ ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರೂ ಅರ್ಜಿ ಸಲ್ಲಿಸಬಹುದು. ಎಂಬಿಬಿಎಸ್‌, ಬಿ.ಇ(ಆರ್ಕಿಟೆಕ್ಚರ್‌), ಡಿಸೈನ್, ಇಂಟಿಗ್ರೇಟೆಡ್‌ ಎಲ್‌ಎಲ್‌ಬಿ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು: ವಾರ್ಷಿಕ₹ 1.5 ಲಕ್ಷದ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 31-12-2022 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಮಾಹಿತಿಗೆ: .b4s.//KKGS12 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.