ಬೆಂಗಳೂರಿನ ತನ್ನ ಅತಿದೊಡ್ಡ ಕಚೇರಿಯನ್ನು ತೆರವು ಮಾಡಿದ ಬೈಜೂಸ್! ಬೆಂಗಳೂರು: ದೇಶದ ಅತಿ ದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜೂಸ್‌ ( ) ಬೆಂಗಳೂರಿನಲ್ಲಿನ ತನ್ನ ದೊಡ್ಡದಾದ ಒಂದು ಕಚೇರಿಯನ್ನು ಸಂಪೂರ್ಣ ತೆರವು ಮಾಡಿದೆ. ವೆಚ್ಚ ಕಡಿತ ಹಾಗೂ ಬಂಡವಾಳ ಹರಿವು ಹೆಚ್ಚಿಸಲು ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮನಿಕಂಟ್ರೋಲ್.ಕಾಮ್ ವೆಬ್‌ಸೈಟ್ ವರದಿ ಮಾಡಿದೆ. ಬೆಂಗಳೂರು ಹೊರವಲಯದ ಬ್ರೂಕ್‌ಫಿಲ್ಡ್‌ನ () ಕಲ್ಯಾಣಿ ಟೆಕ್‌ ಪಾರ್ಕ್‌ನಲ್ಲಿದ್ದ 5.58 ಲಕ್ಷ ಚದರ ಅಡಿ ಜಾಗ ಹೊಂದಿದ್ದ ಕಚೇರಿಯನ್ನು ಬೈಜೂಸ್ ಬಂದ್ ಮಾಡಿದೆ. ಇದರ ಬದಲು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಂ ಆಯ್ಕೆ ಹಾಗೂ ಬೆಂಗಳೂರಿನ ಬನ್ನೇರುಘಟ್ಟದ ಮುಖ್ಯ ಕಚೇರಿ ಸೇರಿದಂತೆ ದೇಶದ ಇತರ ಕಚೇರಿಗಳಿಂದ ಕೆಲಸ ಮಾಡಲು ಬೈಜೂಸ್ ಸೂಚಿಸಿದೆ. ಅಲ್ಲದೇ ಬೆಂಗಳೂರಿನ ಪ್ರೆಸ್ಟೀಜ್ ಟೆಕ್ ಪಾರ್ಕ್‌ನಲ್ಲಿರುವ ತನ್ನ ಒಂಬತ್ತು ಮಹಡಿಗಳ ಕಚೇರಿಯಲ್ಲಿ ಎರಡು ಮಹಡಿಗಳನ್ನು ಬಾಡಿಗೆಗೆ ಬಿಟ್ಟು ಕೊಟ್ಟಿದೆ. ಬೈಜೂಸ್ ಭಾರತಾದ್ಯಂತ ಒಟ್ಟು 30 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.