| ಗೂಂಜ್ ಅರ್ಬನ್‌ ಫೆಲೊಷಿಪ್‌ 2023–24 ವಿವರ: ಗೂಂಜ್‌ ಸಂಸ್ಥೆ (ಲಾಭರಹಿತ ಸಂಸ್ಥೆ), ಪದವಿ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಕಾರ್ಯಕ್ರಮ ‘ಗೂಂಜ್ ಅರ್ಬನ್ ಫೆಲೊಷಿಪ್‌ 2023–24’. ಇದು 12 ತಿಂಗಳ ಅವಧಿಯ ಕಾರ್ಯಕ್ರಮವಾಗಿದೆ. ಈ ಫೆಲೊಷಿಪ್‌ಗೆ ಆಯ್ಕೆಯಾದವರು, ಭಾರತದ ಯಾವುದೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಸಮುದಾಯ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅರ್ಹತೆ 21 ರಿಂದ 30 ವರ್ಷಗಳ ವಯೋಮಾನದ (31ನೇ ಜುಲೈ 2023ಕ್ಕೆ ಅನ್ವಯಿಸುವಂತೆ), ಪದವೀಧರ ವಿದ್ಯಾರ್ಥಿಗಳು ಈ ಫೆಲೊಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರುವುದು ಕಡ್ಡಾಯ. ಆರ್ಥಿಕ ನೆರವು: ಪ್ರತಿ ತಿಂಗಳು ಸ್ಟೈಫಂಡ್ ₹20,000 ಅರ್ಜಿ ಸಲ್ಲಿಕೆಗೆ ಕೊನೆ ದಿನ: ಮೇ 25, 2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ: .b4s.//GUF3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.