ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇಂದು, ನಾಳೆ ಸಿಇಟಿ ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಶನಿವಾರ ಮತ್ತು ಭಾನುವಾರ ದಂದು ನಡೆಯಲಿದೆ. ಶನಿವಾರದಂದು ಜೀವ ವಿಜ್ಞಾನ, ಗಣಿತ, ಭಾನುವಾರ ಭೌತ ವಿಜ್ಞಾನ, ರಸಾಯನ ವಿಜ್ಞಾನ ವಿಷಯದ ಪರೀಕ್ಷೆಗಳು ಜರುಗಲಿವೆ. ಇದೇ 22ರಂದು ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ, ಮಂಗಳೂರು ಕೇಂದ್ರಗಳಲ್ಲಿ ಬೆಳಿಗ್ಗೆ 11.30ರಿಂದ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಅಂಕಿ ಅಂಶಗಳು 2.60 ಲಕ್ಷ ಹೆಸರು ನೋಂದಾಯಿಸಿಕೊಂಡವರು 592 ರಾಜ್ಯದ ಪರೀಕ್ಷಾ ಕೇಂದ್ರಗಳು 121 ಬೆಂಗಳೂರಿನ ಕೇಂದ್ರಗಳು ––––––––––– ಪರೀಕ್ಷಾ ಸಮಯ: ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.50ರವರೆಗೆ ವಿಷಯಗಳು: ಜೀವ ವಿಜ್ಞಾನ, ಗಣಿತ, ಭೌತ ವಿಜ್ಞಾನ, ರಸಾಯನ ವಿಜ್ಞಾನ. ––––––––––– ಯಾವುದಕ್ಕೆ ಅವಕಾಶ ಇದೆ? * ನೀಲಿ ಅಥವಾ ಕಪ್ಪು ಬಾಲ್‌ ಪಾಯಿಂಟ್‌ ಪೆನ್ನು * ಪ್ರವೇಶ ಪತ್ರದ ಜತೆಗೆ ಭಾವಚಿತ್ರ ಇರುವ ಒಂದು ಗುರುತುಪತ್ರ (ಆಧಾರ್, ಪ್ಯಾನ್‌ ಇತ್ಯಾದಿ) * ಪರೀಕ್ಷೆ ಆರಂಭಕ್ಕೂ ಎರಡು ಗಂಟೆ ಮೊದಲು ಕೇಂದ್ರದಲ್ಲಿರಬೇಕು. ಯಾವುದಕ್ಕೆ ಅವಕಾಶ ಇಲ್ಲ? * ಕೈಗಡಿಯಾರ * ಟ್ಯಾಬ್ಲೆಟ್‌, ಮೊಬೈಲ್‌, ಕ್ಯಾಲ್ಕುಲೇಟರ್‌, ಬ್ಲೂಟೂಥ್ * ಉದ್ದ ತೋಳಿನ ಉಡುಪು * ಶೂ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.