ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆ: ಪೂರ್ವಸಿದ್ಧತೆ ಹೀಗಿರಲಿ ಬಸವರಾಜ್‌ ಎಸ್‌. ಪ್ರತಿ ವರ್ಷದಂತೆ ಈ ವರ್ಷವೂ ಮೇ 28ರಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಪರೀಕ್ಷೆ(ಪ್ರಿಲಿಮ್ಸ್‌) ನಡೆಸುತ್ತಿದೆ. ಪ್ರಸಕ್ತ ವರ್ಷ 180 ಐಎಎಸ್‌, 200 ಐಪಿಎಸ್‌ ಸೇರಿದಂತೆ 1105 ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ಪ್ರತಿ ವರ್ಷ ಸರಿ ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ 10 ಸಾವಿರ ಸ್ಪರ್ಧಾರ್ಥಿಗಳು ಮಾತ್ರ ಪ್ರಾಥಮಿಕ ಹಂತವನ್ನು ದಾಟುತ್ತಾರೆ. ಹಾಗಾದರೆ ನಿಜವಾಗಿಯೂ ಈ ಹಂತವನ್ನು ಭೇದಿಸುವುದು ಕಷ್ಟಕರವೇ? ಖಂಡಿತವಾಗಿಯೂ ಇಲ್ಲ. ಇದಷ್ವೇ ಅಲ್ಲ, ಯಾವುದೇ ಪರೀಕ್ಷೆಯೂ ಕಷ್ಟಕರವಲ್ಲ ಆದರೆ ಸಮಸ್ಯೆಯಿರುವುದು ಪರೀಕ್ಷೆಗಾಗಿ ನಡೆಸುವ ವಿಧಾನದಲ್ಲಿ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಡೆಸುವ ತಯಾರಿಯಲ್ಲಿ, ಅಭ್ಯರ್ಥಿಗಳು ತಮ್ಮ ಸ್ಮರಣಶಕ್ತಿಗಿಂತ, ತಾರ್ಕಿಕ ಚಿಂತನೆಯನ್ನು ಹೆಚ್ಚು ನಂಬಬೇಕು. ಉದಾಹರಣೆಗೆ, ಕಳೆದ ವರ್ಷದ ಪರೀಕ್ಷೆಯಲ್ಲಿ ‘ಗ್ರೀನ್ ವಾಷಿಂಗ್‘ ಎಂಬ ಪದದ ಬಗ್ಗೆ ಒಂದು ಪ್ರಶ್ನೆಯಿತ್ತು - ಇಂತಹ ಪ್ರಶ್ನೆಗೆ ನಮ್ಮ ಸ್ಮರಣೆಯ ಬದಲಾಗಿ ಸಾಮಾನ್ಯ ಜ್ಞಾನದಿಂದ ಉತ್ತರಿಸಬೇಕು. ಆದರೆ ಹೆಚ್ಚಿನ ಅಭ್ಯರ್ಥಿಗಳಿಗೆ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟಕರವಾಗಿತ್ತು . ಏಕೆಂದರೆ ತಮ್ಮ ಸ್ವಂತ ಅವಲೋಕನಾ ಕೌಶಲವನ್ನು ಬಳಸದೇ, ಪುಸ್ತಕದಲ್ಲಿ ಓದಿದ್ದನ್ನು ಮಾತ್ರ ನಂಬಿದ್ದರು. ಇದು ಅಭ್ಯರ್ಥಿಗಳ ಇಂದಿನ ದೊಡ್ಡ ಸಮಸ್ಯೆ. ಹಾಗಾಗಿ, ನಾವು ಈ ಪರೀಕ್ಷಾ ಪ್ರಕ್ರಿಯೆಯನ್ನು ಆನಂದಿಸುವ ಹಾಗೂ ಪರೀಕ್ಷೆಯ ಬಗೆಗಿರುವ ಆತಂಕವನ್ನು ಹೋಗಲಾಡಿಸುವ ಮನಸ್ಥಿತಿಯನ್ನು ಅಭ್ಯರ್ಥಿಗಳಲ್ಲಿ ನಿರ್ಮಾಣ ಮಾಡಬೇಕಿದೆ. ಪರೀಕ್ಷಾ ಪಠ್ಯಕ್ರಮ ಮತ್ತು ಹಿಂದಿನ ವರ್ಷದ‌ ಪ್ರಶ್ನಾಪತ್ರಿಕೆಗಳ ಮೇಲೆ ಹೆಚ್ಚಿನ ಗಮನ ನೀಡಿ. ಕೇವಲ ತರಬೇತಿ ಸಂಸ್ಥೆಗಳ ಆಧ್ಯಯನ ಸಾಮಗ್ರಿಗಳನ್ನು ಅವಲಂಬಿಸಬೇಡಿ. ಪತ್ರಿಕೆ- ರಲ್ಲಿನ ಶೇ 75 ಪ್ರಶ್ನೆಗಳು ಪಠ್ಯಕ್ರಮದ ಸ್ಥಿರ ಭಾಗದಿಂದ ಬರುತ್ತವೆ ಆದ್ದರಿಂದ ರಾಜಕೀಯ, ಆರ್ಥಿಕತೆ, ಆಧುನಿಕ ಭಾರತದ ಇತಿಹಾಸ, ಪರಿಸರ, ಭೂಗೋಳ ಹಾಗೂ ಕಲೆ ಮತ್ತು ಸಂಸ್ಕೃತಿಯಂತಹ ಪ್ರಮುಖ ವಿಷಯಗಳನ್ನು ನಿರ್ಲಕ್ಷ್ಯಿಸಬೇಡಿ. ಪ್ರಚಲಿತ ವಿದ್ಯಮಾನಗಳು