ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, 10ನೇ ತರಗತಿಯಲ್ಲಿ ಶೇ 93.12 ಹಾಗೂ 12ನೇ ತರಗತಿಯಲ್ಲಿ ಶೇ 87.33 ಫಲಿತಾಂಶ ಬಂದಿದೆ. 2022–23ನೇ ಸಾಲಿನಲ್ಲಿ 10ನೇ ತರಗತಿ ಪರೀಕ್ಷೆಗೆ 21,86,940 ವಿದ್ಯಾರ್ಥಿಗಳು, 12ನೇ ತರಗತಿ ಪರೀಕ್ಷೆಗೆ 16,96,770 ವಿದ್ಯಾರ್ಥಿಗಳು ಹಾಜರಾಗಿದ್ದರು. 10ನೇ ತರಗತಿ ಫಲಿತಾಂಶ ಕಳೆದ ಬಾರಿಗಿಂತ (ಶೇ 91.10) ಶೇ 2.02ರಷ್ಟು ಹೆಚ್ಚಳವಾಗಿದ್ದರೆ, 12ನೇ ತರಗತಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ (ಶೇ 92.71) 5,38ರಷ್ಟು ಕುಸಿತ ಕಂಡಿದೆ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ .. ಅಥವಾ ... ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.