ಲೆಗ್ರಾಂಡ್ ಎಂಪವರಿಂಗ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2023-24 ಲೆಗ್ರಾಂಡ್ ಎಂಪವರಿಂಗ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2023-24 ವಿವರ: ಭಾರತದಾದ್ಯಂತ ಬಿ.ಟೆಕ್/ಬಿ.ಇ/ಬಿ.ಆರ್ಕ್, ಇತರೆ ಕೋರ್ಸ್‌ಗಳನ್ನು (ಬಿಬಿಎ/ಬಿ.ಕಾಮ್/ಬಿ.ಎಸ್‌‍ಸಿ- ಗಣಿತ ಮತ್ತು ವಿಜ್ಞಾನ) ಮುಂದುವರಿಸಲು ಅರ್ಜಿ ಸಲ್ಲಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಂದ ಲೆಗ್ರಾಂಡ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫೈನಾನ್ಸ್ ಮತ್ತು ಸೈನ್ಸಸ್‌‌‍ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಉದ್ದೇಶಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ಅರ್ಹತೆ: ವಿದ್ಯಾರ್ಥಿವೇತನವು ಭಾರತದಾದ್ಯಂತ ಬಾಲಕಿಯರಿಗೆ ಮುಕ್ತವಾಗಿದೆ. ಅರ್ಜಿದಾರರು ಬಿ.ಟೆಕ್/ ಬಿ.ಇ/ ಬಿ.ಆರ್ಕ್/ ಬಿಬಿಎ/ ಬಿ.ಕಾಮ್/ ಬಿ.ಎಸ್‍ಸಿ (ಗಣಿತ ಮತ್ತು ವಿಜ್ಞಾನ) ಪದವಿಗಳಲ್ಲಿ ಪ್ರವೇಶ ಪಡೆದಿರಬೇಕು. 2022–2023ರಲ್ಲಿ 12 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 70ಕ್ಕಿಂತ ಹೆಚ್ಚು ಅಿಂಕಗಳನ್ನು ಗಳಿಸಿರಬೇಕು. ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 5,00,000ಕ್ಕಿಂತ ಕಡಿಮೆಯಿರಬೇಕು. ಆರ್ಥಿಕ ಸಹಾಯ: ಕೋರ್ಸ್ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿನಿಯರಿಗೆ ಶೇ 60 ಕೋರ್ಸ್ ಶುಲ್ಕವನ್ನು ವರ್ಷಕ್ಕೆ ₹ 60,000ದ ವರೆಗೆ ನೀಡಲಾಗುತ್ತದೆ.ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಕೋರ್ಸ್ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ ₹ 1,00,000ದ ವರೆಗೆ ಶೇ 80 ಶುಲ್ಕ ನೀಡಲಾಗುತ್ತದೆ. *ವಿಶೇಷ ವರ್ಗ: ಅಂಗವಿಕಲ ವಿದ್ಯಾರ್ಥಿಗಳು/ಟ್ರಾನ್ಸ್ ಜೆಂಡರ್ ವಿದ್ಯಾರ್ಥಿಗಳು/ ಒಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು/ ಕೋವಿಡ್‌‍ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆ ದಿನ: 31-08-2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//LFLS7 **** ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2023 ವಿವರ: ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್‌‌‌‍, ಕೋಟಕ್ ಎಜುಕೇಶನ್ ಫೌಂಡೇಶನ್ ಇದರ ಶಿಕ್ಷಣ ಮತ್ತು ಜೀವನೋಪಾಯದ ಕುರಿತಾದ ಸಿಎಸ್‌ಆರ್ ಯೋಜನೆಯ ಅಡಿ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಪ್ರತಿಷ್ಠಿತ ಸಂಸ್ಥೆಗಳಿಂದ (ನ್ಯಾಕ್/ಎನ್‌‍ಐ‌‍ಆರ್‌‍ಎಫ್ ಮಾನ್ಯತೆ ಪಡೆದ) ವೃತ್ತಿಪರ ಕೋರ್ಸ್‌ಗಳಲ್ಲಿ 1ನೇ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ₹ 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವಂತಹ 12 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರು. 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಆರ್ಥಿಕ ಸಹಾಯ: ವರ್ಷಕ್ಕೆ ₹ 1.5 ಲಕ್ಷ ಅರ್ಜಿ ಸಲ್ಲಿಸಲು ಕೊನೆ ದಿನ: 30-09-2023 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//KKGS2 **** ಕೃಪೆ: .buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.