ಪತ್ರಿಕೆ- ರಲ್ಲಿನ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ಕಳೆದ 6 ತಿಂಗಳ ವಸ್ತುನಿಷ್ಠ ಪ್ರಸ್ತುತ ಘಟನೆಗಳನ್ನು ಅಧ್ಯಯನ ಮಾಡಿ. ಪತ್ರಿಕೆ- () ಅರ್ಹತೆ ಪಡೆಯಲು ಶೇ 33.33 ಅಂಕಗಳ ಅಗತ್ಯವಿದ್ದರೂ, ವರ್ಷದಿಂದ ವರ್ಷಕ್ಕೆ ಈ ಪತ್ರಿಕೆಯನ್ನು ಭೇದಿಸುವುದು ಕಷ್ಟವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯವೆಂದರೆ ಮೊದಲು ಸುಲಭವಾದ ಪ್ರಶ್ನೆಗಳನ್ನು ಉತ್ತರಿಸಿ, ನಂತರ ಕಷ್ಟಕರವಾದ ಪ್ರಶ್ನೆಗಳನ್ನು ಉತ್ತರಿಸಬೇಕು. ಜನರಲ್ ಮೆಂಟಲ್ ಎಬಿಲಿಟಿ, ಲಾಜಿಕಲ್ ರೀಸನಿಂಗ್ ಮತ್ತು ರೀಡಿಂಗ್ ಕಾಂಪ್ರಹೆನ್ಷನ್‌ನಂತಹ ಮುಖ್ಯ ವಿಷಯಗಳ ಮೇಲೆ ಗಮನಹರಿಸಬೇಕು. ಸ್ಮೃತಿ (ನೆನಪಿನ) ಆಧಾರಿತ ಓದುವಿಕೆಗಿಂತ ಪರಿಕಲ್ಪನಾ ಸ್ಪಷ್ಟತೆಯ (ಕಾನ್ಸೆಪ್ಟ್‌) ಮೇಲೆ ಕೇಂದ್ರೀಕರಿಸಿ, ಏಕೆಂದರೆ ಯುಪಿಎಸ್‌ಸಿಯು ತಾರ್ಕಿಕ ಚಿಂತನೆಯುಳ್ಳ ನಾಗರಿಕ ಸೇವಕರನ್ನು ಅಪೇಕ್ಷಿಸುತ್ತದಯೇ ಹೊರತು ಕೇವಲ ಗಿಳಿ ಪಾಠ ಒಪ್ಪಿಸುವವರನ್ನಲ್ಲ. ಈ ಪರೀಕ್ಷೆಯ ಪಠ್ಯಕ್ರಮವು ಎಷ್ಟು ವಿಸ್ತಾರವಾಗಿದೆ ಎಂದರೆ ಯುಪಿಎಸ್‌ಸಿಯು ಸೂರ್ಯನ ಕೆಳಗೆ ಬರುವ ಯಾವುದೇ ವಿಷಯವನ್ನು ಕೇಳಬಹುದು. ಆದ್ದರಿಂದ ಸ್ಪರ್ಧಾರ್ಥಿಗಳು 'ತಮಗೆ ಏನು ಗೊತ್ತು ಮತ್ತು ಏನು ತಿಳಿದಿಲ್ಲ' ಎಂಬ ಸ್ಪಷ್ಟತೆಯನ್ನು ಹೊಂದಿರಬೇಕು. ಈ ಸ್ಪಷ್ಟತೆಯು ತಾರ್ಕಿಕ ದೃಷ್ಟಿಕೋನದಿಂದ ಪ್ರಶ್ನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ಕನಿಷ್ಠ ಶೇ 20 ಪ್ರಶ್ನೆಗಳು ಪತ್ರಿಕೆ- ರಲ್ಲಿ ವಾಸ್ತವಿಕ ಮಾಹಿತಿಯನ್ನು ಆಧರಿಸಿರುತ್ತವೆ. ಆದ್ದರಿಂದ ಅಭ್ಯರ್ಥಿಗಳು ಸಮೀಕ್ಷೆಯ ಮಾಹಿತಿ, ಇತ್ತೀಚಿಗೆ ಸುದ್ದಿಯಲ್ಲಿರುವ ಸ್ಥಳಗಳು ಮುಂತಾದ ಪ್ರಮುಖ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಮಾನವನ ಸ್ಮರಣಾ ಶಕ್ತಿ ಸೀಮಿತವಾಗಿದೆ. ಆದ್ದರಿಂದ ನಾವು ಪ್ರಮುಖ ವಾಸ್ತವಿಕ ಮಾಹಿತಿಗೆ ಆದ್ಯತೆ ನೀಡಬೇಕು ಮತ್ತು ಜ್ಞಾಪಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಉತ್ಸಾಹದ ಮನಸ್ಥಿತಿಯನ್ನು ಹೊಂದಲು ಕನಿಷ್ಠ ಕಳೆದ ಐದು ವರ್ಷಗಳ ಪೂರ್ವಭಾವಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಬೇಕು. ಬಹು ಆಯ್ಕೆಯ ಪ್ರಶ್ನೆಗಳಲ್ಲಿ () ತಾರ್ಕಿಕವಾಗಿ ಸರಿಯಾದ ಉತ್ತರವನ್ನು ಪಡೆಯುವ ಕೌಶಲವನ್ನು ಕಲಿಯಿರಿ. • ನಿಮ್ಮನ್ನು ನೀವು ನಂಬಿ, ಅದುವೇ ನಿಮ್ಮ ಯಶಸ್ಸಿನ ಕೀಲಿಕೈ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.