‘ಕೃಷಿ ಉದ್ಯಮಿ’ ತರಬೇತಿಗೆ ಅರ್ಜಿ ಆಹ್ವಾನ ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡುವ ಮತ್ತು ಲಾಭ ಹೆಚ್ಚಿಸಲು ಸಾಧ್ಯವಾಗುವ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೇರೇಪಿಸುವ ಮತ್ತು ಬೆಂಬಲ ನೀಡುವ ಮೂಲಕ ಬೇಸಾಯ ಮಾಡುವವರ ಕೈಯಲ್ಲಿ ಒಂದಿಷ್ಟು ಹಣ ಉಳಿಯುವಂತೆ ಮಾಡುವ ಪ್ರಯತ್ನವಾಗಿ, ಸಂವಾದ-ಬದುಕು ಸೆಂಟರ್ ಫಾರ್ ಲೈವ್ಲಿಹುಡ್ ಲರ್ನಿಂಗ್, ’ಕೃಷಿ ಉದ್ಯಮಿ’ ಎಂಬ ಮೂರು ತಿಂಗಳ ಸೆಮಿ ರೆಸಿಡೆನ್ಸಿಯಲ್ ಕೋರ್ಸ್ ಆಯೋಜಿಸಿದೆ. ಕೋರ್ಸ್‌ನಲ್ಲಿ ಸಾವಯವ ಗೊಬ್ಬರ, ಬೀಜ ಮತ್ತಿತರ ಕೃಷಿ ಒಳಸುರಿಗಳ ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತ ತರಬೇತಿ. ಕೃಷಿ ಉಪಕರಣಗಳು ಮತ್ತು ಬೇಸಾಯಕ್ಕೆ ಅಗತ್ಯವಿರುವ ಬೆಂಬಲ ಸೇವೆಗಳು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೇರಿದಂತೆ ವಿವಿಧ ಹಂತದಲ್ಲಿ, ಕೃಷಿ ಕ್ಷೇತ್ರದ ಕಿರು ಉದ್ಯಮ ಸಾದ್ಯತೆಗಳ ಪರಿಚಯ ಮಾಡಿಸುವುದು. ಕೃಷಿ ಕೇಂದ್ರಿತ ಉದ್ಯಮಗಳ ಪ್ರಾರಂಭ, ಮಾರುಕಟ್ಟೆ ನಿರ್ವಹಣೆ, ಉದ್ಯಮ ನಿರ್ವಹಣೆ , ಹಣಕಾಸು ನಿರ್ವಹಣೆ ಕೌಶಲ್ಯಗಳನ್ನು ಕಲಿಸಲಾಗುವುದು. ಅನುಭವಿ ಉದ್ಯಮಿಗಳ ಕ್ಷೇತ್ರ ಭೇಟಿ, ಕ್ಷೇತ್ರದ ತಜ್ಞರೊಂದಿಗೆ ಮಾತುಕತೆ, ಪ್ರಾಯೋಗಿಕ ತರಗತಿಗಳು ಕೋರ್ಸ್‌ನ ಕಲಿಕಾ ವಿಧಾನವಾಗಿದೆ. ಈ ಮೂಲಕ, ಯುವಜನರು ಕೃಷಿ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಳ್ಳುವಂತೆ ಉತ್ತೇಜಿಸುವುದು ಮತ್ತು ಈ ಮೂಲಕ ಕೃಷಿಕರ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗುವಂತೆ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಜುಲೈ 22. ಆಯ್ಕೆ ಪ್ರಕ್ರಿಯೆ ನಂತರ ಆಗಸ್ಟ್ ಮೊದಲ ವಾರದಿಂದ ಕೋರ್ಸ್ ಪ್ರಾರಂಭವಾಗಲಿದೆ. ಮಾಹಿತಿಗಾಗಿ ಸಂಪರ್ಕಿಸಿ 9611562812, 8105818026 ಕರೆಮಾಡಬಹುದು ಅಥವಾ .@. ಗೆ ಮೇಲ್ ಕಳಿಸಬಹುದು. ಇಲ್ಲವೇ, ಸಂವಾದ, ಬಂಜಾರಪಾಳ್ಯ, ಅಗರ ಗ್ರಾಮ, ತಾತಗುಣಿ ಅಂಚೆ, ಬೆಂಗಳೂರು ಉತ್ತರ -82 ಇಲ್ಲಿಗೆ ಖುದ್ದಾಗಿ ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.